ಮಲಗುವ ಕೋಣೆಯಲ್ಲಿ ಸಾಕು ಪ್ರಾಣಿಯಿದ್ದರೆ ಸುಖ ನಿದ್ದೆ

Posted By:
Subscribe to Oneindia Kannada

ಸಾಕಿದ ನಾಯಿಯನ್ನು ನಿಮ್ಮ ಕೋಣೆಯಲ್ಲಿ ಮಲಗಲು ಬಿಟ್ಟರೆ ಹಿತ ಎನಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ತಮ್ಮ ಹತ್ತಿರ ಸಾಕು ನಾಯಿಯನ್ನು ಮಲಗಲು ಬಿಟ್ಟರೆ ಸುಖಕರವಾದ ನಿದ್ದೆ ಬರುತ್ತದೆ ಎಂಬುದು ತಿಳಿದುಬಂದಿದೆ.

ಮೈಸೂರಿನಲ್ಲಿ ಮನೆಮಗುವಿನ ತಲೆಯನ್ನೇ ಕಚ್ಚಿದ ಸಾಕುನಾಯಿ

ಅಮೆರಿಕದ ಮೆಯೋ ಕ್ಲಿನಿಕ್ ಸಂಶೋಧಕರು ಯಾವುದೇ ನಿದ್ದೆ ಸಮಸ್ಯೆಗಳಿಲ್ಲದ ನಲವತ್ತು ಮಂದಿ ಆರೋಗ್ಯಕರ ವ್ಯಕ್ತಿಗಳ ಅಧ್ಯಯನ ಮಾಡಿದ ವಿಜ್ಞಾನಿಗಳು ಈ ಫಲಿತಾಂಶವನ್ನು ತಿಳಿಸಿದ್ದಾರೆ. ಏಳು ರಾತ್ರಿಗಳ ಕಾಲ ಅಧ್ಯಯನದಲ್ಲಿ ಭಾಗಿಯಾದವರು ಮತ್ತು ಅವರ ಸಾಕುನಾಯಿಗಳ ಚಟುವಟಿಕೆ ಮತ್ತು ನಿದ್ದೆಯ ಅಭ್ಯಾಸದ ಮೇಲೆ ನಿಗಾ ವಹಿಸಲಾಗಿತ್ತು.

Keeping dogs in bedroom helps you sleep better: study

ತಾವು ಮಲಗುವ ಸ್ಥಳದ ಬಳಿಯೇ ನಾಯಿಯನ್ನು ಮಲಗಿಸಿಕೊಂಡ ಕೆಲವರಿಗೆ ಚೆನ್ನಾಗಿ ನಿದ್ದೆ ಬಂದಿದೆ. ಅವರು ಗೊರಕೆ ಹೊಡೆಯುತ್ತಿದ್ದರಾ ಅಥವಾ ಇಲ್ಲವಾ ಎಂಬುದು ಯಾವುದೂ ಲೆಕ್ಕಕ್ಕೆ ಬರದೆ ಒಳ್ಳೆ ನಿದ್ದೆ ಬಂದಿದೆ. ಆದರೆ ತಮ್ಮ ನಾಯಿಗಳ ಬಳಿ ಒತ್ತಿಕೊಂಡು ಮಲಗಿದವರಿಗೆ ಉತ್ತಮ ನಿದ್ದೆ ಬಂದಿಲ್ಲ.

ನಿಮ್ಮ ಸಾಕು ನಾಯಿಗಳು ಮಲಗುವ ಕೋಣೆಯಲ್ಲಿದ್ದರೆ ಸಾಕು, ಮಲಗುವ ಮಂಚದ ಮೇಲಲ್ಲ ಎಂದು ಮೆಯೋ ಕ್ಲಿಕ್ ನ ಲೂಯಿಸ್ ಕ್ರಾನ್ ಹೇಳಿದ್ದಾರೆ. ಮನುಷ್ಯರು ಮತ್ತು ಅವರ ಸಾಕು ಪ್ರಾಣಿಗಳ ಮಧ್ಯದ ನಂಟು ಬದಲಾಗುತ್ತಿದೆ. ಹಲವು ಮಂದಿ ತಾವು ಮಲುಗುವಾಗ ಸಾಕುಪ್ರಾಣಿಗಳ ಜತೆಗೆ ನಿದ್ರೆ ಮಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ನಾಯಿ ಬಾಲ ಡೊಂಕೆ, ಸರಿಮಾಡೋಕೆ ಹೋಗ್ಬೇಡ ಮಂಕೆ!

ದಿನದ ಬಹುತೇಕ ಸಮಯ ತಮ್ಮ ಸಾಕು ಪ್ರಾಣಿಗಳಿಂದ ದೂರ ಇರುವ ಹಲವರು, ಮನೆಯಲ್ಲಿ ಇರುವ ವೇಳೆಯಲ್ಲಿ ಅವುಗಳ ಜತೆ ಸಮಯ ಕಳೆಯಲು ಬಯಸುತ್ತಾರೆ ಎಂದು ಕ್ರಾನ್ ತಿಳಿಸಿದ್ದಾರೆ.

"ಅವುಗಳನ್ನು ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ಇರಿಸಿಕೊಳ್ಳುವುದರಿಂದ ಜತೆಗೆ ಸಮಯ ಕಳೆದಂತಾಗುತ್ತದೆ. ಸಾಕುಪ್ರಾಣಿಗಳ ಮಾಲೀಕರು ಇದರಿಂದ ಸಮಾಧಾನ ಕಂಡುಕೊಂಡಿದ್ದಾರೆ. ನಿದ್ದೆಯೂ ಮೇಲೂ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Letting your pets sleep in your bedroom can be comforting, say scientists who found that people sleep better with their dogs nearby

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ