ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಕ್ವೆಡಾರ್ : ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಬಂಧನ

|
Google Oneindia Kannada News

ಲಂಡನ್, ಏಪ್ರಿಲ್ 11: ಈಕ್ವೆಡಾರ್ ಪೌರತ್ವ ಪಡೆದು ಆಶ್ರಯ ಪಡೆದುಕೊಂಡಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಅವರನ್ನು ರಾಯಭಾರ ಕಚೇರಿಯಲ್ಲಿ ಲಂಡನ್ ಪೊಲೀಸರು ಇಂದು ಬಂಧಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಿರಾಶ್ರಿತರಾಗಿದ್ದ ಅಸ್ಸಾಂಜೆ ಅವರಿಗೆ ಅಧಿಕೃತವಾಗಿ ಈಕ್ವೆಡಾರ್ ಪ್ರಜೆಯಾಗಿದ್ದರೂ ಹಳೆ ಪ್ರಕರಣವೊಂದು ಎಡಬಿಡದೆ ಕಾಡತೊಡಗಿತ್ತು. ಸ್ವೀಡನ್ ನಲ್ಲಿ ಅಸ್ಸಾಂಜೆ ವಿರುದ್ಧ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಕೆ ಕೋರ್ಟಿನಿಂದ ಜಾಮೀನು ಪಡೆದುಕೊಂಡಿದ್ದರು.

ಆಣ್ಣಾ ಹಜಾರೆ ಚಳವಳಿಗೆ ವಿಕಿಲೀಕ್ಸ್ ಸ್ಫೂರ್ತಿ? ಆಣ್ಣಾ ಹಜಾರೆ ಚಳವಳಿಗೆ ವಿಕಿಲೀಕ್ಸ್ ಸ್ಫೂರ್ತಿ?

ಸ್ವೀಡನ್ ಗೆ ತೆರಳಿದರೆ ಯುಎಸ್ ಪೊಲೀಸರು ಹುಡುಕಿಕೊಂಡು ಬಂದು ಬಂಧಿಸುತ್ತಾರೆ. ಯುಎಸ್ ಆಡಳಿತಕ್ಕೆ ಸಂಬಂಧಪಟ್ಟ ಅನೇಕ ರಹಸ್ಯ ಮಾಹಿತಿ ಬಹಿರಂಗವಾಗದಂತೆ ತಡೆಯಲು ಎಲ್ಲಾ ರೀತಿ ಪ್ರಯತ್ನಿಸಲಾಗುತ್ತಿದೆ ಎಂದಿದ್ದರು.

Julian Assange arrested at Ecuadorian embassy

ಹೀಗಾಗಿ, ಲಂಡನ್ನಿನ ವೆಸ್ಟ್ ಮಿನಿಸ್ಟರ್ ಕೋರ್ಟಿನಿಂದ ಜಾಮೀನು ಪಡೆದು ಈಕ್ವೆಡಾರ್ ಗೆ ಬಂದು ನೆಲೆಸಿದ್ದರು. ಆದರೆ, ಜಾಮೀನು ವೇಳೆ ವಿಧಿಸಿದ್ದ ಷರತ್ತುಗಳನ್ನು ಮುರಿದಿರುವುದರಿಂದ ಅಸ್ಸಾಂಜೆ ಅವರನ್ನು ಯುಕೆಗೆ ಕರೆ ತಂದು ಮತ್ತೊಮ್ಮೆ ಕಟಕಟೆಗೆ ಮುಂದೆ ನಿಲ್ಲಿಸಲು ಪೊಲೀಸರು ಮುಂದಾಗಿದ್ದಾರೆ.

ವಿಕಿಲೀಕ್ಸ್ ಸ್ಪಷ್ಟನೆ : ತೀವ್ರ ಮುಜುಗರಕ್ಕೀಡಾದ ಮೋದಿವಿಕಿಲೀಕ್ಸ್ ಸ್ಪಷ್ಟನೆ : ತೀವ್ರ ಮುಜುಗರಕ್ಕೀಡಾದ ಮೋದಿ

ಏನಿದು ಗೊಂದಲ?: ಆಸ್ಟ್ರೇಲಿಯಾ ಮೂಲದ ಜೂಲಿಯನ್ ಅಸಾಂಜೆ 2012ರಲ್ಲಿ ಸ್ವೀಡನ್ ಗೆ ಹಸ್ತಾಂತರವಾಗುವ ಭಯದಿಂದ ಈಕ್ವೆಡಾರ್ ರಾಯಭಾರಿ ಕಚೇರಿ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಅವರ ಮೇಲೆ ಸ್ವೀಡನ್ನಿನಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ ಅಸಾಂಜೆಗೆ ಸ್ವೀಡನ್ ಗಿಂತ ಹೆಚ್ಚಾಗಿ ಅಮೆರಿಕಾದ ಭಯವಿತ್ತು. ಸೇನೆ ಮತ್ತು ರಾಜತಾಂತ್ರಿಕ ದಾಖಲೆಗಳನ್ನು ವಿಕಿಲೀಕ್ಸ್ ನಲ್ಲಿ ಪ್ರಕಟಿಸಿದ್ದಕ್ಕಾಗಿ ಅಲ್ಲಿ ವಿಚಾರಣೆ ಎದುರಿಸಬೇಕಾಗಿ ಬರಬಹುದು ಎಂಬ ಭಯದಿಂದ ಈಕ್ವೆಡಾರ್ ಆಶ್ರಯ ಪಡೆದುಕೊಂಡಿದ್ದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

2017 ವರ್ಷವಷ್ಟೇ ಸ್ವೀಡನ್ ಅಸಾಂಜೆ ಮೇಲಿದ್ದ ಅತ್ಯಾಚಾರ ಪ್ರಕರಣವನ್ನು ಕೈಬಿಟ್ಟಿತ್ತು. ಆದರೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸುವುದಾಗಿ ಬ್ರಿಟನ್ ಹೇಳಿದ್ದರಿಂದ ಅಸಾಂಜೆ ಇನ್ನೂ ರಾಯಭಾರ ಕಚೇರಿಯಲ್ಲೇ ಆಶ್ರಯ ಪಡೆದಿದ್ದರು.

ಈಕ್ವೆಡಾರ್ ತನಗೆ ಪೌರತ್ವ ನೀಡುತ್ತಿದ್ದಂತೆ ಈಕ್ವೆಡಾರ್ ಫುಟ್ಬಾಲ್ ತಂಡದ ಜೆರ್ಸಿ ತೊಟ್ಟ ಚಿತ್ರವನ್ನು ಅಸಾಂಜೆ ಟ್ವೀಟ್ ಮಾಡಿದ್ದಾರೆ. ಈಕ್ವೆಡಾರ್ ರಾಯಭಾರ ಕಚೇರಿಯಿಂದ ಅಸಾಂಜೆಯನ್ನು ಹೊರತರಲು ಅವರಿಗೆ ರಾಜತಾಂತ್ರಿಕ ಹುದ್ದೆ ನೀಡುವಂತೆ ಬ್ರಿಟನ್ ಗೆ ಈಕ್ವೆಡಾರ್ ಮನವಿ ಮಾಡಿಕೊಂಡಿತ್ತು. ಆದರೆ ಈಕ್ವೆಡಾರ್ ಮನವಿಯನ್ನು ಬ್ರಿಟನ್ ತಿರಸ್ಕರಿಸಿದ್ದು ರಾಯಭಾರ ಕಚೇರಿಯಿಂದ ಹೊರ ಬಂದು ಅಸಾಂಜೆ ವಿಚಾರಣೆ ಎದುರಿಸಬೇಕು ಎಂದು ತಿರುಗೇಟು ನೀಡಿದೆ.

English summary
WikiLeaks founder arrested for breach of bail at London embassy where he took refuge for seven years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X