ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯಲ್ಲಿ 'ಕಾಶ್ಮೀರ ಭಾರತದ್ದು' ಎಂದ ಪಾಕ್ ವಿದೇಶಾಂಗ ಸಚಿವ!

|
Google Oneindia Kannada News

ಜಿನೆವಾ, ಸೆಪ್ಟೆಂಬರ್ 10: ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ(ಯುಎನ್ ಎಚ್ಆರ್ ಸಿ) ಸಮಾವೇಶದಲ್ಲಿ ಮಾತನಾಡುತ್ತಿದ್ದ ಪಾಕ್ ವಿದೇಶಾಂಗ ಸಚಿವ, "ಜಮ್ಮು ಕಾಶ್ಮೀರ ಭಾರತೀಯ ರಾಜ್ಯ" ಎಂದು ಒಪ್ಪಿಕೊಂಡಿದ್ದಾರೆ.

Recommended Video

'ಮೋದಿಯ ತಂತ್ರವೆಲ್ಲಾ ನಮಗೆ ತಿಳಿದಿದೆ' ಎಂದು ಹೇಳಿದಾಕ್ಷಣ ರಶೀದ್ ಅವರಿಗೆ ಆಗಿದ್ದೇನು ? | Oneindia Kannada

ಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಖುರೇಶಿ, "ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬುದನ್ನು ಬಿಂಬಿಸಲು ಭಾರತ ಪ್ರಯತ್ನಿಸುತ್ತಿದೆ. ಆದರೆ 'ಭಾರತದ ರಾಜ್ಯ'ವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಯಾರಿಗೂ ತೆರಳಲು ಬಿಡುತ್ತಿಲ್ಲ, ಯಾಕೆ? " ಎಂದು ಶಾ ಪ್ರಶ್ನಿಸಿದ್ದರು.

ಕಾಶ್ಮೀರ ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ: ಪಾಕಿಸ್ತಾನದ ಹೊಸ ವರಸೆಕಾಶ್ಮೀರ ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ: ಪಾಕಿಸ್ತಾನದ ಹೊಸ ವರಸೆ

ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯಲ್ಲಿ ಭಾರತದ ವಿರುದ್ಧ ಮಾತನಾಡಲು ತೆರಳಿದ್ದ ಖುರೇಶಿ ಕಾಶ್ಮೀರ ಭಾರತದ್ದೇ ಎನ್ನುವ ಮೂಲಕ ತಮ್ಮನ್ನು ತಾವೇ ಪೇಚಿಗೆ ಸಿಲುಕಿಸಿಕೊಂಡರು.

ಖುರೇಶಿ ಹೇಳಿದ್ದೇನು?

ಖುರೇಶಿ ಹೇಳಿದ್ದೇನು?

"ಜಗತ್ತಿನ ಎದುರು ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬ ಭಾವನೆ ಸೃಷ್ಟಿಯಾಗುವಂತೆ ಭಾರತ ಮಾಡುತ್ತಿದೆ. ಅಕಸ್ಮಾತ್ ಕಾಶ್ಮೀರ ಸಹಜ ಸ್ಥಿತಿಗೆ ಮರಳಿದ್ದರೆ, ಅಂತಾರಾಷ್ಟ್ರೀಯ ಸಂಘಟನೆಗಳು, ಎನ್ ಜಿಒಗಳು ಪತ್ರಕರ್ತರನ್ನು ಅಲ್ಲಿಗೆ ತೆರಳಲು ಬಿಡಲಿ. 'ಭಾರತೀಯ ರಾಜ್ಯ'ವಾದ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಹೇಗಿದೆ ಎಂಬುದನ್ನು ಅವರೇ ಖುದ್ದು ತೆರಳಿ ತಿಳಿಯಲಿ" ಎಂದು ಖುರೇಶಿ ಹೇಳಿದ್ದರು.

ಭಾರತದ ಆಡಳಿತದಲ್ಲಿರುವ ಕಾಶ್ಮೀರ

ಭಾರತದ ಆಡಳಿತದಲ್ಲಿರುವ ಕಾಶ್ಮೀರ

ಇಷ್ಟು ದಿನ ಕಾಶ್ಮೀರವನ್ನು ಪಾಕಿಸ್ತಾನ "ಭಾರತದ ಆಡಳಿತದಲ್ಲಿರುವ ಕಾಶ್ಮೀರ(IAK) ಎಂದು ಕರೆಯುತ್ತಿತ್ತು. ಆದರೆ ವಿಶ್ವಸಂಸ್ಥೆಯ ಸಮಾವೇಶದ ಸಂದರ್ಭದಲ್ಲಿ ಖುರೇಶಿ ಅದನ್ನು 'ಭಾರತದ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ' ಎಂದು ಉಲ್ಲೇಖಿಸಿರುವುದು ಅವರೇ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಒಪ್ಪಿಕೊಂಡಂತಾಗಿದೆ.

ಅಕ್ಟೋಬರ್ ನಲ್ಲಿ ಭಾರತ-ಪಾಕಿಸ್ತಾನ ಮಹಾಯುದ್ಧ, ಪಾಕ್ ಸಚಿವ ನುಡಿದ ಭವಿಷ್ಯಅಕ್ಟೋಬರ್ ನಲ್ಲಿ ಭಾರತ-ಪಾಕಿಸ್ತಾನ ಮಹಾಯುದ್ಧ, ಪಾಕ್ ಸಚಿವ ನುಡಿದ ಭವಿಷ್ಯ

ಬಾಲಕೋಟ್ ಏರ್ ಸ್ಟ್ರೈಕ್ ಸತ್ಯ ಎಂದಿದ್ದ ಇಮ್ರಾನ್ ಖಾನ್!

ಬಾಲಕೋಟ್ ಏರ್ ಸ್ಟ್ರೈಕ್ ಸತ್ಯ ಎಂದಿದ್ದ ಇಮ್ರಾನ್ ಖಾನ್!

ಹೀಗೆ ತನ್ನದೇ ಹೇಳಿಕೆಗಳನ್ನು ಪಾಕಿಸ್ತಾನ ತಿರುಚುವುದು ಹೊಸತೇನಲ್ಲ. ಭಾರತ ಪಾಕಿಸ್ತಾನದ ಉಗ್ರನೆಲೆ ಬಾಲಕೋಟ್ ಮೇಲೆ ಏರ್ ಸ್ಟ್ರೈಕ್ ನಡೆಸಿಯೇ ಇಲ್ಲ ಎನ್ನುತ್ತಿದ್ದ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್, ಭಾರತ ಏರ್ ಸ್ಟ್ರೈಕ್ ನಡೆಸಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದರು. ಕಳೆದ ತಿಂಗಳು ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ನಲ್ಲಿ ನಡೆದ ಶಾಸಕಾಂಗ ಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, "ಭಾರತವು ಫೆಬ್ರವರಿಯಲ್ಲಿ ಬಾಲಕೋಟ್ ನಲ್ಲಿ ನಡೆಸಿದ್ದ ಏರ್ ಸ್ಟ್ರೈಕ್ ಗಿಂತಲೂ ಭಯಾನಕವಾದ ದಾಳಿಯನ್ನು ಪಾಕಿಸ್ತಾನದೊಳಗೆ ನಡೆಸಲು 'ಸಂಚು' ರೂಪಿಸಿದೆ. ಕಾಶ್ಮೀರ ವಿಷಯದಲ್ಲಿ ಉಭಯ ದೇಶಗಳ ನಡುವೆ ಎದ್ದಿರುವ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ" ಎಂಬ ಹೇಳಿಕೆ ನೀಡಿದ್ದರು.

ಯುದ್ಧದ ವಾತಾವರಣ

ಯುದ್ಧದ ವಾತಾವರಣ

ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ಭಾರತ ರದ್ದುಗೊಳಿಸಿದ ನಂತರ ಪಾಕಿಸ್ತಾನ ರೊಚ್ಚಿಗೆದ್ದಿದ್ದು ಗಡಿಯಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ. ಉಜಭಯ ದೇಶಗಳ ನಡುವೆ ಅಕ್ಟೋಬರ್ ನಲ್ಲಿ ಯುದ್ಧವಾದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

English summary
Kashmir Belongs to India: Shah Mohammad Qureshi in Geneva, Jammu and Kashmir Is An Indian State: Shah Mohammad Qureshi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X