ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್: ಆತ್ಮಾಹುತಿ ದಾಳಿಗೆ ಹಲವಾರು ಮಂದಿ ಸಾವು

|
Google Oneindia Kannada News

ಕಾಬೂಲ್, ಫೆಬ್ರಾರಿ 11: ಸರ್ಕಾರಿ ಸ್ವಾಮ್ಯದ ರಕ್ಷಣಾ ಕಚೇರಿಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆದಿದೆ. ಈ ದುರ್ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಅಫ್ಘಾನಿಸ್ತಾನ ರಾಜಧಾನಿಯಲ್ಲಿ ಸಂಭವಿಸಿದ ದೊಡ್ಡ ದಾಳಿ ಇದಾಗಿದೆ.

ಮಿಲಿಟರಿ ಸಿಬ್ಬಂದಿ ಸೇರಿದಂತೆ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಆಂತರಿಕ ಭದ್ರತಾ ಸಚಿವಾಲಯದ ವಕ್ತಾರರಾದ ನಸ್ರತ್ ರಹಿಮಿ ತಿಳಿಸಿದ್ದಾರೆ. ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಈ ಪೈಕಿ ಐವರು ನಾಗರಿಕರಿದ್ದಾರೆ. ಗಾಯಗೊಂಡವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮರ್ಷಲ್ ಫಹೀಂ ಮಿಲಿಟರಿ ಅಕಾಡೆಮಿ ಮುಖ್ಯದ್ವಾರದ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ರೈಟರ್ಸ್ ವರದಿ ಮಾಡಿದೆ.

Kabul hit by suicide attack, casualties feared: Reports

ಪಶ್ಚಿಮ ಕಾಬೂಲ್ ನಲ್ಲಿ ನಡೆದ ಈ ಘಟನೆಯ ಪ್ರತ್ಯಕ್ಷದರ್ಶಿಗಳೂ ಪ್ರತಿಕ್ರಿಯಿಸಿ, ದೊಡ್ಡ ಮಟ್ಟದ ಸ್ಫೋಟದ ಸದ್ದು ಕೇಳಿಸಿತು. ನಂತರ ಗುಂಡಿನ ಚಕಮಕಿಯ ಸದ್ದು ಹೆಚ್ಚಾಯಿತು, ಆಂಬುಲೆನ್ಸ್ ಗಳು ಹೆಚ್ಚು ಓಡಾಡತೊಡಗಿದವು ಎಂದು ಸಮೀಪದ ನಿವಾಸಿ ಸಮೀಯುಲ್ಲಾ ಹೇಳಿದ್ದಾರೆ.

English summary
At least five people have been killed after a suicide attack targeted a government-run defence ministry in Kabul, the first major attack in the Afghan capital in months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X