ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿಯಾದಲ್ಲಿ ಕೊರೊನಾ ಪತ್ತೆಗೆ ಇರುವುದು ಒಂದೇ ಒಂದು ಯಂತ್ರ

|
Google Oneindia Kannada News

ಇಡ್ಲಿಬ್, ಏಪ್ರಿಲ್ 15: ಸಿರಿಯಾ ಜನತೆ ಕೊರೊನಾ ವೈರಸ್‌ನ ಜೊತೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೊರೊನಾ ವೈರಸ್‌ ಪತ್ತೆಗೆ ಇರುವುದು ಒಂದೇ ಯಂತ್ರ.

ಕೊರೊನಾ ವೈರಸ್ ಇಡೀ ವಿಶ್ವಕ್ಕೆ ಹರಡಿದೆ. ಎಲ್ಲರೂ ನಿತ್ಯ ಕನಸಿನಲ್ಲೂ ಕೊರೊನಾ ಕನವರಿಸುವಂತಾಗಿದೆ. ಆದರೆ 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರು ಸಿರಿಯಾದಲ್ಲಿ ಕೊವಿಡ್ 19 ಪತ್ತೆ ಹಚ್ಚುವ ಯಂತ್ರ ಮಾತ್ರ ಇರುವುದು ಒಂದೇ ಒಂದು.

ಕೊರೊನಾ ವಿರುದ್ಧ ಹೋರಾಟ: ಅಮೆರಿಕ, ಚೀನಾ ಒಗ್ಗಟ್ಟಿಗೆ WHO ಕರೆ ಕೊರೊನಾ ವಿರುದ್ಧ ಹೋರಾಟ: ಅಮೆರಿಕ, ಚೀನಾ ಒಗ್ಗಟ್ಟಿಗೆ WHO ಕರೆ

ಇಷ್ಟಾದರೂ ಸಿರಿಯಾ ಸರ್ಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ. ನಿತ್ಯ ಸಾವಿರಾರು ಮಂದಿಯನ್ನು ಒಂದೇ ಯಂತ್ರದ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ.ಇಡ್ಲಿಬ್‌ನ ವೈದ್ಯ ಮೊಹಮ್ಮದ್ ಶಾಹಿಮ್ ಮಕ್ಕಿ ಈ ವಿಷಯ ತಿಳಿಸಿದ್ದಾರೆ.

Just One Machine Equipped To Run A Test To Detect Coronavirus In Syria

300 ಮಂದಿ ಪೈಕಿ ಕೇವಲ 120 ಮಂದಿಯ ಪರೀಕ್ಷೆ ಮಾಡಲಾಗಿತ್ತು. ಆದರೆ ಆ ಎಲ್ಲಾ ವರದಿಗಳು ನೆಗೆಟಿವ್ ಬಂದಿದ್ದರಿಂದ ವೈದ್ಯರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.ಅಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲ ಇದು ಈಗಿನ ಕತೆಯಲ್ಲ ಸಾಕಷ್ಟು ವರ್ಷಗಳಿಂದಲೂ ಪರಿಸ್ಥಿತಿ ಹಾಗೆಯೇ ಇದೆ.

5 ಸಾವಿರ ಮಂದಿಯ ರಕ್ತದ, ಸ್ವ್ಯಾಬ್ ಮಾದರಿಗಳು ಬಂದಿವೆ ಆದರೆ ವೇಗವಾಗಿ ಪರೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ.ಒಂದೇ ಯಂತ್ರದಿಂದ ಎಲ್ಲರನ್ನು ಪರೀಕ್ಷೆ ಮಾಡಿದಾಗ ಯಂತ್ರ ಹಾಳಾಗುವ ಸಾಧ್ಯತೆ ಇದೆ. ಅಥವಾ ಅದು ನೀಡುವ ವರದಿಯ ಬಗ್ಗೆಯೂ ಅನುಮಾನ ಮೂಡಲು ಆರಂಭವಾಗುತ್ತದೆ.

ಮೊದಲು ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕ್ಯಾಂಪ್‌ಗಳಲ್ಲಿ ವಾಸಿಸುತ್ತಿರುವವರನ್ನು ತೆರವುಗೊಳಿಸಿ ಬೇರೆಡೆಗೆ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

English summary
Syria is bracing for its fight against the coronavirus pandemic with just one machine equipped to run a test to detect the rapidly spreading pathogen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X