ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ ಭಾರಿ ದಂಡ!

By Mahesh
|
Google Oneindia Kannada News

ನ್ಯೂಯಾರ್ಕ್, ಜುಲೈ 13: ಮಕ್ಕಳ ವೈದ್ಯಕೀಯ ಪರಿಕರಗಳ ತಯಾರಿಕಾ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ 4.69 ಬಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಮಿಸ್ಸೋರಿಯ ಸೈಂಟ್ ಲೂಯಿಸ್ ನಲ್ಲಿನ ನ್ಯಾಯಾಲಯವೊಂದು ಈ ಮಹತ್ವದ ಆದೇಶ ನೀಡಿದೆ.

ಜಾನ್ಸನ್ಸ್ ಅಂಡ್ ಜಾನ್ಸನ್ ಕಂಪನಿಯ ಟಾಲ್ಕಂ ಪೌಡರ್ ಬಳಕೆಯಿಂದ ಅಂಡಾಶಯ ಕ್ಯಾನ್ಸರ್(ovarian cancer) ಉಂಟಾಗಿದೆ ಎಂದು ಆರೋಪಿಸಿ 22 ಮಹಿಳೆಯರು ದೂರು ನೀಡಿದ್ದರು. ದೂರುದಾರ ಪೈಕಿ ಆರು ಮಂದಿ ಈಗ ಮೃತರಾಗಿದ್ದಾರೆ. ಸಂಸ್ಥೆ ವಿರುದ್ಧ ಸುಮಾರು 9 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದು, ಇದೇ ಮೊದಲ ಬಾರಿಗೆ ಭಾರಿ ದಂಡ ವಿಧಿಸಲಾಗಿದೆ. 4.41 ಬಿಲಿಯನ್ ಡಾಲರ್ ಮೊತ್ತ ದಂಡ ಹಾಗೂ 550 ಮಿಲಿಯನ್ ಡಾಲರ್ ಮೊತ್ತ ಪರಿಹಾರ ಧನ ನೀಡುವಂತೆ ನ್ಯಾಯಾಲಯವು ಸೂಚಿಸಿದೆ. ಆದರೆ, ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸಂಸ್ಥೆ ಪ್ರತಿಕ್ರಿಯಿಸಿದೆ.

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಗೆ ಭಾರಿ ಮೊತ್ತ ದಂಡಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಗೆ ಭಾರಿ ಮೊತ್ತ ದಂಡ

ಈ ಹಿಂದೆ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಅನುಮತಿ ಪಡೆಯದೇ ಮಕ್ಕಳ ಮನೋ ವೈದ್ಯಕೀಯ ಔಷಧಿ(Risperdal)ಗಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಸಂಸ್ಥೆಯ ವಿರುದ್ಧ ಸಾಮಾನ್ಯ ಮತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು.

Johnson & Johnson to pay $4.7bn damages in talc cancer case

ಅಂತಾರಾಷ್ಟ್ರೀಯ ನ್ಯಾಯಾಂಗ ಇಲಾಖೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ ಬರೊಬ್ಬರಿ 2.2 ಬಿಲಿಯನ್ ಡಾಲರ್ ದಂಡ ವಿಧಿಸಲಾಗಿತ್ತು.

ಮಗುವಿಗೆ ಜಾನ್ಸನ್ ಉತ್ಪನ್ನಗಳನ್ನು ಬಳಸೀರಿ ಜೋಕೆ!ಮಗುವಿಗೆ ಜಾನ್ಸನ್ ಉತ್ಪನ್ನಗಳನ್ನು ಬಳಸೀರಿ ಜೋಕೆ!

ಮಿತಿ ಮೀರಿರುವ ಮಾರುಕಟ್ಟೆ ಸ್ಪರ್ಧೆಯಿಂದಾಗಿ ವೈದ್ಯಕೀಯ ಪರಿಕರಗಳ ತಯಾರಿಕಾ ಸಂಸ್ಥೆಗಳು ಎಫ್‌ಡಿಎ(Food and Drug Administration) ಮಾನ್ಯತೆ ಪಡೆಯದೆಯೇ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿವೆ. ಅಮೆರಿಕದ ಅಂತಾರಾಷ್ಟ್ರೀಯ ನ್ಯಾಯಾಂಗ ಇಲಾಖೆ ಸಂಸ್ಥೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೂಲಕ ಇತರೆ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ 'ಯುರೋಪ್, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಬಿಕರಿಯಾಗಿರುವ ತನ್ನ 3.2 ಕೋಟಿ ಪ್ಯಾಕ್ ಜನನ ನಿಯಂತ್ರಣ ಸೇವನೆ ಮಾತ್ರೆ Cilestಅನ್ನು ಸ್ವಯಂಪ್ರೇರಿತವಾಗಿ ಹಿಂದಕ್ಕೆ ಪಡೆದುಕೊಳ್ಳಲಾಗುತ್ತಿದೆ' ಎಂದು ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Johnson & Johnson has been ordered to pay $4.7bn (£3.6bn) in damages to 22 women who alleged that its talc products caused them to develop ovarian cancer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X