ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್: ಮಹಿಳೆಯರ ಪ್ರತಿಭಟನೆ ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನಿಗಳು

|
Google Oneindia Kannada News

ಕಾಬೂಲ್, ಆಗಸ್ಟ್ 13: ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ನಡೆದ ಮಹಿಳಾ ಪ್ರತಿಭಟನಾಕಾರರ ರ್‍ಯಾಲಿಯನ್ನು ಚದುರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಕಳೆದ ವರ್ಷ ಆಗಸ್ಟ್ 15 ರಂದು ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನಿಗಳು ತಮ್ಮ ಕ್ರೂರತೆಯನ್ನು ಮುಂದುವರೆಸಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದಲ್ಲಿ ಯುಎಸ್ ಹಸ್ತಕ್ಷೇಪದ ಎರಡು ದಶಕಗಳ ಅವಧಿಯಲ್ಲಿ ಮಹಿಳೆಯರು ಗಳಿಸಿದ ಅಲ್ಪ ಲಾಭವನ್ನು ತಾಲಿಬಾನ್ ಸರ್ಕಾರ ಹಿಂದಕ್ಕೆ ತೆಗೆದುಕೊಂಡಿದೆ.

ಹೀಗಾಗಿ ಸುಮಾರು 40 ಮಹಿಳೆಯರು "ಬ್ರೆಡ್, ಕೆಲಸ ಮತ್ತು ಸ್ವಾತಂತ್ರ್ಯ" ಎಂದು ಪಠಿಸುತ್ತಾ ಕಾಬೂಲ್‌ನ ಶಿಕ್ಷಣ ಸಚಿವಾಲಯದ ಕಟ್ಟಡದ ಮುಂದೆ ಮೆರವಣಿಗೆ ನಡೆಸಿದರು. ಈ ವೇಳೆ ಮಹಿಳಾ ಹೋರಾಟಗಾರರನ್ನು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅವರನ್ನು ಚದುರಿಸಿದರು ಎಂದು ಎಎಫ್‌ಪಿ ವರದಿಗಾರ ವರದಿ ಮಾಡಿದೆ.

ಸಮೀಪದ ಅಂಗಡಿಗಳಲ್ಲಿ ಆಶ್ರಯ ಪಡೆದ ಕೆಲವು ಮಹಿಳಾ ಪ್ರತಿಭಟನಾಕಾರರನ್ನು ಬೆನ್ನಟ್ಟಿ ರೈಫಲ್‌ನಿಂದ ಥಳಿಸಲಾಗಿದೆ ಎನ್ನಲಾಗುತ್ತಿದೆ. ಪ್ರತಿಭಟನಕಾರರು "ಆಗಸ್ಟ್ 15 ಕರಾಳ ದಿನ" ಎಂಬ ಬ್ಯಾನರ್ ಅನ್ನು ಹಿಡಿದುಕೊಂಡು ಕೆಲಸ ಮಾಡುವ ಹಕ್ಕು ಮತ್ತು ರಾಜಕೀಯ ಭಾಗವಹಿಸುವಿಕೆಗೆ ಒತ್ತಾಯಿಸಿದರು.

Kabul: Taliban fired in air to disperse womens protest: Report


"ನ್ಯಾಯ, ನ್ಯಾಯ, ನ್ಯಾಯಕ್ಕಾಗಿ ಹೋರಾಟ. ನಾವು ಅಜ್ಞಾನದಿಂದ ಬೇಸತ್ತಿದ್ದೇವೆ" ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಅವರಲ್ಲಿ ಹಲವರು ಮುಖಕ್ಕೆ ಮುಸುಕು ಹಾಕಲಿಲ್ಲ. ಮಾತ್ರವಲ್ಲದೆ ಈ ಹಿಂದೆ ಮಹಿಳಾ ರ್‍ಯಾಲಿ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತರು ಅಫ್ಘಾನಿಸ್ತಾನ ಆಕ್ರಮಿತ ತಾಲಿಬಾನಿಗಳಿಂದ ಕ್ರೂರವಾಗಿ ಥಳಿಸಲ್ಪಟ್ಟಿದ್ದರು.

ಅಧಿಕಾರವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಮೃದುವಾದ ಇಸ್ಲಾಮಿಸ್ಟ್ ಆಳ್ವಿಕೆಯ ಭರವಸೆ ನೀಡಿತ್ತು. ಆದರೆ, ಈಗಾಗಲೇ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಹುಡುಗಿಯರಿಗೆ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಜೊತೆಗೆ ಮಹಿಳೆಯರನ್ನು ಅನೇಕ ಸರ್ಕಾರಿ ಉದ್ಯೋಗಗಳಿಂದ ತೆಗೆದುಹಾಕಲಾಗಿದೆ. ಮಾತ್ರವಲ್ಲದೆ ದೀರ್ಘ ಪ್ರವಾಸಗಳಲ್ಲಿ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಪ್ರತಿಯೊಂದು ಮಹಿಳೆ ಪುರುಷರೊಂದಿಗೇ ಓಡಾಡಬೇಕು.

Kabul: Taliban fired in air to disperse womens protest: Report

ಮೇ ತಿಂಗಳಲ್ಲಿ, ದೇಶದ ಸರ್ವೋಚ್ಚ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಜ್ಖುಂಡ್ಜಾದಾ, ಮಹಿಳೆಯರು ತಮ್ಮ ಮುಖಗಳನ್ನು ಒಳಗೊಂಡಂತೆ ಸಾರ್ವಜನಿಕವಾಗಿ ತಮ್ಮನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಆದೇಶಿಸಿದರು. ಕೆಲವು ಅಫಘಾನ್ ಮಹಿಳೆಯರು ಆರಂಭದಲ್ಲಿ ಸಣ್ಣ ಪ್ರತಿಭಟನೆಗಳನ್ನು ನಡೆಸುವ ಮೂಲಕ ನಿರ್ಬಂಧಗಳ ವಿರುದ್ಧ ಹಿಂದಕ್ಕೆ ತಳ್ಳಿದರು. ಆದರೆ ತಾಲಿಬಾನ್ ಅವರ ವಿರೋಧವನ್ನು ತಮ್ಮ ಬಂದೂಕು ಭಯದಲ್ಲಿ ಬಂಧಿಸಿದೆ. ಇಂದಿಗೂ ಅಲ್ಲಿನ ಮಹಿಳೆಯರಿಗೆ ಉಸಿರುಗಟ್ಟಿಸುವ ವಾತಾವರಣವಿದೆ.

English summary
The Taliban fired into the air to disperse a women's protest rally in Afghanistan's capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X