ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರೀ ಪ್ರತಿಭಟನೆಗೆ ಮಣಿದ ಜೋರ್ಡಾನ್ ಪ್ರಧಾನಿ ರಾಜೀನಾಮೆ

By Sachhidananda Acharya
|
Google Oneindia Kannada News

ಅಮಾನ್, ಜೂನ್ 4: ಮಿಂಚಿನ ಬೆಳಣಿಗೆಯಲ್ಲಿ ದೇಶದಾದ್ಯಂತ ಎದ್ದ ಪ್ರತಿಭಟನೆಯ ಬಿರುಗಾಳಿಗೆ ಮಣಿದು ಜೋರ್ಡಾನ್ ಪ್ರಧಾನಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಾ ಅಬ್ದುಲ್ಲಾ - 2 ಅವರ ಜೊತೆ ಸಭೆ ನಡೆಸಿದ ಪ್ರಧಾನಿ ಹನಿ ಅಲ್ ಮುಲ್ಕಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ಬೆಲೆ ಏರಿಕೆ ಮತ್ತು ನೂತನ ತೆರಿಗೆ ಸುಧಾರಣಾ ಮಸೂದೆ ವಿರೋಧಿಸಿ ಜೋರ್ಡಾನ್ ನಲ್ಲಿ ತೀವ್ರ ಪ್ರತಿಭಟನೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿಗೆ ರಾಜೀನಾಮೆ ನೀಡುವಂತೆ ಇಲ್ಲಿನ ರಾಜ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅವರೀಗ ರಾಜೀನಾಮೆ ನೀಡಿದ್ದಾರೆ.

ಇಲ್ಲಿನ ಸರಕಾರದ ನಿರ್ಧಾರ ಖಂಡಿಸಿ ರಾಜಧಾನಿ ಅಮಾನ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಕಳೆದ 4 ದಿನಗಳಿಂದ ತೀವ್ರ ಪ್ರತಿಭಟನೆ ನಡೆಯುತ್ತಿತ್ತು. ಲಕ್ಷಾಂತರ ಜನ ಬೀದಿಗೆ ಬಂದು ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿದ್ದರು. ಈ ಕಾರಣಕ್ಕೆ ಅವರು ಖುರ್ಚಿ ತೊರೆದು ಹೊರ ನಡೆದಿದ್ದಾರೆ.

Jordan PM Mulki resigns amid mass protests

ದೇಶ ವಲಸಿಗರ ಸಮಸ್ಯೆ, ಆರ್ಥಿಕ ಅಸ್ಥಿರತೆಯಂಥ ಸಮಸ್ಯೆಯಲ್ಲಿ ಬಳಲುತ್ತಿದ್ದಾಗ ಮುಲ್ಕಿ 2016ರಲ್ಲಿ ಪ್ರಧಾನಿ ಹುದ್ದೆಗೆ ಏರಿದ್ದರು. ದೇಶದಲ್ಲಿ ಸಾಲಬಾಧೆಯಿಂದ ನಲುಗುತ್ತಿದ್ದು, ಈ ಸಾಲ ತೀರಿಸಲು ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ಸರಕಾರ ಏರಿಸಿತ್ತು. ಇಂಧನ ಬೆಲೆಯನ್ನು ಐದು ಪಟ್ಟು ಮತ್ತು ವಿದ್ಯುತ್ ದರವನ್ನು ಶೇಕಡಾ 55ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ ಇದು ಜನರಿಗೆ ಹಿಡಿಸಿರಲಿಲ್ಲ.

ಇದೀಗ ಜನರೇ ಬೀದಿಗೆ ಇಳಿದು ಬೆಲೆ ಏರಿಕೆ ಮಾಡಿದ ಪ್ರಧಾನಿಯನ್ನು ಮನೆಗೆ ಕಳುಹಿಸಿದ್ದಾರೆ.

English summary
Jordanian Prime Minister Hani al-Mulki submitted his resignation toKing Abdullah II amid mass protests over price hikes and an income tax reform bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X