• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀರ್ಘಾವಧಿಯ ಸಂಬಂಧಗಳತ್ತ ಗಮನಹರಿಸಲು ಭಾರತಕ್ಕೆ ಚೀನಾ ಸೂಚನೆ

|
Google Oneindia Kannada News

ಬೀಜಿಂಗ್, ಏಪ್ರಿಲ್ 22: ಗಡಿ ಸಮಸ್ಯೆಯನ್ನು ಸೂಕ್ತ ಸ್ಥಾನದಲ್ಲಿರಿಸಿ, ದೀರ್ಘಾವಧಿ ಸಂಬಂಧಗಳತ್ತ ಗಮನಹರಿಸಿ ಎಂದು ಭಾರತಕ್ಕೆ ಚೀನಾ ಸೂಚನೆ ನೀಡಿದೆ.

ವಾಸ್ತವ ನಿಯಂತ್ರಣ ರೇಖೆಯಉದ್ದಕ್ಕೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಚೀನಾ ಬದ್ಧವಾಗಿದ್ದು ಗಡಿ ಸಮಸ್ಯೆಯನ್ನು ಸೂಕ್ತ ಸ್ಥಾನದಲ್ಲಿ ಇರಿಸಿ ಮತ್ತು ದೀರ್ಘಾವಧಿಯ ಅಭಿವೃದ್ಧಿಗೆ ಭಾರತ ಮುಂದಾಗಬೇಕು ಎಂದು ಹೇಳಿದೆ.

ಲಡಾಖ್‌ನಲ್ಲಿ ಮುಂದುವರಿದ ಸೇನಾ ಬಿಕ್ಕಟ್ಟು: ಸೇನೆ ಹಿಂತೆಗೆತ ಇಲ್ಲಲಡಾಖ್‌ನಲ್ಲಿ ಮುಂದುವರಿದ ಸೇನಾ ಬಿಕ್ಕಟ್ಟು: ಸೇನೆ ಹಿಂತೆಗೆತ ಇಲ್ಲ

ಜಾಗತಿಕ ವ್ಯವಹಾರಗಳ ಭಾರತೀಯ ಮಂಡಳಿಯ ವರ್ಚುವಲ್ ಶೃಂಗದಲ್ಲಿ ಮಾತನಾಡಿದ್ದ ವಿಕ್ರಮ್ ಮಿಸ್ರಿ, ಉಭಯ ರಾಷ್ಟ್ರಗಳ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ.

ಬಹು ಧ್ರುವೀಯ ಜಗತ್ತಿನಲ್ಲಿ ಒಪ್ಪಂದ ಮತ್ತು ಸಮಾಲೋಚನೆಗೊ ಮುನ್ನ ಯಾವ ರಾಷ್ಟ್ರವೂ ತನ್ನದೇ ಅಜೆಂಡಾ ಆಧಾರಿತ ನಿರ್ಣಯಕ್ಕೆ ಬರಬಾರದು. ಇತರರ ಅಭಿಪ್ರಾಯ ಅಲಕ್ಷಿಸಿ, ಸ್ವಹಿತಾಸಕ್ತಿ ಸ್ಥಾಪಿಸಲು ಯತ್ನಿಸಬಾರುದ ಎಂದು ಹೇಳಿದ್ದರು.

ಎಲ್‌ಎಸಿ ಉದ್ದಕ್ಕೂ ಶಾಂತಿ ಕಾಪಾಡಲು ಉಭಯ ದೇಶಗಳ ನಾಯಕರ ನಡುವೆ ಒಮ್ಮತದ ಮಾತುಕತೆ ನಡೆದಿದ್ದರೂ ಚೀನಾ ಮಾತ್ರ ಕಾರ್ಪೆಟ್ ಕೆಳಗೆ ನುಗ್ಗುವ ಪ್ರಯತ್ನ ಮಾಡುತ್ತಿದೆ ಎಂದು ಚೀನಾ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಪ್ರಶ್ನಿಸಿದ್ದರು.

ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಸುರಕ್ಷತೆಯನ್ನು ಕಾಪಾಡಲು ನಾವು ದೃಢವಾಗಿ ನಿರ್ಧರಿಸಿದ್ದೇವೆ ಎಂದು ವಾಂಗ್ ಹೇಳಿದರು.

ಈ ಸಂಬಂಧ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಭಾರತ ದ್ವಿಪಕ್ಷೀಯ ಮಾತುಕತೆ ಸಂಬಂಧ ದೀರ್ಘಾವಧಿಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಚೀನಾ-ಭಾರತದ ಗಡಿ ಪರಿಸ್ಥಿತಿಯ ವಿಷಯದಲ್ಲಿ, ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ.

English summary
China said on Wednesday that it was committed to maintaining peace and stability along the Line of Actual Control (LAC) as it urged India to put the boundary issue at an "appropriate position" and meet it "halfway" for the long term development of the bilateral ties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X