ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೈಲಟ್ ಹತ್ಯೆಗೆ ಪ್ರತೀಕಾರ, ಉಗ್ರರನ್ನು ಬಲಿ ಹಾಕಿದ ಜೋರ್ಡಾನ್

By Mahesh
|
Google Oneindia Kannada News

ಅಮ್ಮಾನ್, ಫೆ.4: ಜೋರ್ಡಾನ್ ಮೂಲದ ಪೈಲಟ್ ಒಬ್ಬರನ್ನು ಇರಾಕಿ ಉಗ್ರಸಂಘಟನೆ ಜೀವಂತವಾಗಿ ಸುಟ್ಟು ಹಾಕಿದ ಘಟನೆಗೆ ವಿಶ್ವದೆಲ್ಲೆಡೆಯಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಉಗ್ರರ ಈ ದುಷ್ಕೃತ್ಯಕ್ಕೆ ಜೋರ್ಡಾನ್ ತಕ್ಕ ಉತ್ತರ ನೀಡಿದೆ. ಸೆರೆಯಲ್ಲಿದ್ದ ಇಬ್ಬರು ಐಎಸ್ಐಎಸ್ ಉಗ್ರರನ್ನು ನೇಣಿಗೇರಿಸಿದೆ.

ಅಲ್ ಖೈದಾಗೆ ಮಹಿಳಾ ಸೂಸೈಡ್ ಬಾಂಬರ್ ಸೇರಿದಂತೆ ಇಬ್ಬರು ಉಗ್ರರನ್ನು ನೇಣಿಗೇರಿಸಿರುವುದಾಗಿ ಜೋರ್ಡಾನ್ ಪ್ರಕಟಿಸಿದೆ. ಐಎಸ್ಐಎಸ್ ಉಗ್ರರನ್ನು ಸದೆಬಡೆಯಲು ಜೋರ್ಡಾನ್ ಸಿದ್ಧವಾಗಿದೆ ಎಂದು ಸರ್ಕಾರದ ವಕ್ತಾರ ಅಲ್ ಮೊಮಾನಿ ಹೇಳಿದ್ದಾರೆ.

Jordan executes 2 prisoners after IS killing of pilot

ಮೃತ ಉಗ್ರರನ್ನು ಸಾಜಿದಾ ಅಲ್ ರಿಷಾವಿ ಹಾಗೂ ಜಿಯಾದ್ ಅಲ್ ಕರ್ಬೌಲಿ ಎಂದು ಗುರುತಿಸಲಾಗಿದೆ. ಜೋರ್ಡಾನ್ ರಾಜಧಾನಿ ಅಮ್ಮಾನ್ ನಲ್ಲಿ 2005ರಲ್ಲಿ ಹೋಟೆಲ್ ತ್ರಿವಳಿ ಬಾಂಬ್ ಸ್ಫೋಟಕ್ಕೆ ಕಾರಣಳಾದ ಸಾಜಿದಾ 12 ಜನರನ್ನು ಬಲಿ ಪಡೆದುಕೊಂಡಿದ್ದಳು.

ಪೈಲಟ್ ದುರಂತ ಅಂತ್ಯ: ಕಳೆದ ಡಿಸೆಂಬರ್ ನಲ್ಲಿ ಎಫ್​-16 ಯುದ್ಧ ವಿಮಾನ ಪತನಗೊಂಡಿತ್ತು. ಈ ವೇಳೆ ಜೋರ್ಡಾನ್ ಮೂಲದ ಮಾಜ್​ ಅಲ್ ಕಸಾಬೆ ಎಂಬ ಪೈಲಟ್ ಐಸಿಸ್​ ಉಗ್ರರಿಗೆ ಸಿಕ್ಕಿಬಿದ್ದಿದ್ದ. ಈ ಪೈಲಟ್​ನನ್ನು ಬಂಧಿಸಿ ಚಿತ್ರಹಿಂಸೆ ಕೊಟ್ಟಿದ್ದ ಉಗ್ರರು, ಈಗ ಸಜೀವ ದಹನ ಮಾಡಿದ್ದಾರೆ.

ಕಬ್ಬಿಣ ಸರಳಿರುವ ಬೋನ್ ನಲ್ಲಿ ಪೈಲಟ್ ಇರಿಸಿ ಪೆಟ್ರೋಲ್​ ಸುರಿದು ಜೀವಂತವಾಗಿ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಈ ದೃಶ್ಯಗಳನ್ನು ಸ್ವತಃ ಉಗ್ರರೇ ರಿಲೀಸ್​ ಮಾಡಿದ್ದಾರೆ. ಇದಕ್ಕೂ ಮುನ್ನ ಇಬ್ಬರು ಜಪಾನಿಯರನ್ನು ಉಗ್ರರು ಬಲಿ ಹಾಕಿದ್ದರು.

English summary
In retaliation to the killing of Jordanian pilot by Islamic State militants, Jordan has executed its two prisoners, including a female suicide bomber from al-Qaeda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X