ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್‌ಗಳ ಕೈಯಲ್ಲಿ ಅಫ್ಘಾನಿಸ್ತಾನ ಸುರಕ್ಷಿತವಾಗಿದೆ ಎಂದ ರಷ್ಯಾ!

|
Google Oneindia Kannada News

ಅಫ್ಘಾನಿಸ್ತಾನ, ಆಗಸ್ಟ್ 17: ಸ್ಥಾಪಿತ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ಅಫ್ಘಾನಿಸ್ತಾನದಲ್ಲಿ ರಚನೆಯಾದ ತಾಲಿಬಾನ್‌ ಉಗ್ರರ ಸರ್ಕಾರವನ್ನು ವಿಶ್ವವೇ ಟೀಕಿಸುತ್ತಿದ್ದರೆ ರಷ್ಯಾ, ಪಾಕಿಸ್ತಾನ, ಚೀನಾ ಮತ್ತು ಇರಾನ್ ಸರ್ಕಾರ ಸ್ವಾಗತಿಸಿವೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಭೂಭಾಗಗಳಲ್ಲಿ ತಾಲಿಬಾನಿಗಳ ಆಕ್ರಮಣ ಮುಂದುವರಿದಿದೆ. ಬಹುತೇಕ ಜನರು ದಿಕ್ಕಾಪಾಲಾಗಿದ್ದು, ಮನೆಗಳಲ್ಲೇ ಉಳಿದಿರುವ ಮಂದಿ ರಕ್ಷಣೆಗಾಗಿ ಕಾದು ಕುಳಿತಿದ್ದಾರೆ.

ಅಫ್ಘಾನ್‌ನಿಂದ ಸೇನಾ ವಾಪಸ್ ನಿರ್ಧಾರಕ್ಕೆ ಬದ್ಧನಾಗಿ ನಿಂತಿದ್ದೇನೆ; ಬೈಡನ್ಅಫ್ಘಾನ್‌ನಿಂದ ಸೇನಾ ವಾಪಸ್ ನಿರ್ಧಾರಕ್ಕೆ ಬದ್ಧನಾಗಿ ನಿಂತಿದ್ದೇನೆ; ಬೈಡನ್

ಆದರೆ ತಾಲಿಬಾನ್ ಉಗ್ರರು ಮಾತ್ರ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಈಗಾಗಲೇ 24 ಗಂಟೆಗಳು ಕಳೆದಿವೆ. ಈ ಅವಧಿಯಲ್ಲಿ ಹಿಂದಿನ ಪ್ರಜಾಪ್ರಭುತ್ವ ಸರ್ಕಾರಕ್ಕಿಂತ ತಾಲಿಬಾನಿಗಳ ಕೈಯಲ್ಲಿ ಕಾಬೂಲ್​ ನಗರ ಸುರಕ್ಷಿತವಾಗಿದೆ ಎಂದು ರಷ್ಯಾ ಹೇಳಿದೆ.

ತಾಲೀಬಾನಿಗಳು ಕಾಬೂಲ್​ ನಗರವನ್ನು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರಿಸಿದ್ದಾರೆ ಎಂದು ಅಫ್ಘಾನಿಸ್ತಾನದ ರಷ್ಯಾ ರಾಜತಾಂತ್ರಿಕ ಡಿಮಿಟ್ರಿ ಝಿರನೋವ್ ಹೇಳಿದ್ದಾರೆ.

 ಅಶ್ರಫ್ ಘನಿಗಿಂತ ಉತ್ತಮವಾಗಿದೆ

ಅಶ್ರಫ್ ಘನಿಗಿಂತ ಉತ್ತಮವಾಗಿದೆ

ಅಫ್ಘಾನಿಸ್ತಾನದಲ್ಲಿನ ರಷ್ಯಾದ ರಾಯಭಾರಿ ಡಿಮಿಟ್ರಿ ಝಿರನೋವ್ ತಾಲಿಬಾನರ ನಡವಳಿಕೆಯನ್ನು 'ಉತ್ತಮ, ಸಕಾರಾತ್ಮಕ ಮತ್ತು ವ್ಯಾಪಾರ' ಲಕ್ಷಣ ಎಂದು ವಿವರಿಸಿದ್ದಾರೆ. "24 ಗಂಟೆಗಳ ಮೊದಲು ಕಾಬೂಲ್‌ನಲ್ಲಿ ಕಠಿಣ ಅಧಿಕಾರಿಗಳಿದ್ದರು. ಈಗ ತಾಲಿಬಾನ್ ಅಡಿಯಲ್ಲಿರುವ ಕಾಬೂಲ್‌ನ ಪರಿಸ್ಥಿತಿ (ಅಧ್ಯಕ್ಷ) ಅಶ್ರಫ್ ಘನಿಗಿಂತ ಉತ್ತಮವಾಗಿದೆ. ಎಂದು ಝಿರನೋವ್ ಮಾಸ್ಕೋದ ಎಖೋ ಮಾಸ್ಕ್ವಿ ರೇಡಿಯೋ ಕೇಂದ್ರದೊಂದಿಗೆ ಮಾತನಾಡುತ್ತಾ ಹೇಳಿದರು," ಎಂದು ರಾಯಿಟರ್ಸ್ ವರದಿ ಮಾಡಿದೆ.

ಇನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, "ತಾಲಿಬಾನ್ ಸಂಘಟನೆಯು ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ ಎಂದು ವಿಶ್ಲೇಷಿಸಿ ಇಂಗ್ಲಿಷ್ ಶಾಲೆಗಳಿಂದ ಅಫ್ಘನ್ ಸಂಸ್ಕೃತಿ ನಾಶವಾಗುತ್ತಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ನೀವು ಮತ್ತೊಂದು ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡು ಮಾನಸಿಕವಾಗಿ ಅಡಿಯಾಳಾಗುತ್ತೀರಿ. ಇದು ನಿಜವಾದ ಗುಲಾಮಗಿರಿಗಿಂತಲೂ ಕೆಟ್ಟದ್ದು. ಈಗ ತಾಲಿಬಾನ್ ಆ ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ," ಎಂದು ಬಣ್ಣಿಸಿದ್ದಾರೆ.

 ಚೀನಾಗೆ ಭಯ ಯಾಕೆ?

ಚೀನಾಗೆ ಭಯ ಯಾಕೆ?

ಸದ್ಯದ ಅಫ್ಘಾನಿಸ್ತಾನ ಪರಿಸ್ಥಿತಿ ಬಗ್ಗೆ ಚೀನಾ ಸರ್ಕಾರದ ವಕ್ತಾರರು ಪ್ರತಿಕ್ರಿಯಿಸಿ, ನಾವು ಹೊಸ ಸರ್ಕಾರಕ್ಕೆ ಸಹಕಾರ ನೀಡಲಿದ್ದೇವೆ. ತಾಲಿಬಾನ್ ಜತೆ ಸಹಕಾರ ಹಾಗೂ ಸ್ನೇಹ ಸಂಬಂಧ ಇರಿಸಿಕೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದಿದ್ದಾರೆ.

ಅಫ್ಘಾನಿಸ್ತಾನದ ಜತೆ ಚೀನಾ 76 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಚೀನಾದಲ್ಲಿ ಉಯಿಘರ್ ಮುಸ್ಲಿಮರಿದ್ದಾರೆ. ಈ ಹಿಂದೆ ಉಯಿಘುರ್ ಮುಸ್ಲಿಮವರು ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟು ದಾಳಿ ಮಾಡಿದ ಹಿನ್ನೆಲೆಯಲ್ಲಿ ಇವರನ್ನು ಚೀನಾ ಕಟುವಾಗಿ ನಡೆಸಿಕೊಳ್ಳುತ್ತಿದೆ. ಈ ವಿಚಾರದ ಬಗ್ಗೆ ವಿಶ್ವದ ಮುಸ್ಲಿಂ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ದೂರುತ್ತಿವೆ.
ಶತ್ರುವಿನ ಶತ್ರು ಮಿತ್ರ ಎನ್ನುವ ಮಾತಿನಂತೆ ಈಗ ತಾಲಿಬಾನ್ ಹಾಗೂ ಉಯಿಘುರ್‍ಗಳು ಒಂದಾಗುವ ಸಾಧ್ಯತೆ ಇದೆ. ಇದು ಚೀನಾದ ಆತಂಕ ಹೆಚ್ಚಿಸಿದ್ದು, ಈ ಕಾರಣಕ್ಕೆ ತಾಲಿಬಾನ್ ಜೊತೆ ಉತ್ತಮ ಸಂಬಂಧ ಬೆಳೆಸಲು ಚೀನಾ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
 ಇರಾನ್ ಬೆಂಬಲ

ಇರಾನ್ ಬೆಂಬಲ

ವಿಶ್ವದ ದೊಡ್ಡಣ್ಣ ಅಮೆರಿಕದ ವಿರುದ್ಧ ಕಿಡಿಕಾರುತ್ತಿರುವ ಇರಾನ್, ಅಫ್ಘಾನಿಸ್ತಾನದಲ್ಲಿ ಸ್ಥಾಪನೆಯಾದ ತಾಲಿಬಾನ್ ಸರ್ಕಾರವನ್ನು ಬೆಂಬಲಿಸಿದೆ. ಇರಾನ್ ಸರ್ಕಾರದ ಅಧಿಕಾರಿ ಹಿಂಸೆ ಮತ್ತು ಯುದ್ಧ ಎಂದಿಗೂ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ನಾಯಕ ಹಮೀದ್ ಕರ್ಜಾಯ್ ಸರ್ಕಾರ ರಚಿಸಲು ಅಫ್ಘನ್ ನಾಯಕರ ಸಮನ್ವಯ ಮಂಡಳಿ ರಚಿಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದು ಅಫ್ಘಾನಿಸ್ತಾನದಲ್ಲಿ ಮಾತುಕತೆ ಮತ್ತು ಶಾಂತಿಯುತ ಪರಿವರ್ತನೆಗೆ ಕಾರಣವಾಗಬಹುದು ಎಂದು ನಾವು ಭಾವಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

 ಅಫ್ಘಾನಿಸ್ತಾನದ ಖನಿಜ ಸಂಪತ್ತಿಗೆ ಚೀನಾ ಕೈ

ಅಫ್ಘಾನಿಸ್ತಾನದ ಖನಿಜ ಸಂಪತ್ತಿಗೆ ಚೀನಾ ಕೈ

ಈಗ ಇಪ್ಪತ್ತೊಂದು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉತ್ತುಂಗದಲ್ಲಿದ್ದಾಗ ಅದರ ಆದಾಯ ಮೂಲವಾಗಿ ಮುಖ್ಯಪಾತ್ರ ವಹಿಸಿದ್ದು, ಅಫೀಮಿನ ವ್ಯವಹಾರ. ಈಗ ಮತ್ತೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪರ್ವ ಶುರುವಾಗಿದೆ. ಲೂಟಿ, ಅತ್ಯಾಚಾರ ಇತ್ಯಾದಿಗಳ ತೃಷೆ ತೀರಿಸಿಕೊಳ್ಳುವುದು ಇದ್ದದ್ದೇ. ಆದರೆ ದೀರ್ಘಾವಧಿಯಲ್ಲಿ ತಾಲಿಬಾನ್ ಆದಾಯಕ್ಕೆ ಅವಲಂಬನೆ ಏನು ಎಂಬ ಕುತೂಹಲ ಇರಬಹುದು.

 ಲೀಥಿಯಂ ಮತ್ತು ಅಪರೂಪದ ಗಣಿ ನಿಕ್ಷೇಪಗಳು

ಲೀಥಿಯಂ ಮತ್ತು ಅಪರೂಪದ ಗಣಿ ನಿಕ್ಷೇಪಗಳು

ತಾಲಿಬಾನ್ ಜಗತ್ತಿನ ಅತಿದೊಡ್ಡ ಲೀಥಿಯಂ ನಿಕ್ಷೇಪದ ಮೇಲೆ ಬಿಗಿ ಹಿಡಿತ ಸಾಧಿಸುವ ಸಾಧ್ಯತೆ ಇದೆ. ನವೀಕೃತ ಇಂಧನ ಮೂಲಗಳಿಗೆ ಹೊರಳುತ್ತಿರುವ ಜಗತ್ತಿನ ಬ್ಯಾಟರಿ ಅವಶ್ಯಕತೆಗೆ ಲೀಥಿಯಂ ತುಂಬ ಮುಖ್ಯ. ಸದ್ಯಕ್ಕೆ ಇದರಲ್ಲಿ ಮುಂಚೂಣಿಯಲ್ಲಿರುವುದು ಚೀನಾ ದೇಶ ಮಾತ್ರ.

2010ರಲ್ಲಿ ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ಅಫ್ಘಾನಿಸ್ತಾನದಲ್ಲಿ 1 ಟ್ರಿಲಿಯನ್ ಡಾಲರ್ ಮೌಲ್ಯದ ಖನಿಜ ನಿಕ್ಷೇಪವಿದೆ ಎಂದು ಪತ್ತೆ ಹಚ್ಚಿದ್ದರು. ಈವರೆಗೆ ಇವುಗಳಿಂದ ಒಂದು ಬೊಗಸೆಯನ್ನೂ ತೆಗೆಯಲಾಗಿಲ್ಲ. ಲೀಥಿಯಂ ಜತೆಗೆ ತಾಮ್ರ, ಕೊಬಾಲ್ಟ್, ಚಿನ್ನಗಳ ನಿಕ್ಷೇಪವೂ ಅಫ್ಘಾನಿಸ್ತಾನದಲ್ಲಿ ಭರಪೂರವಾಗಿದೆ ಅನ್ನೋದು ಅಮೆರಿಕದ ಅಧ್ಯಯನ. ಇದರ ಲಾಭವನ್ನು ಚೀನಾ ಪಡೆದುಕೊಳ್ಳಲಿದೆ ಎಂಬ ಸುದ್ದಿ ಅಂತಾರಾಷ್ಟ್ರೀಯ ವಲಯದಲ್ಲಿ ಕೇಳಿಬಂದಿದೆ.

Recommended Video

ಹೆಲಿಕಾಪ್ಟರ್ ತುಂಬಾ ಹಣ ತುಂಬಿಕೊಂಡು ಅಫ್ಘಾನಿಸ್ತಾನದಿಂದ ಓಡಿಹೋದ ಅಶ್ರಫ್ ಘನಿ! | Oneindia Kannada

English summary
Russia said the city of Kabul was safer in the hands of the Taliban than the previous democratic government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X