ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ, ಇಸ್ರೇಲ್, ಅರಬ್ ರಾಷ್ಟ್ರಗಳ ನಡುವೆ ಒಗ್ಗಟ್ಟಿನ ಮಂತ್ರ

|
Google Oneindia Kannada News

ವಾಶಿಂಗ್ಟನ್, ಆಗಸ್ಟ್.14: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಿನ್ಸ್ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅವರು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧವನ್ನು ಸಾಮಾನ್ಯೀಕರಣಗೊಳಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಲಿದ್ದಾರೆ. ಈ ಐತಿಹಾಸಿಕ ರಾಜತಾಂತ್ರಿಕ ಪ್ರಗತಿಯು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿಯನ್ನು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ.

ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!

ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ಹೊಸ ಹಾದಿಯನ್ನು ರೂಪಿಸಲು ಈ ಪ್ರದೇಶದ ದೊಡ್ಡ ಸಾಮರ್ಥ್ಯವನ್ನು ಸರಳೀಕರಣಗೊಳಿಸಲಾಗುತ್ತಿದೆ. ಏಕೆಂದರೆ ಈ ಮೂರು ದೇಶಗಳು ಬಹುಪಾಲು ಸಾಮಾನ್ಯ ಸವಾಲುಗಳನ್ನು ಎದುರಿಸುತ್ತಿವೆ. ಆದ್ದರಿಂದ ಇಂದಿನ ಐತಿಹಾಸಿಕ ಒಪ್ಪಂದದ ನಡೆಯು ಪರಸ್ಪರ ಲಾಭದಾಯಕವಾಗಿವೆ.

Joint Statement Of The US, Israel And UAE On Normalization Of Diplomatic Relations

ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಒಪ್ಪಂದ:

ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ರಾಷ್ಟ್ರಗಳು ಮುಂಬರುವ ದಿನಗಳಲ್ಲಿ ಹಲವು ಒಪ್ಪಂದಗಳಿಗೆ ಅಂಕಿತ ಹಾಕುವ ಸಾಧ್ಯತೆಗಳಿವೆ. ಹೂಡಿಕೆ, ಪ್ರವಾಸೋದ್ಯಮ, ಉಭಯ ರಾಷ್ಟ್ರಗಳ ನಡುವೆ ನೇರ ವಿಮಾನ ಸಂಚಾರ, ಭದ್ರತೆ, ದೂರಸಂಪರ್ಕ, ತಂತ್ರಜ್ಞಾನ, ಇಂಧನ, ಆರೋಗ್ಯ, ಸಂಸ್ಕೃತಿ, ಪರಿಸರ ಸೇರಿದಂತೆ ಹಲವು ರಂಗಗಳಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರ ನೀಡುವ ಬಗ್ಗೆ ಒಪ್ಪಂದಕ್ಕೆ ಬರುವ ನಿರೀಕ್ಷೆಗಳಿವೆ.

ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ಜೊತೆಗೆ ಸಂಬಂಧವನ್ನು ವಿಸ್ತರಿಸುವತ್ತ ಗಮನ ಹರಿಸಬೇಕಿದೆ. ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಶಾಂತಿ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳ ನಡುವೆ ಸಂಪರ್ಕ ಸೇತುವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ನೀಡಲಿದ್ದಾರೆ. ಈ ಸಾಮಾನ್ಯೀಕರಣ ಮತ್ತು ಶಾಂತಿಯುತ ರಾಜತಾಂತ್ರಿಕತೆಯು ಅಮೆರಿಕದ ಇಬ್ಬರು ವಿಶ್ವಾಸಾರ್ಹ ಮತ್ತು ಸಮರ್ಥ ಪ್ರಾದೇಶಿಕ ಪಾಲುದಾರರನ್ನು ಒಟ್ಟುಗೂಡಿಸುತ್ತದೆ. ರಾಜತಾಂತ್ರಿಕ, ವ್ಯಾಪಾರ ಮತ್ತು ಭದ್ರತಾ ಸಹಕಾರವನ್ನು ವಿಸ್ತರಿಸಲು ಮಧ್ಯಪ್ರಾಚ್ಯಕ್ಕಾಗಿ ಕಾರ್ಯತಂತ್ರದ ಕಾರ್ಯಸೂಚಿಯನ್ನು ಪ್ರಾರಂಭಿಸಲು ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳು ಅಮೆರಿಕಾದ ಜೊತೆಗೆ ಕೈ ಜೋಡಿಸುತ್ತಿವೆ.

ಕೊರೊನಾವೈರಸ್ ಸೋಂಕಿನ ಲಸಿಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ನಡುವ ಸಹಕಾರವನ್ನು ತುರ್ತಾಗಿ ವಿಸ್ತರಿಸಬೇಕಿದೆ. ಈ ಒಗ್ಗಟ್ಟಿನ ಮಂತ್ರದಿಂದ ಈ ಪ್ರದೇಶದಾದ್ಯಂತ ಮುಸ್ಲಿಂ, ಯಹೂದಿ ಮತ್ತು ಕ್ರಿಶ್ಚಿಯನ್ನರ ಜೀವ ಉಳಿಸಲು ಸಾಧ್ಯವಾಗಲಿದೆ.

ಈ ಹಿಂದೆ 2020 ಜನವರಿ.28 ರಂದು ಶ್ವೇತಭವನದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಕಾಣಿಸಿಕೊಂಡಿದ್ದನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ರಾಷ್ಟ್ರಗಳು ಕೃತಜ್ಞತೆಯಿಂದ ಸ್ಮರಿಸಿದವು. ಈ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ತಮ್ಮ ವಿಷನ್ ಫಾರ್ ಪೀಸ್ ಅನ್ನು ಪ್ರಸ್ತುತಪಡಿಸಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಸಂಬಂಧಿತ ಬೆಂಬಲದ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

English summary
Joint Statement Of The US, Israel And UAE On Normalization Of Diplomatic Relations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X