• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರದಾಳಿಯಲ್ಲಿ ನೂರಾರು ಜನರ ಜೀವ ಉಳಿಸಿದ ಕರಾಚಿ ಹುಡುಗಿ!

|

ಕರಾಚಿ, ನವೆಂಬರ್ 24: ಮಹಿಳೆಯರಿಗಿದ್ದ ಎಲ್ಲ ಕಟ್ಟಳೆಗಳನ್ನು ಮೀರಿ ನಿಂತು ಪೊಲೀಸ್ ಅಧಿಕಾರಿಯಾಗುತ್ತೇನೆ ಎಂದ ಸುಹಾಯ್ ಅಜಿಜ್ ತಾಲ್ಪುರ್ ಗೆ ಸಿಕ್ಕಿದ್ದು ಕುಹಕದ ಪ್ರತಿಕ್ರಿಯೆ. ಆದರೆ ಅಂದು ಬಂಧು-ಬಾಂಧವರ ವಿರೋಧ ಕಟ್ಟಿಕೊಂಡು, ಸಾಧಿಸುವ ಏಕೈಕ ಛಲದಿಂದ ಮನೆಯಿಂದ ಆಚೆ ಹೆಜ್ಜೆಯಿಟ್ಟ ಸುಹಾಯ್, ಉಗ್ರರಿಗೆ ಸೆಡ್ಡು ಹೊಡೆದು ನೂರಾರು ಜನರ ಪ್ರಾಣ ಉಳಿಸುವ ಮೂಲಕ ಕರಾಚಿಯ ಧೈರ್ಯವಂತ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಕರಾಚಿಯ ಹಿರಿಯ ಸೂಪರಿಂಟೆಂಡೆಂಟ್ ಪೊಲೀಸ್ ಸುಹಾಯ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹತ್ತಿಕ್ಕಿ, ಚೀನಾ ರಾಯಭಾರ ಕಚೇರಿಯ ಹಲವು ಅಧಿಕಾರಿಗಳ ಜೀವ ಉಳಿಸುವಲ್ಲಿ ಅವರು ಯಶಸ್ವಿಯಾದರು.

ವಿಡಿಯೋ : ಕರಾಚಿಯ ಚೀನಾ ರಾಯಭಾರಿ ಕಚೇರಿ ಬಳಿ ಸ್ಫೋಟ

ರಾಯಭಾರ ಕಚೇರಿಯೊಳಗೆ ಮುನ್ನುಗ್ಗುತ್ತಿದ್ದ ಒಂಬತ್ತು ಉಗ್ರರು ಯಾವುದೇ ಕಾರಣಕ್ಕೂ ಕಚೇರಿಯೊಳಗೆ ಪ್ರವೇಶಿಸದಂತೆ ತಡೆದು, ಒಳಗಿದ್ದ ಚೀನಾ ಅಧಿಕಾರಿಗಳನ್ನು ಕಾಪಾಡಿದವರು ಸುಹಾಯ್. ಅವರ ಈ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉಗ್ರರ ಮೋಸ ಅರಿತ ಸುಹಾಯ್

ಆಹಾರ ಮತ್ತು ಔಷಧಗಳನ್ನು ಪೂರೈಸಲು ಬಂದಿದ್ದೇವೆ ಎಂದು ಸುಳ್ಳು ಹೇಳಿ ರಾಯಭಾರ ಕಚೇರಿಯೊಳಗೆ ಮುನ್ನುಗ್ಗಲು ಹೊರಟಿದ್ದ ಉಗ್ರರನ್ನು ಅಲ್ಲಿಯೇ ತಡೆದು, ಪೊಲೀಸರು ಕಾರ್ಯೋನ್ಮುಖರಾಗುವಂತೆ ಮಾಡಿದವರು ಸುಹಾಯ್. ಉಗ್ರರು ಮತ್ತು ಪೊಲೀಸರ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾದರಾದರೂ, ಚೀನಾ ರಾಯಭಾರ ಕಚೇರಿಯ ಅಧಿಕಾರಿಗಳ ಜೀವ ಉಳಿಸುವಲ್ಲಿ ಪಾಕ್ ಪೊಲೀಸರು ಯಶಸ್ವಿಯಾದರು.

ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಸ್ಫೋಟ: ಕನಿಷ್ಠ 30 ಸಾವು

ಕೆಳ ಮಧ್ಯಮ ವರ್ಗದಿಂದ ಬಂದ ಸುಹಾಯ್

ಭಾಯ್ ಖಾನ್ ತಲ್ಪಾರ್ ಜಿಲ್ಲೆಯ ಕೆಳ ಮಧ್ಯಮ ಕುಟುಂಬದಿಂದ ಬಂದ ಸುಹಾಯ್, ಸಿಂಧ್ ಪ್ರಾಂತ್ಯದವರು. 2013 ರಲ್ಲಿ ಸೆಂಟ್ರಲ್ ಸುಪಿರಿಯರ್ ಸರ್ವಿಸ್ ಪರೀಕ್ಷೆ ಪಾಸು ಮಾಡಿದ ಅವರು ಪೊಲೀಸ್ ಅಧಿಕಾರಿಯಾಗಿ ಕಾರ್ಯಾರಂಭಿಸಿದರು. ಆಕೆ ಪೊಲೀಸ್ ಆಗುತ್ತೇನೆ ಎಂದಾಗ ಅವರನ್ನು ತಡೆದವರೇ ಹೆಚ್ಚು ಜನ. ಆದರೆ ಹೆತ್ತವರ ಸಹಕಾರವಿತ್ತು. ಬಂಧುಗಳು ಎಷ್ಟೇ ಹೆದರಿಸಿದರೂ ಹಠ ಬಿಡದೆ ಪೊಲೀಸ್ ಅಧಿಕಾರಿಯಾದರು.

ಸೇವೆಯ ತುಡಿತ

"ನನ್ನ ಕುಟುಂಬಕ್ಕೆ ನಾನು ಚಾರ್ಟರ್ಡ್ ಅಕೌಂಟಂಟ್ ಆಗಬೇಕು ಅನ್ನೋ ಆಸೆ ಇತ್ತು. ಆದರೆ ಅದಕ್ಕೆ ಹೆಚ್ಚು ಸಾಮಾಜಿಕ ಮೌಲ್ಯ ಇಲ್ಲ ಅನ್ನಿಸಿ, ನಾನೇ ಬೇಡವೆಂದು ಈ ಕೆಲಸ ಆಯ್ದುಕೊಂಡೆ. ನನ್ನ ಪಾಲಕರು ರಾಷ್ಟ್ರವಾದಿಗಳು. ನನಗೂ ಈ ಕೆಲಸವೇ ಖುಷಿ ಕೊಡುತ್ತದೆ" ಎನ್ನುತ್ತಾರೆ ಸುಹಾಯ್.

ಅನುಕರಣೀಯ ಜೀವನ

ಮೂವತ್ತರ ಆಸುಪಾಸಿನಲ್ಲಿರುವ ಸುಹಾಯ್ ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಾಡಿದ ಸಾಧನೆ ಹೆಣ್ಣು ಮಕ್ಕಳಿಗೆ ಮಾದರಿ. ಪಾಕಿಸ್ತಾನದ ಎಷ್ಟೊ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು, ಮನೆಯಿಂದ ಆಚೆ ಬರಲು ಕಷ್ಟಪಡುತ್ತಿರುವ ಹೊತ್ತಲ್ಲಿ ಎಲ್ಲ ಕಟ್ಟಳೆಗಳನ್ನು ಮೀರಿ, ಸಾಧಿಸಿದ ಸುಹಾಯ್ ಬದುಕು ಆದರ್ಶವೇ ಸರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A fearless woman officer of Karachi Police saved lives of many Chinese diplomatic staff when heavily-armed terrorists stormed the mission in the Pakistani city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more