ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್ ಹಂತಕ ಎಂಬ ಹೇಳಿಕೆ ಹಿಂಪಡೆಯುವಂತೆ ಬೈಡನ್‌ಗೆ ರಷ್ಯಾ ಒತ್ತಾಯ

|
Google Oneindia Kannada News

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ರಷ್ಯಾ ಒತ್ತಾಯಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ವ್ಲಾಡಿಮಿರ್ ಪುಟಿನ್ ಅವರನ್ನು ಹಂತಕ ಎಂದು ಕರೆದಿದ್ದರು. ಈ ಕುರಿತು ರಷ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಹೇಳಿಕೆಯನ್ನು ವಾಪಸ್ ಪಡೆಯಿರಿ ಎಂದು ಹೇಳಿದೆ.

4 ವರ್ಷ ಚೆನ್ನಾಗಿ ನಿದ್ದೆ ಮಾಡಬೇಕು ಅಂತಿದ್ರೆ... ಬೈಡನ್‌ಗೆ ಕಿಮ್ ಜಾಂಗ್ ಸಹೋದರಿಯ ಎಚ್ಚರಿಕೆ4 ವರ್ಷ ಚೆನ್ನಾಗಿ ನಿದ್ದೆ ಮಾಡಬೇಕು ಅಂತಿದ್ರೆ... ಬೈಡನ್‌ಗೆ ಕಿಮ್ ಜಾಂಗ್ ಸಹೋದರಿಯ ಎಚ್ಚರಿಕೆ

ವ್ಲಾಡಿಮಿರ್ ಪುಟಿನ್ ರನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಹಂತಕ ಎಂದು ಕರೆದಿದ್ದು, ಇದರ ಬೆನ್ನಲ್ಲೇ ಅಮೆರಿಕಾದಲ್ಲಿದ್ದ ತನ್ನ ರಾಯಭಾರಿ ಅಧಿಕಾರಿಯನ್ನು ರಷ್ಯಾ ವಾಪಸ್ ಕರೆಸಿಕೊಂಡಿದೆ.

 Joe Biden Must Apologize For Putin Killer Claim, Russia Says

ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಬೈಡನ್ ಅವರು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಓರ್ವ ಹಂತಕ ಎಂಬ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.

ತನ್ನ ಎದುರಾಳಿಗಳೊಂದಿಗೆ ನಿರ್ದಯಿಯಿಂದ ವರ್ತಿಸುತ್ತಾರೆಂಬ ಆರೋಪವನ್ನು ಎದುರಿಸುತ್ತಿರುವ ಪುಟಿನ್ ಓರ್ವ ಹಂತಕ ಎಂಬುದನ್ನು ನೀವು ಒಪ್ಪುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಬೈಡನ್ ಅವರು ಹೌದು ಎಂದಿದ್ದಾರೆ. ಒಬ್ಬ ಹಂತಕ, ಶೀಘ್ರದಲ್ಲೇ ಇದಕ್ಕೆ ತಕ್ಕ ಬೆಲೆ ತೆರಲಿದ್ದಾರೆಂದೂ ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜನವರಿಯಲ್ಲಿ ನಾನು ಪುಟಿನ್ ಜೊತೆಗೆ ಮಾತನಾಡಿದ್ದೆ. ನಾನು ಅವರನ್ನು ಚೆನ್ನಾಗಿ ಬಲ್ಲೆ ಎಂದಿದ್ದಾರೆ.

ಈ ಹೇಳಿಕೆಯ ಬೆನ್ನಲ್ಲೇ ವಾಷಿಂಗ್ಟನ್ ನಲ್ಲಿರುವ ರಷ್ಯಾ ರಾಯಭಾರಿ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿರುವ ರಷ್ಯಾ, ರಾಯಭಾರಿ ಅಧಿಕಾರಿಯನ್ನು ರಾಷ್ಟ್ರಕ್ಕೆ ವಾಪಸ್ ಆಗುವಂತೆ ತಿಳಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

English summary
US President Joe Biden must apologize and take back "boorish" allegations that Kremlin leader Vladimir Putin is a killer, a top Russian official said, a day after Moscow recalled its ambassador in protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X