ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಸಂಪುಟ ಮಾಹಿತಿ: ಯಾರಿಗೆ ಯಾವ ಸ್ಥಾನ?

|
Google Oneindia Kannada News

ಕಾಬೂಲ್, ಸಪ್ಟೆಂಬರ್ 7: ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ.

ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾಗೆ ದೇಶದ ನಾಯಕತ್ವವನ್ನು ನೀಡಲಾಗಿದೆ.

ಅಫ್ಘಾನ್ ಸರ್ಕಾರದ ಮುಖ್ಯಸ್ಥ ಹಸನ್ ಅಖುಂದಾ ಬಗ್ಗೆ ತಿಳಿಯಿರಿ ಅಫ್ಘಾನ್ ಸರ್ಕಾರದ ಮುಖ್ಯಸ್ಥ ಹಸನ್ ಅಖುಂದಾ ಬಗ್ಗೆ ತಿಳಿಯಿರಿ

ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಹೊಸ ತಾಲಿಬಾನ್ ಸರ್ಕಾರದಲ್ಲಿ ಯಾರು ಯಾರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.

ಪ್ರಧಾನಿ - ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ

ಪ್ರಧಾನಿ - ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ

ತಾಲಿಬಾನ್ ಆಧ್ಯಾತ್ಮಿಕ ನಾಯಕ ಶೇಖ್ ಹಿಬತುಲ್ಲಾ ಅಖುಂದ್ಜಾಡಾ ಜೊತೆಗೆ ಆಪ್ತರಾಗಿ ಗುರುತಿಸಿಕೊಂಡಿದ್ದ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೊಸ ಸರ್ಕಾರದ ಪ್ರಧಾನಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ತಾಲಿಬಾನಿಗಳ ಜನ್ಮಸ್ಥಳವಾದ ಕಂದಹಾರ್‌ನವನು ಹಾಗೂ ಸಶಸ್ತ್ರ ಚಳುವಳಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ತಾಲಿಬಾನ್‌ನ ನಾಯಕತ್ವ ಮಂಡಳಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿರುವ "ರೆಹಬರಿ ಶುರಾ" ವನ್ನು 20 ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ 2001ರಲ್ಲಿ ಯುಎಸ್ ಜೊತೆಗಿನ ಯುದ್ಧ ಪ್ರಾರಂಭವಾಗುವ ಮೊದಲು ತಾಲಿಬಾನ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.

ಉಪ ಪ್ರಧಾನಿ - ಅಬ್ದುಲ್ ಘನಿ ಬರಾದಾರ್

ಉಪ ಪ್ರಧಾನಿ - ಅಬ್ದುಲ್ ಘನಿ ಬರಾದಾರ್

ತಾಲಿಬಾನ್ ಸಹ ಸಂಸ್ಥಾಪಕರಾದ ಅಬ್ದುಲ್ ಘನಿ ಬರಾದಾರ್ ಹೊಸ ಸರ್ಕಾರದಲ್ಲಿ ಉಪ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 1970ರ ಉತ್ತರಾರ್ಧದಲ್ಲಿ ಸೋವಿಯತ್ ದೇಶದ ಆಕ್ರಮಣದಿಂದ ಬರಾದಾರ್ ಜೀವನವು ಸಹಜವಾಗಿ ಎಲ್ಲ ಅಫ್ಘನ್ನರಂತೆ ಶಾಶ್ವತವಾಗಿ ಬದಲಾಯಿತು. ಆತನಲ್ಲಿ ಬಂಡಾಯಗಾರನ ಮನೋಭಾವನ್ನು ಸೃಷ್ಟಿಸಿತು. ಈತ ಮುಲ್ಲಾ ಒಮರ್ ಜೊತೆಗಿನ ಆಪ್ತ ಹೋರಾಟಗಾರ ಎಂದು ನಂಬಲಾಗಿತ್ತು. 1990ರ ಆರಂಭದಲ್ಲಿ ಸೋವಿಯತ್ ವಾಪಸ್ ತೆರಳಿದ ನಂತರದಲ್ಲಿ ನಡೆದ ಅಂತರ್ಯುದ್ಧದ ಗೊಂದಲ ಮತ್ತು ಭ್ರಷ್ಟಾಚಾರದ ಸಮಯದಲ್ಲಿ ಇಬ್ಬರೂ ತಾಲಿಬಾನ್ ಚಳುವಳಿಗೆ ಇಳಿದರು.

2001 ರಲ್ಲಿ ಯುಎಸ್ ನೇತೃತ್ವದ ಪಡೆಗಳು ತಾಲಿಬಾನ್ ಆಡಳಿತವನ್ನು ಉರುಳಿಸಿದ ನಂತರ, ಭಯೋತ್ಪಾದಕರು ಹೊಸ ಆಡಳಿತ ಸ್ಥಾಪಿಸುವ ನಿಟ್ಟಿನಲ್ಲಿ ಸಂಭಾವ್ಯ ಒಪ್ಪಂದದೊಂದಿಗೆ ಹಂಗಾಮಿ ನಾಯಕ ಹಮೀದ್ ಕರ್ಜಾಯ್ ಅವರನ್ನು ಸಂಪರ್ಕಿಸಿದ ಸಣ್ಣ ಗುಂಪಿನ ಬಂಡಾಯಗಾರರಲ್ಲಿ ಬರಾದಾರ್ ಒಬ್ಬರು ಎಂದು ಹೇಳಲಾಗುತ್ತದೆ. 2010ರ ವೇಳೆ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾದ ಬರಾದಾರ್ ಅನ್ನು ಒತ್ತಡದ ನಂತರ 2018ರಲ್ಲಿ ಬಿಡುಗಡೆಗೊಳಿಸಿ ಕ್ವಾತಾರ್ ಗೆ ಕಳುಹಿಸಲಾಗಿತ್ತು. ಅವರನ್ನು ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಯುನೈಟೆಡ್ ಸ್ಟೇಟ್ಸ್ ಜೊತೆ ಸೇನೆ ಹಿಂತೆಗೆದುಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರು.

ರಕ್ಷಣಾ ಸಚಿವ - ಮುಲ್ಲಾ ಯಾಕೂಬ್

ರಕ್ಷಣಾ ಸಚಿವ - ಮುಲ್ಲಾ ಯಾಕೂಬ್

ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಒಮರ್ ಪುತ್ರ, ಮುಲ್ಲಾ ಯಾಕೂಬ್ ಈ ಗುಂಪಿನ ಪ್ರಬಲ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿದ್ದರು. ರಕ್ಷಣಾ ವಲಯದಲ್ಲಿ ಅನುಭವ ಹೊಂದಿರುವ ಯಾಕೂಬ್ ರಿಗೆ ರಕ್ಷಣಾ ಸಚಿವ ಸ್ಥಾನವನ್ನು ನೀಡಲಾಗಿದೆ. ಯಾಕೂಬ್ ತಂದೆ ತಾಲಿಬಾನ್ ನಾಯಕನಾಗಿ ಪೂಜ್ಯನೀಯ ಸ್ಥಾನಮಾನವನ್ನು ಹೊಂದಿದ್ದರು. ಆ ಪ್ರಬಲ ವಂಶಾವಳಿಯಿಂದ ಬಂದಿರುವುದೇ ಯಾಕೂಬ್ ಅವರಲ್ಲಿ ಒಂದುಗೂಡಿಸುವ ಶಕ್ತಿ ಸಾಮರ್ಥ್ಯಕ್ಕೆ ಬೆಂಬಲವಾಗಿ ನಿಂತುಕೊಂಡಿತು.

ಆಂತರಿಕ ಸಚಿವ - ಸಿರಾಜುದ್ದೀನ್ ಹಕ್ಕಾನಿ

ಆಂತರಿಕ ಸಚಿವ - ಸಿರಾಜುದ್ದೀನ್ ಹಕ್ಕಾನಿ

ಸೋವಿಯತ್ ವಿರೋಧಿ ಜಿಹಾದ್‌ನ ಪ್ರಸಿದ್ಧ ಕಮಾಂಡರ್ ಪುತ್ರನಾಗಿ ತಾಲಿಬಾನ್‌ನ ಉಪ ನಾಯಕ ಮತ್ತು ಶಕ್ತಿಯುತ ಹಕ್ಕಾನಿ ಜಾಲದ ಮುಖ್ಯಸ್ಥರಾಗಿ ಸಿರಾಜುದ್ದೀನ್ ಹಕ್ಕಾನಿ ಪ್ರಬಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರನ್ನು ಆಂತರಿಕ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಹಕ್ಕಾನಿ ಜಾಲವು ಯುಎಸ್ ನಿಯೋಜಿತ ಭಯೋತ್ಪಾದಕ ಗುಂಪಾಗಿದ್ದು, ಇದನ್ನು ಅಫ್ಘಾನಿಸ್ತಾನದಲ್ಲಿ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಗುಂಪು ಎಂದು ಪರಿಗಣಿಸಲಾಗುತ್ತದೆ. ಆತ್ಮಾಹುತಿ ಬಾಂಬರ್‌ಗಳ ಬಳಕೆಯಲ್ಲಿ ಈ ಜಾಲವು ಅತ್ಯಂತ ಕುಖ್ಯಾತಿಯನ್ನು ಪಡೆದಿದೆ. ಕಳೆದ ಕೆಲವು ವರ್ಷಗಳಲ್ಲಿ ಕಾಬೂಲ್‌ನಲ್ಲಿ ನಡೆದ ಭೀಕರ ದಾಳಿಗಳಲ್ಲಿ ಈ ಜಾಲದ ಕೈವಾಡವಿರುವ ಶಂಕೆಯಿದೆ.

ತಮ್ಮ ಸ್ವಾತಂತ್ರ್ಯ, ಹೋರಾಟದ ಚಾಣಾಕ್ಷತೆ ಮತ್ತು ಜಾಣತನದ ವ್ಯಾಪಾರ ವ್ಯವಹಾರಗಳಿಗೆ ಹೆಸರುವಾಸಿಯಾಗಿರುವ ಹಕ್ಕಾನಿಗಳು ಮುಖ್ಯವಾಗಿ ಪೂರ್ವ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದಾರೆ ಮತ್ತು ತಾಲಿಬಾನ್ ನಾಯಕತ್ವ ಮಂಡಳಿಯ ಮೇಲೆ ಗಣನೀಯ ಹಿಡಿತ ಹೊಂದಿದ್ದಾರೆ.

English summary
Key Rulers In The Taliban's New Government; Here Read More Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X