• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ; ಚೀನೀಯರ ಮೇಲೆ ಉಗ್ರ ದಾಳಿ; ಒಬ್ಬ ಸಾವು; ಇಬ್ಬರಿಗೆ ಗಾಯ

|
Google Oneindia Kannada News

ಇಸ್ಲಾಮಾಬಾದ್, ಸೆ. 29: ಪಾಕಿಸ್ತಾನದ ಕರಾಚಿ ನಗರದ ಮಾರುಕಟ್ಟೆಯೊಂದರ ಬಳಿ ಬುಧವಾರ ರಕ್ತಪಾತ ನಡೆದಿದೆ. ಜನದಟ್ಟನೆ ಇರುವ ಎಂಪ್ರೆಸ್ ಮಾರುಕಟ್ಟೆಯ ರಸ್ತೆಯಲ್ಲಿರುವ ಡೆಂಟಲ್ ಕ್ಲಿನಿಕ್‌ವೊಂದರಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಒಬ್ಬನನ್ನು ಬಲಿತೆಗೆದುಕೊಂಡಿದ್ದಾರೆ. ಇನ್ನಿಬ್ಬರು ಗಾಯಗೊಂಡಿರುವುದು ವರದಿಯಾಗಿದೆ.

ಹತ್ಯೆಯಾದ ವ್ಯಕ್ತಿ ಚೀನೀ ರಾಷ್ಟ್ರೀಯನೆಂದು ಗುರುತಿಸಲಾಗಿದೆ. ಗಾಯಗೊಂಡವರೂ ಕೂಡ ಚೀನೀಯರೆಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯ ಇಲ್ಲ ಎನ್ನಲಾಗಿದೆ. ಕರಾಚಿ ಪೊಲೀಸರ ಪ್ರಕಾರ, ಫೈರಿಂಗ್‌ನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ: ಭಾರತಕ್ಕೆ ಶ್ರೀಲಂಕಾದಿಂದ ಬೆಂಬಲವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ: ಭಾರತಕ್ಕೆ ಶ್ರೀಲಂಕಾದಿಂದ ಬೆಂಬಲ

ಮೃತಪಟ್ಟವರನ್ನು ರೊನಾಲ್ಡ್ ಚೋವ್ ಎಂದು ಗುರುತಿಸಲಾಗಿದೆ. ಡಾ. ರಿಚರ್ಡ್ ಹು ಲೀ ಮತ್ತು ಮಾರ್ಗರೇಟ್ ಗಾಯಗೊಂಡವರು. ರೊನಾಲ್ಡ್ ಚೋವ್ ಡೆಂಟಲ್ ಕ್ಲಿನಿಕ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಡಾ. ರಿಚರ್ಡ್ ಅವರು ಡೆಂಟಲ್ ಕ್ಲಿನಿಕ್‌ನ ವೈದ್ಯರು. ಮಾರ್ಗರೇಟ್ ಅವರು ಡಾ. ರಿಚರ್ಡ್ ಪತ್ನಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿಯಾದ ಸ್ಥಳದಲ್ಲಿ ಪೊಲೀಸರಿಗೆ ಹಲವು 9ಎಂಎಂ ಪಿಸ್ತೂಲ್ ಶೆಲ್‌ಗಳು ಸಿಕ್ಕಿವೆ. ಆರಂಭಿಕ ಮಾಹಿತಿ ಪ್ರಕಾರ ಈ ದಾಳಿ ನಡೆಸಿದ್ದು ಒಬ್ಬ ವ್ಯಕ್ತಿ. ಆತ 30ರ ಆಸುಪಾಸಿನ ವಯಸ್ಸಿನವ ಎಂದು ಹೇಳಲಾಗಿದೆ.

ವೈಯಕ್ತಿಕ ವಿಚಾರಕ್ಕೆ ಕೊಲೆ?

74 ವರ್ಷದ ಡಾ. ರಿಚರ್ಡ್ ಹು ಲೀ ಮತ್ತು ಅವರ ಪತ್ನಿ ಮಾರ್ಗರೆಟ್ ಬಹಳ ದಿನಗಳಿಂದ ಇಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಅವರಿಗೆ ಯಾವ ಬೆದರಿಕೆ ಇರಲಿಲ್ಲ. ಕೊಲೆ ಯತ್ನಕ್ಕೆ ಏನು ಕಾರಣ ಎಂಬುದು ಪೊಲೀಸರಿಗೆ ನಿಖರವಾಗಿ ಗೊತ್ತಾಗಿಲ್ಲ. ಆದರೆ, ವೈಯಕ್ತಿಕ ಕಾರಣಕ್ಕೆ ಈ ದಾಳಿ ನಡೆದಿರಬಹುದು ಎಂಬುದು ಕರಾಚಿ ಪೊಲೀಸರ ಅನುಮಾನ.

ಉಕ್ರೇನ್‌ಗೆ 1.1 ಶತಕೋಟಿ ಡಾಲರ್‌ ಮಿಲಿಟರಿ ನೆರವು ಘೋಷಿಸಿದ ಅಮೆರಿಕಾಉಕ್ರೇನ್‌ಗೆ 1.1 ಶತಕೋಟಿ ಡಾಲರ್‌ ಮಿಲಿಟರಿ ನೆರವು ಘೋಷಿಸಿದ ಅಮೆರಿಕಾ

ಕರಾಚಿಯ ಸಾದ್ದರ್ ಪ್ರದೇಶದಲ್ಲಿರುವ ಈ ಡೆಂಟಲ್ ಕ್ಲಿನಿಕ್‌ಗೆ 30-35 ವರ್ಷ ವಯಸ್ಸಿನ ದಾಳಿಕೋರ ಪ್ರವೇಶಿಸಿ ವೈದ್ಯರ ಕೊಠಡಿಯೊಳಗೆ ಗುಂಡಿನ ದಾಳಿ ನಡೆಸಿದ್ದಾನೆ.

"ಡಾಕ್ಟರ್ ಮತ್ತವರ ಪತ್ನಿ ಜೊತೆ ದಾಳಿಕೋರನಿಗೆ ಯಾವುದೋ ವಿಚಾರದಲ್ಲಿ ತಗಾದೆ ಇದ್ದಂತೆ ತೋರುತ್ತಿದೆ," ಎಂದು ಸಾದ್ದರ್ ಬಜಾರ್ ಪೊಲೀಸ್ ಠಾಣಾಧಿಕಾರಿ ಬಷೀರ್ ಅಹ್ಮದ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಕರಾಚಿ ನಗರ ಸಿಂಧ ಪ್ರಾಂತ್ಯದಲ್ಲಿದೆ. ಹಲವು ರಾಜಕಾರಣಿಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಸಿಂಧ ಮುಖ್ಯಮಂತ್ರಿ ಮುರದ್ ಅಲಿ ಶಾ ಆರೋಪಿಯನ್ನು ತತ್‌ಕ್ಷಣವೇ ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದು ಕರಾಚಿ ಹೆಚ್ಚುವರಿ ಐಜಿಪಿಯಿಂದ ವಿವರವಾದ ವರದಿ ಕೇಳಿದ್ದಾರೆ.

ಹಲವು ವರ್ಷಗಳಿಂದ ಪಾಕಿಸ್ತಾನದಲ್ಲಿರುವ ಚೀನೀಯರು

ಪಾಕಿಸ್ತಾನದಲ್ಲಿ ಚೀನಾ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವುದು ಎಲ್ಲರಿಗೂ ಗೊತ್ತಿರುವುದೇ. ಎಕನಾಮಿಕ್ ಕಾರಿಡಾರ್ ಯೋಜನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಚೀನೀಯರು ಪಾಕಿಸ್ತಾನದಲ್ಲಿ ನೆಲಸಿದ್ದಾರೆ. ಸಾದ್ದರ್ ಪ್ರದೇಶದಲ್ಲಿ ಚೀನೀಯರ ಸಂಖ್ಯೆ ಬಹಳ ಇದೆ. ಇಲ್ಲಿನ ಯೋಜನೆಗಳನ್ನು ನಿರ್ವಹಿಸುತ್ತಿರುವವರು, ತಮ್ಮದೇ ಉದ್ಯಮಗಳನ್ನು ಸ್ಥಾಪಿಸಿರುವವರು ಹೆಚ್ಚಿದ್ದಾರೆ.

ದಾಳಿ ಘಟನೆ ಇದೇ ಮೊದಲಲ್ಲ

ಪಾಕಿಸ್ತಾನದಲ್ಲಿ ಚೀನೀ ನಾಗರಿಕರನ್ನು ಗುರಿಯಾಗಿಸಿಯೇ ದಾಳಿ ಘಟನೆಗಳು ಹಿಂದೆ ಬಹಳ ಆಗಿವೆ. ಬಲೂಚಿಸ್ತಾನ ಪ್ರತ್ಯೇಕತೆಗೆ ಹೋರಾಡುತ್ತಿರುವ ಬಲೂಚ್ ಲಿಬರೇಶನ್ ಆರ್ಮಿಯಿಂದ ಚೀನೀಯರ ಮೇಲೆ ದಾಳಿಗಳಾಗಿವೆ. ಏಪ್ರಿಲ್ ತಿಂಗಳಲ್ಲಿ ಕರಾಚಿ ಯೂನಿವರ್ಸಿಟಿಯಲ್ಲಿ ಈ ಉಗ್ರ ಸಂಘಟನೆಯ ಸದಸ್ಯರು ಆತ್ಮಹತ್ಯಾ ದಾಳಿ ನಡೆಸಿ ಮೂವರು ಚೀನೀಯರನ್ನು ಸಾಯಿಸಿದ್ದರು. ಇದು ಚೀನಾದ ಕಣ್ಣು ಕೆಂಪಗಾಗಿಸಿತ್ತು.

"ಚೀನೀಯರಿಂದ ಹರಿದ ರಕ್ತ ವ್ಯರ್ಥವಾಗಬಾರದು. ಈ ಘಟನೆಯ ಹಿಂದಿರುವವರು ಬಹಳ ಬೆಲೆ ತೆರಬೇಕಾಗುತ್ತದೆ" ಎಂದು ಕರಾಚಿ ವಿವಿ ಘಟನೆಯ ಬಳಿಕ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಎಚ್ಚರಿಕೆ ನೀಡಿದ್ದರು.

2021 ಜುಲೈನಲ್ಲಿ ಕರಾಚಿಯ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಚೀನೀ ಕಾರ್ಮಿಕರನ್ನು ಉಗ್ರರು ಗಾಯಗೊಳಿಸಿದ್ದರು. 2018ರಲ್ಲಿ ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿರುವ ಚೀನೀ ರಾಯಭಾರ ಕಚೇರಿಯೊಳಗೆ ಉಗ್ರರು ದಾಳಿ ಮಾಡಿದ್ದರು. ಸಿಂಧ್ ಪ್ರಾಂತ್ಯವಲ್ಲದೇ ಬೇರೆ ಪ್ರಾಂತ್ಯಗಳಲ್ಲೂ ಪಾಕಿಸ್ತಾನದ ಉಗ್ರ ಸಂಘಟನೆಗಳು ಚೀನೀಯರ ಮೇಲೆ ದಾಳಿ ಮಾಡಿದ್ದಿದೆ.

(ಒನ್ಇಂಡಿಯಾ ಸುದ್ದಿ)

English summary
Unidentified gunman has killed one Chinese national and injured 2 others in an attack at Dental clinic near busy market in Karachi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X