ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ತಿಂಗಳ ನಂತರ ಚೀನಾ ಅಧ್ಯಕ್ಷ ಜಿನ್‌ಪಿಂಗ್‌, ಜೋ ಬೈಡೆನ್‌ ಮಾತುಕತೆ

|
Google Oneindia Kannada News

ವಾಷಿಂಗ್ಟನ್‌, ಸೆಪ್ಟೆಂಬರ್‌ 10: ಯುಎಸ್‌ ಅಧ್ಯಕ್ಷ ಜೋ ಬೈಡೆನ್‌ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ 7 ತಿಂಗಳ ನಂತರ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಶ್ವೇತಭವನ "ಫೋನ್‌ ಮೂಲಕ ಉಭಯ ದೇಶಗಳ ನಾಯಕರುಗಳು ಮಾತನಾಡಿದ್ದು, ಬಹಳ ಹೊತ್ತು ಮಾತನಾಡಿದ್ದಾರೆ ಹಾಗೂ ಕಾರ್ಯತಂತ್ರದ ಮಾತುಕತೆ ಇದಾಗಿತ್ತು," ಎಂದು ಹೇಳಿದೆ.

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್‌ ಅಧಿಕಾರ ಸ್ವೀಕಾರ ಮಾಡಿದ ಏಳು ತಿಂಗಳ ಬಳಿಕ ನಡೆದ ಮೊಲದ ದೂರವಾಣಿ ಮಾತುಕತೆ ಇದಾಗಿದೆ. ಇನ್ನು ಈ ನಡುವೆ ಚೀನಾದ ಮಾಧ್ಯಮಗಳು ಈ ಮಾತುಕತೆಯ ವೇಳೆ, ಜೋ ಬೈಡೆನ್‌ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಯುಎಸ್‌ನ ನೀತಿಯು ಚೀನಾದ ಮೇಲೆ ಎಷ್ಟು ಗಂಭೀರ ತೊಂದರೆಯನ್ನು ಉಂಟು ಮಾಡಿದೆ ಎಂಬುವುದರ ಬಗ್ಗೆ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ಚೀನಾ ನಮ್ಮ ಅತಿ ಮುಖ್ಯ ಪಾಲುದಾರ ಎಂದು ಹೇಳಿಕೊಂಡ ತಾಲಿಬಾನ್ಚೀನಾ ನಮ್ಮ ಅತಿ ಮುಖ್ಯ ಪಾಲುದಾರ ಎಂದು ಹೇಳಿಕೊಂಡ ತಾಲಿಬಾನ್

ವೈಟ್‌ ಹೌಸ್‌ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜೋ ಬೈಡೆನ್‌ ಹಾಗೂ ಕ್ಸಿ ಜಿನ್‌ಪಿಂಗ್‌ ಮುಕ್ತ ಹಾಗೂ ನೇರ ರೀತಿಯಲ್ಲಿ ತೊಡಗಿಸಿಕೊಳ್ಳಲು ಈ ಮೂಲಕ ಒಪ್ಪಿಕೊಂಡಿದ್ದಾರೆ.

Joe Biden talks to Xi Jinping after 7 months, says US-China contest must not invite ‘conflict’

"ಉಭಯ ನಾಯಕರ ನಡುವೆ ವಿಸ್ತಾರವಾದ ಹಾಗೂ ಕಾರ್ಯತಂತ್ರದ ಮಾತುಕತೆ ನಡೆದಿದೆ. ಆಸಕ್ತಿಗಳು, ಮೌಲ್ಯಗಳು, ದೃಷ್ಟಿಕೋನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ," ಎಂದು ಶ್ವೇತಭವನದ ಬ್ರೀಫಿಂಗ್ ಕೊಠಡಿಯಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. "ಉಭಯ ರಾಷ್ಟ್ರಗಳ ಹಿತಾಸಕ್ತಿಗನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಕಾರ್ಯತಂತ್ರಗಳ ಬಗ್ಗೆ ಚೀನಾ ಹಾಗೂ ಯುಎಸ್‌ ದೇಶದ ನಾಯಕರುಗಳು ಚರ್ಚೆ ನಡೆಸಿದ್ದಾರೆ," ಎಂದು ಪ್ರಕಟಣೆ ಹೇಳಿದೆ.

ಇನ್ನು ಈ ಸಂದರ್ಭದಲ್ಲೇ, ಅಮೆರಿಕ ಹಾಗೂ ಚೀನಾ ದೇಶಗಳ ಆರ್ಥಿಕತೆಯು ಜಗತ್ತಿನ ಪ್ರಮುಖ ಆರ್ಥಿಕತೆಗಳಾಗಿದೆ. ಈ ನಿಟ್ಟಿನಲ್ಲಿಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆಯು ಸಂಘರ್ಷಕ್ಕೆ ತಿರುಗದಂತೆ ನೋಡುಕೊಳ್ಳಲು ಎಚ್ಚರವಹಿಸಬೇಕು ಎಂದು ಉಭಯ ದೇಶಗಳ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಹೇಳಿದೆ.

ಯುಸ್‌ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ಬಳಿಕ ತಾಲಿಬಾನ್‌ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ನಡುವೆ ಚೀನಾ ಮಾತ್ರ ತಾಲಿಬಾನ್‌ಗೆ ಬೆಂಬಲ ನೀಡುವ ಹೇಳಿಕೆಯನ್ನು ನೀಡುತ್ತಿದೆ.

 ಕೊರೊನಾ ಹುಟ್ಟಿನ ಕುರಿತು ಗಂಭೀರ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದೆ: ಬೈಡನ್ ಕೊರೊನಾ ಹುಟ್ಟಿನ ಕುರಿತು ಗಂಭೀರ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದೆ: ಬೈಡನ್

ಇತ್ತೀಚೆಗೆ "ಚೀನಾ ನಮ್ಮ ಪ್ರಮುಖ ಪಾಲುದಾರ ಹಾಗೂ ಅಫ್ಘಾನಿಸ್ತಾನದ ಆರ್ಥಿಕ ಪುನರುಜ್ಜೀವನಕ್ಕೆ ತಾಲಿಬಾನ್ ನಾಯಕತ್ವ ಬೀಜಿಂಗ್‌ನ ಹಣಕಾಸು ನೆರವಿನ ಮೇಲೆ ಅವಲಂಬಿತವಾಗಿರುತ್ತದೆ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. "ಚೀನಾ ನಮಗೆ ಅಸಾಧಾರಣ ಅವಕಾಶಗಳನ್ನು ನೀಡುತ್ತಿದೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಹಾಗೂ ದೇಶದ ಪುನರ್ ನಿರ್ಮಾಣಕ್ಕೆ ನೆರವಾಗಲು ಚೀನಾ ಸಿದ್ಧವಾಗಿದೆ. ಹೀಗಾಗಿ ಚೀನಾ ನಮ್ಮ ಪ್ರಮುಖ ಪಾಲುದಾರನಾಗಲಿದೆ," ಎಂದಿದ್ದಾರೆ.

ಈ ನಡುವೆ ಕೊರೊನಾ ವೈರಸ್‌ ಸೋಂಕು ಹುಟ್ಟಿನ ವಿಚಾರದಲ್ಲಿ ಚೀನಾದ ವಿರುದ್ದ ಯುಎಸ್‌ ವಾಗ್ದಾಳಿ ನಡೆಸಿದೆ. ಕೊರೊನಾ ಮೂಲದ ಕುರಿತು ಗಂಭೀರ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಕೊರೊನಾ ಉಗಮದ ಬಗೆಗಿನ ನಿರ್ಣಾಯಕ ಮಾಹಿತಿಯನ್ನು ಚೀನಾ ಮುಚ್ಚಿಡುತ್ತಿದೆ. ಚೀನಾದ ಬಳಿ ಕೋವಿಡ್‌ ಉಗಮದ ಬಗ್ಗೆ ನಿರ್ಣಾಯಕ ಮಾಹಿತಿ ಲಭ್ಯವಿದೆ. ಆದರೂ, ಆರಂಭದಿಂದಲೇ ಚೀನಾದ ಸರ್ಕಾರಿ ಅಧಿಕಾರಿಗಳು ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ಮತ್ತು ಜಾಗತಿಕ ಸಾರ್ವಜನಿಕ ಆರೋಗ್ಯ ಸಮುದಾಯದ ಸದಸ್ಯರುಗಳಿಗೆ ಆ ಮಾಹಿತಿ ಸಿಗದಂತೆ ತಡೆಹಿಡಿದಿದ್ದಾರೆ ಎಂದು ಹೇಳಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Joe Biden talks to Xi Jinping after 7 months, says US-China contest must not invite ‘conflict’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X