ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸ್ಟ್ರೀಟ್ ನಿಂದ ಪ್ರಚಾರ ಆರಂಭಿಸಿದ ಪಾಟೀಲ

By Prasad
|
Google Oneindia Kannada News

ಲಂಡನ್, ಮೇ 22 : ಕನ್ನಡಿಗ, ಅನಿವಾಸಿ ಭಾರತೀಯ ಡಾ ನೀರಜ್ ಪಾಟೀಲ ಅವರು ಸಂಸತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಪ್ರಚಾರವನ್ನು 'ಬೆಂಗಳೂರು ಸ್ಟ್ರೀಟ್'ನಿಂದ ಸೋಮವಾರ ಆರಂಭಿಸಿದರು.

ಕಲಬುರಗಿ ಮೂಲದವರಾಗಿರುವ ಡಾ. ನೀರಜ್ ಪಾಟೀಲ ಅವರು, ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಪುಟ್ನಿ ಕ್ಷೇತ್ರದಿಂದ ಚುನಾವಣೆಗೆ ಧುಮುಕಿದ್ದಾರೆ. ನೀರಜ್ ಅವರು ಲ್ಯಾಂಬೆತ್ ಮೇಯರ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ.[ಬಸವಣ್ಣ ಪ್ರತಿಮೆ ಅನಾವರಣ ಆಹ್ವಾನ ಸ್ವೀಕರಿಸಿದ ಮೋದಿ]

ramya-shilpa-ganesh

ಈ ಬೆಂಗಳೂರು ಸ್ಟ್ರೀಟ್ ಇರುವುದು ಲಂಡನ್ ನ ಬರೋ ಆಫ್ ವಾಂಡ್ಸ್ ವರ್ತ್ ನಲ್ಲಿ. ಇಲ್ಲಿ ಪುಟ್ನಿ, ಬಟ್ಟರ್ಸಿಯಾ ಮತ್ತು ಟೂಟಿಂಗ್ ಎಂಬ ಮೂರು ಸಂಸತ್ ಕ್ಷೇತ್ರಗಳು ಬರುತ್ತವೆ. ಲಂಡನ್ ನಲ್ಲಿರುವ ಬೆಂಗಳೂರು ಸ್ಟ್ರೀಟ್ ನ ಪೋಸ್ಟ್ ಕೋಡ್ SW15 1QE.

ಹತ್ತೊಂಬತ್ತನೇ ಸೆಂಚುರಿಯಲ್ಲಿ ಬ್ಯಾಂಗಲೋರ್ ರೆಜಿಮೆಂಟ್ ಇಲ್ಲಿ ಇದ್ದಿದ್ದರಿಂದ ಈ ಓಣಿಯನ್ನು ಬೆಂಗಳೂರು ಸ್ಟ್ರೀಟ್ ಎಂದು ಕರೆಯಲಾಗುತ್ತಿದೆ. ಇಲ್ಲಿಂದಲೇ ಸಂಸದ ಕ್ರಾಯ್ಡನ್ ನಾರ್ತ್ ಮತ್ತು ಸ್ಥಳೀಯ ಸಚಿವ ಸ್ಟೀವ್ ರೀಡ್ ಅವರು ನೀರಜ್ ಪರವಾಗಿ ಪ್ರಚಾರಕ್ಕೆ ಚಾಲನೆ ನೀಡಿದರು.[ಎನ್ನಾರೈ ನೀರಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ]

Kannadiga launches Parliamentary campaign from Bangalore Street in London

2017ರ ಜೂನ್ 8ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ 30 ಬಿಲಿಯನ್ ಪೌಂಡ್ ವ್ಯಯಿಸುತ್ತಿರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಲೇಬರ್ ಪಕ್ಷ ಘೋಷಿಸಿದೆ.

Kannadiga launches Parliamentary campaign from Bangalore Street in London

ಡಾ. ನೀರಜ್ ಪಾಟೀಲ ಅವರು ಕನ್ಸರ್ವೇಟೀವ್ ಪಕ್ಷದ ಬ್ರಿಟನ್ ನ ಶಿಕ್ಷಣ ಸಚಿವ ಜಸ್ಟಿನ್ ಗ್ರೀಟಿಂಗ್ ವಿರುದ್ಧ ಸೆಣಸುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ನೀರಜ್ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನು ಲೇಬರ್ ಪಕ್ಷದ ಹುರಿಯಾಳುವನ್ನಾಗಿ ಆರಿಸಲಾಗಿದೆ.

English summary
Dr Neeraj Patil an NRI from Karnataka, Consultant in Accident and Emergency Medicine and a Former Mayor of The London Borough of Lambeth has been chosen by the Labour Party as the candidate for Putney in the forthcoming Parliamentary elections in the UK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X