ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾ-ಭಾರತ ಸಂಬಂಧಕ್ಕೆ ಹುಳಿ ಹಿಂಡಿದ ಚೀನಾ?

|
Google Oneindia Kannada News

ಬಾಂಗ್ಲಾದೇಶ ಹಾಗೂ ಭಾರತದ ದ್ವಿಪಕ್ಷೀಯ ಸಂಬಂಧಕ್ಕೆ ಕಹಿ ಹಿಂಡಲು ಪಾಕಿಸ್ತಾನ ಹಾಗೂ ಚೀನಾ ತೆರೆ ಮರೆಯ ಪ್ರಯತ್ನ ನಡೆಸಿದಂತಿದೆ.

Recommended Video

Andre Russell wasn't unhappy with me : Dinesh Karthik | Oneindia Kannada

ಬಾಂಗ್ಲಾದೇಶದಲ್ಲಿನ ಪ್ರವಾಹ ಹಾಗೂ ಕೊರೊನಾ ಸ್ಥಿತಿಗತಿ ಕುರಿತು ಚರ್ಚಿಸುವ ನೆಪದಲ್ಲಿ ಬಾಂಗ್ಲಾದೇಶ ಪ್ರಧಾನಿಯೊಂದಿಗೆ ಮಾತನಾಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಚಾರದ ಕುರಿತು ಚರ್ಚಿಸಿರುವುದಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅವಲಕ್ಕಿ ತಿನ್ನುವವರನ್ನು ಬಾಂಗ್ಲಾದೇಶಿಗಳೆಂದ ಬಿಜೆಪಿ ನಾಯಕಅವಲಕ್ಕಿ ತಿನ್ನುವವರನ್ನು ಬಾಂಗ್ಲಾದೇಶಿಗಳೆಂದ ಬಿಜೆಪಿ ನಾಯಕ

ಕಾಶ್ಮೀರದಲ್ಲಿನ ಬೆಳವಣಿಗೆಗಳ ಬಗ್ಗೆ ಬಾಂಗ್ಲಾ ಪ್ರಧಾನಿಯೊಂದಿಗೆ ಚರ್ಚಿಸಿದ್ದೇನೆ ಎಂದು ಇಮ್ರಾನ್ ಖಾನ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಬಾಂಗ್ಲಾದೇಶ ಪ್ರಧಾನಿ ಯಾವುದೇ ಹೇಳಿಕೆ ನೀಡಿಲ್ಲ.

Kashmir Discussed By Pak, Bangladesh?

ಬಾಂಗ್ಲಾದ ಪ್ರವಾಹ ಪರಿಸ್ಥಿತಿ ಹಾಗೂ ಉಭಯ ದೇಶಗಳ ಕೊರೊನಾ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ ಎಂದಷ್ಟೇ ಒಂದು ಪ್ಯಾರಾದ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಸನಿಹವಾಗುತ್ತಿದೆ. ಕಾಶ್ಮೀರ ಕುರಿತು ಬಾಂಗ್ಲಾ ನಿಲುವು ಬದಲಾಗಿದೆ ಎಂಬ ಸಂದೇಶವನ್ನು ನೀಡುವ ಪ್ರಯತ್ನವನ್ನು ಪಾಕಿಸ್ತಾನ ಮಾಡಿದೆ. ಆದರೆ ಈ ಕುರಿತು ಬಾಂಗ್ಲಾದೇಶ ಮಾತ್ರ ಯಾವುದೇ ಸ್ಪಷ್ಟತೆ ನೀಡಿಲ್ಲ.

ಬಾಂಗ್ಲಾದೇಶದ ಮೇಲೆ ಚೀನಾ ಪ್ರಭಾವ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಇದೇ ಪ್ರಭಾವವನ್ನು ಬಳಸಿ ಉಭಯ ದೇಶಗಳ ನಡುವೆ ಮಾತುಕತೆಯನ್ನು ಚೀನಾ ಮಧ್ಯದ್ಥಿಕೆಯಲ್ಲೇ ನಡೆಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇಂತಹ ಪ್ರಭಾವವನ್ನು ಬಳಸಿ ನೇಪಾಳ ಹಾಗೂ ಭಾರತದ ಸಂಬಂಧಕ್ಕೆ ಈಗಾಗಲೇ ಚೀನಾ ಹುಳಿ ಹಿಂಡಿದೆ. ಭಾರತ ಬಾಂಗ್ಲಾ ಸಂಬಂಧಕ್ಕೆ ಇದೇ ರೀತಿ ಹುಳಿ ಹಿಂಡಲು ಚೀನಾ ತೆರೆ ಮರೆಯ ಪ್ರಯತ್ನ ನಡೆಸುತ್ತಿದೆಯೇ ಎಂದು ಕಾದು ನೋಡಬೇಕಿದೆ.

ಬಾಂಗ್ಲಾವನ್ನು ಪಾಕಿಸ್ತಾನದಿಂದಲೇ ಬೇರ್ಪಡಿಸಿ ತನಗಾಗಬಹುದಾಗಿದ್ದ ಅಪಾಯವನ್ನು ಈ ಹಿಂದೆಯೇ ಭಾರತ ತಪ್ಪಿಸಿತ್ತು. ಆದರೆ ಒಂದೊಮ್ಮೆ ಈಗ ಮತ್ತೆ ಬಾಂಗ್ಲಾ, ಪಾಕಿಸ್ತಾನ ಒಂದಾದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

English summary
Pakistan Prime Minister Imran Khan's phone call to his Bangladesh counterpart Sheikh Hasina and a press release from Islamabad saying Mr Khan shared his concerns about Jammu and Kashmir has raised buzz in view of the shifting dynamics in India's neighbourhood and the clashes with China along the Line of Actual Control in Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X