ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಮಾಜಿ ಅಧ್ಯಕ್ಷ ಕೆನಡಿ ಹತ್ಯೆ ಆರೋಪಿಗೂ ಸಿಐಎಗೂ ಇಲ್ಲ ಸಂಬಂಧ

By ವಿಕಾಸ್ ನಂಜಪ್ಪ
|
Google Oneindia Kannada News

ವಾಷಿಂಗ್ಟನ್, ನವೆಂಬರ್ 5: ಅಮೆರಿಕಾ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆಯಲ್ಲಿ ಲೀ ಹಾರ್ವೇ ಓಸ್ವಾಲ್ಡ್ ಮತ್ತು ಸಿಐಎ (ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ) ನಡುವೆ ಸಂಬಂಧವಿದ್ದಿದ್ದಕ್ಕೆ ಯಾವುದೇ ಆಧಾರಗಳಿಲ್ಲ. ಹೀಗಂತ ಶುಕ್ರವಾರ ಬಿಡುಗಡೆಯಾದ 'ಜಾನ್ ಎಫ್ ಕೆನಡಿ ಅಸಾಸಿನೇಷನ್ ಫೈಲ್ಸ್' ಹೇಳಿದೆ.

1975ರ ಮೆಮೊವೊಂದರಲ್ಲಿ ಅಮೆರಿಕಾದ ಹೊರಗಿರುವ ಸಿಐಎ ದಾಖಲೆಗಳನ್ನು ತಡಕಾಡಲು ಸೂಚನೆ ನೀಡಲಾಗಿತ್ತು . ಒಂದೊಮ್ಮೆ ಸಿಐಎ ಯಾವುದಾದರೂ ಕೃತ್ಯದಲ್ಲಿ ಓಸ್ವಾಲ್ಡ್ ನನ್ನು ಬಳಸಿಕೊಂಡಿತ್ತೇ ಎಂಬುದನ್ನು ತಿಳಿದುಕೊಳ್ಳುವಂತೆ ಈ ಮೆಮೊದಲ್ಲಿ ಸೂಚಿಸಲಾಗಿತ್ತು.

 Kennedy files: Oswald not linked CIA states 1975 memo

ಮೆಮೊ ಹಿನ್ನಲೆಯಲ್ಲಿ ಹುಡುಕಾಟ ನಡೆಸಿದ ಅಧಿಕಾರಿಗಳು ಖಾಲಿ ಕೈಯಲ್ಲಿ ವಾಪಾಸಾಗಿದ್ದರು. ಸಿಐಎ ಆಗಲೀ ಅಮೆರಿಕಾದ ಯಾವುದೇ ಸಂಸ್ಥೆಗಳಾಗಲಿ ಓಸ್ವಾಲ್ಡ್ ನನ್ನು ಯಾವುದೇ ರೀತಿಯಲ್ಲೂ ಬಳಸಿಕೊಂಡಿರಲಿಲ್ಲ ಎಂದು ಈ ದಾಖಲೆಗಳು ಹೇಳಿವೆ.

ಕೆನಡಿ ಹತ್ಯೆಗೆ ಸಂಬಂಧಿಸಿದಂತೆ 'ನಾಷನಲ್ ಆರ್ಕೈವ್ಸ್' 676 ಸರಕಾರಿ ದಾಖಲೆಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇದು ಈ ವರ್ಷ ಬಿಡುಗಡೆಯಾದ ಮೂರನೇ ದಾಖಲೆಯಾಗಿದೆ. ಇದರಲ್ಲಿ 553 ಸಿಐಎಗೆ ಸಂಬಂಧಿಸಿದ ದಾಖಲೆಗಳಾಗಿವೆ. ಜತೆಗೆ ನ್ಯಾಯಾಂಗ ಮತ್ತು ರಕ್ಷಣಾ ಇಲಾಖೆ ಸಂಬಂಧಿಸಿದ ದಾಖಲೆಗಳು ಹಾಗೂ ಹೌಸ್ ಸೆಲೆಕ್ಟ್ ಕಮಿಟಿ ಮತ್ತು ನ್ಯಾಷನಲ್ ಆರ್ಕೈವ್ ನಲ್ಲಿರುವ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ.

ದಾಖಲೆಯೊಂದರಲ್ಲಿ ಹತ್ಯೆ ನಡೆದ ನಂತರ ಓಸ್ವಾಲ್ಡ್ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ಹೇಗೆ ಕಲೆ ಹಾಕಿದರು ಎಂಬ ವಿವರಗಳಿವೆ.

'ಜತೆಗೆ ಕೊಲೆ ಸಂದರ್ಭದಲ್ಲಿ ಓಸ್ವಾಲ್ಡ್ ಅಮೆರಿಕಾದಿಂದ ತುರ್ತು ಪಲಾಯನ ಮಾಡಲು ವೀಸಾ ಪಡೆದಿದ್ದರೆ ಏನು ಗತಿ' ಎಂಬುದರ ಬಗ್ಗೆ ಅಧಿಕಾರಿಗಳು ಅಚ್ಚರಿಯಾಗಿದ್ದರು. ಹತ್ಯೆ ನಡೆದ ಎರಡು ದಿನಗಳ ನಂತರ ಅಂದರೆ ನವೆಂಬರ್ 24, 1963ರಲ್ಲಿ ಸಿಐಎ ಕಳುಹಿಸಿದ ಮೆಸೇಜ್ ನಲ್ಲಿ 'ಪ್ರಮುಖ ಪ್ರಶ್ನೆ'ಯೊಂದಕ್ಕೆ ಇನ್ನೂ ಉತ್ತರ ಸಿಕ್ಕಿರಲಿಲ್ಲ ಎಂಬುದು ಬಯಲಾಗಿದೆ. ಅಮೆರಿಕಾ ಬಿಟ್ಟು ಹೋಗುವ ಅಥವಾ ಅಮೆರಿಕಾಗೆ ಬಂದು ನಂತರ ದೀರ್ಘ ಸಮಯದ ಬಳಿಕ ದೇಶ ಬಿಡುವ ಯೋಜನೆ ಓಸ್ವಾಲ್ಡ್ಗೆ ಇತ್ತೆ ಎಂಬುದರ ಬಗ್ಗೆ ಸಿಐಎಗೆ ನಿರ್ಧಿಷ್ಟ ಉತ್ತರ ಸಿಕ್ಕಿರಲಿಲ್ಲ ಎಂಬುದು ಈ ದಾಖಲೆಗಳಲ್ಲಿ ಬಹಿರಂಗವಾಗಿದೆ.

English summary
The connection between Lee Harvey Oswald and the CIA were totally unfounded newly released documents regarding John F Kennedy’s assassination says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X