ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾ ಹಿಂದುಗಳ ಮೇಲಿನ ದಾಳಿ ಪ್ರಕರಣ: ತಪ್ಪೊಪ್ಪಿಕೊಂಡ ಆರೋಪಿಗಳು

|
Google Oneindia Kannada News

ಢಾಕಾ, ಅಕ್ಟೋಬರ್ 25: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದು ಸಮುದಾಯದ ವಿರುದ್ಧ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಮುಖ ಶಂಕಿತ ಆರೋಪಿ ಮತ್ತು ಆತನ ಸಹಚರನ ವಿಚಾರಣೆಯಲ್ಲಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೈಕತ್ ಮಂಡಲ್ ಭಾನುವಾರ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈತ ತನ್ನ ಫೇಸ್‌ಬುಕ್‌ನಲ್ಲಿ ಅಕ್ಟೋಬರ್ 17 ರಂದು ಹಂಚಿಕೊಂಡ ಪೋಸ್ಟ್‌ ದುರ್ಗಾಪೂಜಾ ಹಬ್ಬದ ಸಂದರ್ಭದಲ್ಲಿ ಪಿರ್‌ಗಂಜ್ ಉಪ ಜಿಲ್ಲೆಯ ರಂಗ್‌ಪುರದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು.

ಶೈಕತ್ ಮಂಡಲ್ ಯಾರು?: ಶೈಕತ್ ಮಂಡಲ್ ನ ಸಹಚರ ರಬಿಯುಲ್ (36) ಇಸ್ಲಾಂ ಪಾದ್ರಿಯಾಗಿದ್ದು, ಈತನ ವಿರುದ್ಧ ಬೆಂಕಿ ಹಚ್ಚಿದ ಮತ್ತು ಲೂಟಿ ಮಾಡಿದ ಆರೋಪವಿದೆ. "ಶೈಕತ್ ಮಂಡಲ್ ಮತ್ತು ಅವರ ಸಹಚರ ರಬಿಯುಲ್ ಇಸಾಮ್ ಅವರು (ವಾಯುವ್ಯ) ರಂಗ್‌ಪುರದಲ್ಲಿ ಹಿರಿಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದೆಲ್ವಾರ್ ಹೊಸೈನ್ ಅವರ ಮುಂದೆ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ" ಎಂದು ನ್ಯಾಯಾಲಯದ ಅಧಿಕಾರಿ ಹೇಳಿದರು.

ಗಾಜಿಪುರದಲ್ಲಿ ಪೊಲೀಸ್ ದಾಳಿಯಲ್ಲಿ ಬಂಧನ

ಗಾಜಿಪುರದಲ್ಲಿ ಪೊಲೀಸ್ ದಾಳಿಯಲ್ಲಿ ಬಂಧನ

ಘಟನೆ ನಡೆದ ದಿನದಂದು ಇವರನ್ನು ಗಾಜಿಪುರದಲ್ಲಿ ಪೊಲೀಸ್ ದಾಳಿಯಲ್ಲಿ ಬಂಧಿಸಲಾಯಿತು. ಈತನ ವಿರುದ್ಧ ಡಿಜಿಟಲ್ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶೈಕಾತ್ ಮಂಡಲ್ ಸಹಾಯ ಪಡೆದ ರಬಿಯುಲ್ ಇಸ್ಲಾಂ ಶುಕ್ರವಾರದಂದು ಧ್ವನಿವರ್ಧಕದಲ್ಲಿ ಘೋಷಣೆಗಳ ಮೂಲಕ ಗ್ರಾಮದಲ್ಲಿ ಮುಸ್ಲಿಮರನ್ನು ಪ್ರೇರೇಪಿಸಲು ಸಹಾಯ ಮಾಡಿದ್ದಾರೆ.

ಶೈಕತ್ ಮಂಡಲ್ ರಂಗ್‌ಪುರದ ಕಾರ್ಮೈಕಲ್ ಕಾಲೇಜಿನ ತತ್ವಶಾಸ್ತ್ರ ವಿಭಾಗದ ವಿದ್ಯಾರ್ಥಿಯಾಗಿದ್ದು, ತನ್ನ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಲು ಅವರು ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ವಿಷಯವನ್ನು ಅಪ್‌ಲೋಡ್ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಪಿರ್‌ಗಂಜ್‌ನಲ್ಲಿ ಹಿಂದೂ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಧಾರ್ಮಿಕವಾಗಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ್ದಾರೆ ಎಂಬ ವದಂತಿಯು ಹಬ್ಬಿದ ನಂತರ ಹಿಂಸಾಚಾರವನ್ನು ಪ್ರಚೋದಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಅಕ್ಟೋಬರ್ 17 ರಂದು ಸಂಭವಿಸಿದ ಅನಾಹುತದಲ್ಲಿ ಸುಮಾರು 70 ಹಿಂದೂ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಘಟನೆ ಏನು?

ಘಟನೆ ಏನು?

ಹಿಂದೂ ದೇವರ ಪೂಜೆ ವೇಳೆ ಇಸ್ಲಾಂ ಪವಿತ್ರ ಗ್ರಂಥಕ್ಕೆ ಅಗೌರವ ಸೂಚಿಸಲಾಗಿದೆ ಎನ್ನುವ ಸುಳ್ಳು ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪರಿಣಾಮ ನವರಾತ್ರಿ ದುರ್ಗಾ ಪೂಜೆ ವೇಳೆ ಹಿಂಸಾಚಾರ ಭುಗಿಲೆದಿತ್ತು. ಹಿಂದೂ ವಿಗ್ರಹಗಳನ್ನು ಧ್ವಂಸ ಮಾಡಲಾಯಿತು. ಮೂವರನ್ನ ಕೊಲೆ ಮಾಡಲಾಯಿತು. ಹಿಂಸಾಚಾರ ಭುಗಿಲೆದ್ದು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಲಾಯಿತು. ಈ ಹಿಂಸಾಚಾರದಲ್ಲಿ ಅಪಾರ ಆಸ್ತಿ ಹಾನಿಗೊಳಗಾಗಿದೆ. ಉದ್ವೇಗ ಗುಂಪು ಪೂಜಾ ಪೆಂಡಾಲ್‌ಗಳನ್ನು ಧ್ವಂಸಗೊಳಿಸಿವೆ. ಅಕ್ಟೋಬರ್ 13 ರಂದು ಸಾಮಾಜಿಕ ಮಾಧ್ಯಮದಲ್ಲಿ ಆಪಾದಿತ ಧರ್ಮನಿಂದೆಯ ಪೋಸ್ಟ್ ವೈರಲ್ ಆದ ನಂತರ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ದಾಳಿಗಳು ವರದಿಯಾಗಿವೆ.

 ಪ್ರಕರಣದಲ್ಲಿ 683 ಜನರನ್ನು ಬಂಧನ

ಪ್ರಕರಣದಲ್ಲಿ 683 ಜನರನ್ನು ಬಂಧನ

ಇದುವರೆಗೆ ಪೂರ್ವ-ವಿಚಾರಣೆಯ ಕಾನೂನು ಪ್ರಕ್ರಿಯೆಗಳ ಅಡಿಯಲ್ಲಿ ಕನಿಷ್ಠ ಏಳು ಜನರು ತಮ್ಮ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದಲ್ಲಿ 683 ಜನರನ್ನು ಬಂಧಿಸಲಾಗಿದ್ದು 24,000 ಶಂಕಿತರು ಎಂದು ಆರೋಪಿಸಲಾಗಿದೆ. ಜೊತೆಗೆ 70 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಅನಾಮಧೇಯರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.


ಶೈಕತ್ ಮಂಡಲ್ ಮತ್ತು ರಬಿಯುಲ್ ಇಸ್ಲಾಂ ಅವರಲ್ಲದೆ, ಕುಮಿಲ್ಲಾದ ದುರ್ಗಾ ಪೂಜೆಯ ಸ್ಥಳದಲ್ಲಿ ಕುರಾನ್ ಅನ್ನು ಇರಿಸಿದ್ದ ಎಂದು ಆರೋಪಿಸಲಾದ ಇಕ್ಬಾಲ್ ಹೊಸೈನ್ ಮತ್ತು ಪೂಜಾ ಸ್ಥಳದಲ್ಲಿ ಕುರಾನ್‌ನ ವೀಡಿಯೊವನ್ನು ಪೋಸ್ಟ್ ಮಾಡಿದ ಫಯೇಜ್ ಅಹ್ಮದ್ ಅವರೂ ಕೂಡ ಪೊಲೀಸರು ಕಸ್ಟಡಿಯಲ್ಲಿದ್ದಾರೆ.

ಏಕತಾ ಮಂಡಳಿ ಉಪವಾಸ

ಏಕತಾ ಮಂಡಳಿ ಉಪವಾಸ

ಈ ಹಿಂಸಾಚಾರದ ಬಳಿಕ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಸದಸ್ಯರು ಬಾಂಗ್ಲಾದೇಶದ ಹಿಂದೂ-ಬೌದ್ಧ-ಕ್ರಿಶ್ಚಿಯನ್ ಏಕತಾ ಮಂಡಳಿಯ ಬ್ಯಾನರ್ ಅಡಿಯಲ್ಲಿ ಕೇಂದ್ರ ಢಾಕಾದ ಶಾಬಾಗ್ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ಸಾಮೂಹಿಕ ಉಪವಾಸ ಮತ್ತು ಧರಣಿ ಪ್ರದರ್ಶನವನ್ನು ನಡೆಸಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ವಿಶ್ವಸಂಸ್ಥೆಯು ವ್ಯಾಪಕವಾಗಿ ಖಂಡಿಸಿದೆ.

ಕಳೆದ ವಾರ, ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ತನ್ನ ಗೃಹ ಸಚಿವರಿಗೆ ಧರ್ಮವನ್ನು ಬಳಸಿ ಹಿಂಸೆಯನ್ನು ಪ್ರಚೋದಿಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಅವರು ಸತ್ಯವನ್ನು ಪರಿಶೀಲಿಸದೆ ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ನಂಬಬೇಡಿ ಎಂದು ಜನರನ್ನು ಕೇಳಿಕೊಂಡರು.

English summary
A key suspect and his accomplice accused of inciting communal hatred on social media and instigating the recent violence against the minority Hindu community in Bangladesh have confessed to their crime in a pre-trial hearing, a court official has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X