ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖದ ಪಾರ್ಶ್ವವಾಯು ಕಾಯಿಲೆಗೆ ತುತ್ತಾದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್

|
Google Oneindia Kannada News

ನ್ಯೂಯಾರ್ಕ್, ಜೂನ್ 11: ಅಮೆರಿಕದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಮುಖದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಮೆರಿಕ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ 28 ವರ್ಷದ ಪಾಪ್ ತಾರೆ ತಾವು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಟೊರೊಂಟೋದಲ್ಲಿ ನಡೆಯಬೇಕಿದ್ದ ಸಂಗೀತ ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳ ಮೊದಲು ತಮ್ಮ ಆರೋಗ್ಯ ಕಾರಣಗಳಿಂದ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದ್ದರು. ಇದೀಗ ತಮಗಿರುವ ಆರೋಗ್ಯ ಸಮಸ್ಯೆ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ರಾಮ್ಸೇ ಹಂಟ್ ಸಿಂಡ್ರೋಮ್ (Ramsay hunt syndrome) ವೈರಸ್ ಜಸ್ಟಿನ್ ಕಾಯಿಲೆಗೆ ಕಾರಣವಾಗಿದೆ. ಈ ವೈರಸ್ ಸೋಂಕಿನಿಂದ ಮುಖಕ್ಕೆ ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗಿದ್ದಾರೆ.

ಕೇರಳದಲ್ಲಿ ವೆಸ್ಟ್ ನೈಲ್ ಜ್ವರದಿಂದ ಓರ್ವ ಸಾವು: ಏನಿದು ಸೋಂಕು? ಹೇಗೆ ಹರಡುತ್ತದೆ?ಕೇರಳದಲ್ಲಿ ವೆಸ್ಟ್ ನೈಲ್ ಜ್ವರದಿಂದ ಓರ್ವ ಸಾವು: ಏನಿದು ಸೋಂಕು? ಹೇಗೆ ಹರಡುತ್ತದೆ?

ಇನ್‌ಸ್ಟಾಮ್‌ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿರುವ ಜಸ್ಟಿನ್, ಮುಖಕ್ಕೆ ಪಾರ್ಶ್ವವಾಯು ಹೊಡೆದಿರುವುದನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಕೆನಡಾ ಮೂಲದ- ಜಸ್ಟಿನ್ ಇನ್‌ಸ್ಟಾಗ್ರಾಮ್‌ನಲ್ಲಿ 240 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

Justin Bieber Suffered From Partial Facial Paralysis Which Is Caused By The Ramsay Hunt Syndrome

"ಅಭಿಮಾನಿಗಳು ನಾನು ಕೆಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇನೆ ಎಂದು ಹೇಳುತ್ತಿದ್ದೀರಿ. ಆದರೆ ನನ್ನ ದೈಹಿಕ ಪರಿಸ್ಥಿತಿಯಿಂದ ಹಾಡು ಹಾಡಲಾಗುತ್ತಿಲ್ಲ. ನಾನು ಈಗ ಹಾಡುವ ಸ್ಥಿತಿಯಲ್ಲಿ ಇಲ್ಲ. ನಾನು ವೇಗವನ್ನು ಕಡಿಮೆ ಮಾಡಬೇಕು ಎಂದು ದೇಹ ಹೇಳುತ್ತಿದೆ, ನಿಮಗಿದು ಅರ್ಥವಾಗಿದೆ ಎಂದು ಭಾವಿಸುವೆ" ಎಂದು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ವ್ಲಾದಿಮಿರ್ ಪುಟಿನ್ ಕಣ್ಣು ಮಂಜು, ಅವರು ಬದುಕೋದು ಮೂರೇ ವರ್ಷವಾ?ವ್ಲಾದಿಮಿರ್ ಪುಟಿನ್ ಕಣ್ಣು ಮಂಜು, ಅವರು ಬದುಕೋದು ಮೂರೇ ವರ್ಷವಾ?

"ನಾನು ನಗಲು ಆಗುತ್ತಿಲ್ಲ, ನನ್ನ ಮುಖದ ಒಂದು ಕಡೆಗೆ ಸಂಪೂರ್ಣ ಪಾರ್ಶ್ವವಾಯು ಹೊಡೆದಿದೆ. ನಾನು ಈ ಸಮಯದಲ್ಲಿ ವಿಶ್ರಾಂತಿ ಪಡೆಯುವೆ. ಸಂಪೂರ್ಣ ಗುಣಮುಖನಾಗಿ ಮತ್ತೆ ನಿಮ್ಮ ಮುಂದೆ ಬರುವೆ. ನಾನು ಏನು ಮಾಡಲಿಕ್ಕಾಗಿ ಹುಟ್ಟಿದ್ದೆನೋ ಅದನ್ನು ಮಾಡುತ್ತೇನೆ" ಎಂದು ಜಸ್ಟಿನ್ ಹೇಳಿದ್ದಾರೆ.

ಜಸ್ಟಿನ್ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 15 ಮಿಲಿಯನ್ ವೀಕ್ಷಣೆ ಕಂಡಿದೆ. ನೆಚ್ಚಿನ ಗಾಯಕನ ಆರೋಗ್ಯ ಸ್ಥಿತಿ ಕಂಡು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್ ಕಾರಣದಿಂದ ಜಸ್ಟಿನ್ ಬೀಬರ್ ಮೊದಲ ಎರಡು ಕಾರ್ಯಕ್ರಮ ರದ್ದಾಗಿದ್ದವು. ಆರೋಗ್ಯ ಸಮಸ್ಯಯಿಂದ ಮೂರನೇ ಬಾರಿಗೆ ಜಸ್ಟಿನ್ ಕಾರ್ಯಕ್ರಮ ರದ್ದು ಮಾಡಿದ್ದರು. ಮತ್ತೆ ಸಂಗೀತ ನೆಚ್ಚಿನ ಗಾಯಕನ ಹಾಡುಕೇಳಲು ಜಸ್ಟಿನ್ ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಅವರ ಅಭಿಮಾನಿಗಳು ಕಾಯಬೇಕಿದೆ.

Justin Bieber Suffered From Partial Facial Paralysis Which Is Caused By The Ramsay Hunt Syndrome

ಏನಿದು ರಾಮ್ಸೆ ಹಂಡ್ ಸಿಂಡ್ರೋಮ್?

ರಾಮ್ಸೇ ಹಂಟ್ ಸಿಂಡ್ರೋಮ್ ಎಂಬುದು ಶಿಂಗಲ್ಸ್ ಅಥವಾ ಸರ್ಪಸುತ್ತು ಕಾಯಿಲೆಯ ಅಡ್ಡ ಪರಿಣಾಮವಾಗಿದ್ದು ಇದು ಕಿವಿಯ ಸಮೀಪದ ಮುಖದ ನರವನ್ನು ಬಾಧಿಸಿದಾಗ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗುವಂತೆ ಮಾಡುತ್ತದೆ. ಮುಂದೆ ಇದು ಕಿವುಡುತನಕ್ಕೂ ಕಾರಣವಾಗಬಹುದು.

"ಬಾಲ್ಯದಲ್ಲಿ ಚಿಕನ್ ಪಾಕ್ಸ್ ಹೊಂದಿರುವ ವ್ಯಕ್ತಿಯಲ್ಲಿ ನಿಷ್ಕ್ರಿಯವಾಗಿ ಉಳಿಯುವ ವೈರಸ್" ಎಂದು ಯುಎಸ್ ಮೂಲದ ಅಪರೂಪದ ಅಸ್ವಸ್ಥತೆಗಳ ರಾಷ್ಟ್ರೀಯ ಸಂಸ್ಥೆ ಹೇಳಿದೆ.

ರೋಗದ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಮುಖದ ಒಂದು ಬದಿಯಲ್ಲಿ ಇಳಿ ಬೀಳುವಿಕೆ, ಪಾರ್ಶ್ವವಾಯು ಮತ್ತು ದೌರ್ಬಲ್ಯವನ್ನು ಒಳಗೊಂಡಿರುತ್ತದೆ, ಇದು ತಿನ್ನುವಲ್ಲಿ ತೊಂದರೆಗೆ ಕಾರಣವಾಗುತ್ತದೆ. ಅಸ್ವಸ್ಥತೆಯು ಕಿವಿ, ನಾಲಿಗೆ ಅಥವಾ ಬಾಯಿಯ ಮೇಲೆ ದದ್ದುಗಳು, ಕಿವಿ ಮತ್ತು ತಲೆತಿರುಗುವಿಕೆಯಲ್ಲಿ ನೋವು ಉಂಟಾಗುತ್ತದೆ.

English summary
Famous pop star, 28-year-old Justin Bieber posted about his problem with their fans on Instagram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X