ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ಸ್ಫೋಟ: ಬಸ್ಸಿನಲ್ಲಿದ್ದ ನಾಲ್ವರು ಪ್ರವಾಸಿಗರು ಸಾವು

|
Google Oneindia Kannada News

ಕೈರೋ, ಡಿಸೆಂಬರ್ 29: ಈಜಿಪ್ಟಿನ ಕೈರೋದ ಗಿಜಾ ಪಿರಮಿಡ್ ಸಮೀಪದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಾಲ್ವರು ಪ್ರವಾಸಿಗರು ಬಲಿಯಾಗಿದ್ದಾರೆ.

ವಿಯೆಟ್ನಾಂನಿಂದ ಬಂದಿದ್ದ ಉಳಿದ 11 ಪ್ರವಾಸಿಗರು ಮತ್ತು ಈಜಿಪ್ಟ್‌ನ ಬಸ್ ಚಾಲಕ ಗೃಹ ತಯಾರಿತ ಸ್ಫೋಟಕದಿಂದ ಗಾಯಗೊಂಡಿದ್ದಾರೆ.

ಚಲಿಸುತ್ತಿದ್ದ ರೈಲಿನಲ್ಲಿ ಸ್ಫೋಟ, 11 ಪ್ರಯಾಣಿಗರಿಗೆ ಗಾಯ, ಓರ್ವ ಗಂಭೀರ ಚಲಿಸುತ್ತಿದ್ದ ರೈಲಿನಲ್ಲಿ ಸ್ಫೋಟ, 11 ಪ್ರಯಾಣಿಗರಿಗೆ ಗಾಯ, ಓರ್ವ ಗಂಭೀರ

ಅಲ್ ಹರಮ್ ಜಿಲ್ಲೆಯಲ್ಲಿನ ಗಿಜಾ ಪಿರಮಿಡ್ ಸಮೀಪದ ಮರಿಯುಟಿಯಾ ಸ್ಟ್ರೀಟ್‌ನಲ್ಲಿ ಈ ಸುಧಾರಿತ ಸ್ಫೋಟಕವನ್ನು ಇರಿಸಲಾಗಿತ್ತು. ಬಸ್ ಬರುತ್ತಿದ್ದಂತೆಯೇ ಬಾಂಬ್ ಸ್ಫೋಟಗೊಂಡಿದೆ.

kairo egypt four tourists killed giza pyramid bomb blast

ಬಸ್‌ನಲ್ಲಿ ವಿಯೆಟ್ನಾಂನ 14 ಪ್ರವಾಸಿಗರು, ಈಜಿಪ್ಟಿನ ಚಾಲಕ ಮತ್ತು ಪ್ರವಾಸಿ ಗೈಡ್ ಸೇರಿದಂತೆ ಒಟ್ಟು 16 ಮಂದಿ ಇದ್ದರು.

ಪ್ರದೇಶದಲ್ಲಿ ಕೂಡಲೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವ್ಯಾಪಕ ತಪಾಸಣೆ ನಡೆಸಿದ್ದಾರೆ.

ಸ್ಫೋಟದ ತೀವ್ರತೆಗೆ ಬಿಳಿ ಬಣ್ಣದ ಪ್ರವಾಸಿ ಬಸ್‌ನ ಕಿಟಕಿ ಬಾಗಿಲುಗಳು ಛಿದ್ರವಾಗಿವೆ. ಪ್ರಧಾನಿ ಮೊಸ್ತಾಫಾ ಮಡ್ಬೌಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಪ್ರವಾಸಿಗರುನ್ನು ಭೇಟಿಯಾಗಿ ಧೈರ್ಯ ಹೇಳಿದರು.

ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಸ್ಫೋಟ: ಕನಿಷ್ಠ 30 ಸಾವು ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಸ್ಫೋಟ: ಕನಿಷ್ಠ 30 ಸಾವು

ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟಿನ ಪ್ರವಾಸೋದ್ಯಮ ಭಯೋತ್ಪಾದನೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷದ ಜುಲೈನಲ್ಲಿ ಜರ್ಮನಿಯ ಇಬ್ಬರು ಪ್ರವಾಸಿಗರನ್ನು ಶಂಕಿತ ಜಿಹಾದಿಗಳು ಇರಿದು ಕೊಲೆ ಮಾಡಿದ್ದರು.

2015ರ ಅಕ್ಟೋಬರ್‌ನಲ್ಲಿ ರಷ್ಯಾದ ಪ್ರವಾಸಿಗರಿದ್ದ ಪ್ರಯಾಣಿಕ ವಿಮಾನವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಸಿನಾಯ್ ದ್ವೀಪದ ಬಳಿ ಹೊಡೆದುರುಳಿಸಿದ್ದರು. ವಿಮಾನದಲ್ಲಿದ್ದ ಎಲ್ಲ 224 ಪ್ರವಾಸಿಗರು ಮೃತಪಟ್ಟಿದ್ದರು.

English summary
Three Vietnam tourist and an egyptian guide were killed Friday in a bomb blast near Giza pyramids outside Cairo, Egypt
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X