ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೇಸುಕ್ರಿಸ್ತ -ಮೇರಿ ಮದುವೆ ಎಲ್ಲಾ ಬೊಗಳೆ!

By Mahesh
|
Google Oneindia Kannada News

ಲಂಡನ್,ನ.11: ಕ್ರೈಸ್ತರ ನಂಬಿಕೆಗಳನ್ನು ಬುಡಮೇಲು ಮಾಡುವಂಥ ಕೃತಿಯೊಂದು ಹೊರ ಬರುತ್ತಿದೆ. ಕ್ರೈಸ್ತರ ಪರಮ ಪಿತ ಯೇಸುಕ್ರಿಸ್ತ ಅವರನ್ನು ಮೇರಿ ಮೆಗ್ಡಲೆನ್ ಅವರನ್ನು ವರಿಸಿದ್ದರು ಹಾಗೂ ಎಲ್ಲರಂತೆ ಸಂಸಾರಸ್ಥರಾಗಿದ್ದರು ಎಂದು ಲಂಡನ್ ಮೂಲದ ಹಸ್ತಪ್ರತಿ ಹೇಳಿದೆ. ಅದರೆ, ಇದೆಲ್ಲವೂ ಕಟ್ಟುಕಥೆ ಎಂದು ಇತಿಹಾಸಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಂಡನ್ನಿನ ಗ್ರಂಥಾಲಯವೊಂದರಿಂದ ಹೆಕ್ಕಿ ತೆಗೆಯಲಾಗಿರುವ 1500 ವರ್ಷದಷ್ಟು ಹಳೆಯದಾದ ಹಸ್ತಪ್ರತಿ ಪ್ರಕಾರ ಮೇರಿ ಮೆಗ್ಡಲಿನ್(ಕ್ರಿಸ್ತನ ತಾಯಿಯಲ್ಲ) ಹಾಗೂ ಯೇಸುಕ್ರಿಸ್ತ ಅವರ ವಿವಾಹವಾಗಿತ್ತು ದಂಪತಿಗೆ ಇಬ್ಬರು ಮಕ್ಕಳಿದ್ದರು ಎನ್ನಲಾಗಿದೆ. ಈ ಕುರಿತಂತೆ 'ದಿ ಲಾಸ್ಟ್​ ಗೋಸ್ಪಾಲ್'​ ಎಂಬ ಪುಸ್ತಕ ನವೆಂಬರ್ 12ರಂದು ಲೋಕಾರ್ಪಣೆಯಾಗಲಿದೆ ಎಂದು ಆನ್ ಲೈನ್ ಪುಸ್ತಕ ಮಳಿಗೆ ಅಮೆಜಾನ್.ಕಾಂ ಹೇಳಿಕೊಂಡಿದೆ. [ದೇವರ ಬಗ್ಗೆ ಪೋಪ್ ಬಾಯ್ಬಿಟ್ಟ ಸತ್ಯವೇನು?]

ಪ್ರಾಚೀನ ಹಸ್ತಪ್ರತಿಯಲ್ಲಿ ಉಲ್ಲೇಖಿಸಿರುವ ಮೇರಿ ಮೆಗ್ಡಲಿನ್ ಬಗ್ಗೆ ಕ್ರೈಸ್ತರಿಗೆ ಸರಿಯಾದ ಮಾಹಿತಿ ಇಲ್ಲ ಹೀಗಾಗಿ ಆಕೆಯ ಹುಟ್ಟು ಸಾವಿನ ನಿಖರತೆ ಬಗ್ಗೆ ಬೆಳಕು ಚೆಲ್ಲಬಹುದಾದ ಈ ಹಸ್ತಪ್ರತಿ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಿದೆ. ಅದರೆ, ಇದೆಲ್ಲವೂ ಮತ್ತೊಂದು ಗಾಳಿಸುದ್ದಿ, ಯಾವುದೇ ಸಮರ್ಥವಾದ ಪುರಾವೆ ಸಿಕ್ಕಿಲ್ಲ ಎಂದು ಇತಿಹಾಸ ತಜ್ಞ ಗ್ರೆಗ್ ಕ್ಯಾರಿ ಅಭಿಪ್ರಾಯಪಟ್ಟಿದ್ದಾರೆ.

Jesus 'married Mary Magdalene and had children', London ancient manuscript

ಲೇಖಕ ಬ್ಯಾರಿ ವಿಲ್ಸನ್​ ಹಾಗೂ ಸಿಮ್ಚ ಜಾಕೋಬೋವಿಚಿ​ ತರ್ಜುಮೆ ಮಾಡಿ 'ದಿ ಲಾಸ್ಟ್​ ಗೋಸ್ಪಾಲ್'​ ("The Lost Gospel: Decoding the Ancient Text That Reveals Jesus' Marriage to Mary the Magdalene.")ಎಂಬ ಪುಸ್ತಕದಲ್ಲಿ ಯೇಸುಕ್ರಿಸ್ತನ ಜೀವನದ ರಹಸ್ಯಗಳಿವೆಯಂತೆ. ಇದರಲ್ಲಿ ಮೇರಿ ಮೆಗ್ಡಲಿನ್ ಜೊತೆಗಿನ ಸಂಸಾರ ಹಾಗೂ ಇಬ್ಬರ ಹತ್ಯೆ, ರೋಮನ್ ಸಾಮ್ರಾಜ್ಯದ ಕಥೆ ಎಲ್ಲವೂ ಇದೆಯಂತೆ. [ಕ್ರಿಸ್ಮಸ್ ಹಬ್ಬದ ಕುರಿತ ಸೋಜಿಗ ಸ್ವಾರಸ್ಯ]

ಕ್ರೈಸ್ತಧರ್ಮದಲ್ಲಿ ಬರುವ ಪ್ರಮುಖ ಮೇರಿಗಳ ಪೈಕಿ ಕ್ರಿಸ್ತನ ತಾಯಿ ಕನ್ಯಾ ಮೇರಿ ನಂತರ ಮೇರಿ ಮೆಗ್ಡಲಿನ್ ಪ್ರಮುಖವಾಗಿ ಗುರುತಿಸಿಕೊಂಡಿದ್ದಾಳೆ. ಈಕೆಯನ್ನು ಒಬ್ಬ ವೇಶ್ಯೆ ಎಂದೇ ಕ್ರೈಸ್ತ ಸಮುದಾಯದ ನಾಲ್ಕು ಗಾಸ್ಪೆಲ್ ಗಳು ಪರಿಗಣಿಸಿದೆ. ಕ್ರಿಸ್ತನ ಅಂತ್ಯ ಹಾಗೂ ಸಾವಿನಿಂದ ಪುನಃ ಜೀವಂತ ಹಿಂತಿರುಗಿದ ಕ್ಷಣಗಳಿಗೆ ಮೇರಿ ಸಾಕ್ಷಿಯಾಗಿದ್ದಳು. [ಬರಸಿಡಿಲಿಗೆ ಸಿಕ್ಕಿ ಭಸ್ಮವಾದ ಜೀಸಸ್ ಮೂರ್ತಿ]

ಚಿತ್ರಕರ್ಮಿ ಮೆಲ್ ಗಿಬ್ಸನ್ ಅವರ 'ದಿ ಪ್ಯಾಷನ್ ಆಫ್ ದಿ ಕ್ರೈಸ್ಟ್' ಇಂಗ್ಲೀಷ್ ಚಿತ್ರದಲ್ಲೂ ಮೆರಿ ಮೆಗ್ಡಲೆನ್ ಳನ್ನು ಮಾಜಿ ವೇಶ್ಯೆ ಎಂದೇ ಚಿತ್ರಿಸಿದೆ. ದರೆ, ಆಕೆಯನ್ನು ಕ್ರಿಸ್ತನ ಅನುಗ್ರಹ ಪಡೆದವಳು ಎಂದು 'ಸಂತ' ಪದವಿಗೇರಿಸಲಾಗಿದೆ ಎಂದು ಲೂಕನ 8:2 ಸಿದ್ಧಾಂತ ಹೇಳುತ್ತದೆ.

ಲೇಖಕ ಜೋಕೋಬೋವಿಚಿ ಅವರು ಈ ಹಿಂದೆ ಕೂಡಾ ಯೇಸುಕ್ರಿಸ್ತನ ಕಥೆಯನ್ನು ರಚಿಸಿ ಚರ್ಚೆಗೆ ಕಾರಣರಾಗಿದ್ದರು. ಡಿಸ್ಕವರಿ ಚಾನೆಲ್ ಕೂಡ ಈ ಬಗ್ಗೆ ಸರಣಿಯನ್ನು ಪ್ರಸಾರ ಮಾಡಿತ್ತು. ಜೇರುಸಲೇಂನಲ್ಲಿರುವ ಸಮಾಧಿಯೊಂದನ್ನು ಜೋಸೆಫ್ ನ ಮಗ ಜೀಸಸ್ ಎಂದು ಡಾಕ್ಯುಮೆಂಟರಿಯಲ್ಲಿ ಉಲ್ಲೇಖಿಸಲಾಗಿತ್ತು. ಒಟ್ಟಾರೆ ಯೇಸುಕ್ರಿಸ್ತನ ಹುಟ್ಟು ಸಾವು ಜೀವನ, ಮದುವೆ ಬಗ್ಗೆ ನಿಗೂಢತೆ ಇನ್ನೂ ಮುಂದುವರೆದಿದೆ.

English summary
An ancient manuscript in the vaults of the British library is all set to change history. The popular belief, Jesus married prostitute Mary Magdalene and had children is false according Greg Carey, a Professor of New Testament, Lancaster Theological Seminary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X