• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿಮ್ ಜಾಂಗ್ ಉನ್ ಬೇಷರತ್ ಭೇಟಿಗೆ ನಾನು ಸಿದ್ಧ: ಜಪಾನ್ ಪ್ರಧಾನಿ ಸುಗಾ

|

ಯಾವುದೇ ಷರತ್ತುಗಳಿಲ್ಲದೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಭೇಟಿಯಾಗಲು ಸಿದ್ಧ ಎಂದು ಜಪಾನ್‌ನ ಹೊಸ ಪ್ರಧಾನಿ ಯೋಶಿಹಿದೆ ಸುಗಾ ಹೇಳಿದ್ದಾರೆ.

   North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada

   ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಅವರು ಈ ಕುರಿತು ಹೇಳಿದ್ದಾರೆ.ಜಪಾನ್ ಮತ್ತು ಉತ್ತರ ಕೊರಿಯಾ ನಡುವಿನ ರಚನಾತ್ಮಕ ಸಂಬಂಧವು ಎರಡೂ ಕಡೆಯ ಹಿತಾಸಕ್ತಿಗಳನ್ನು ಪೂರೈಸುವುದಲ್ಲದೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ಸುಗಾ ಹೇಳಿದ್ದಾರೆ.

   ರೈತನ ಮಗ ಸುಗಾ, ಮುಂದಿನ ಜಪಾನ್ ಪ್ರಧಾನಿ

   ಜಪಾನ್‌ನ ಹೊಸ ಪ್ರಧಾನಿಯಾಗಿ, ಯಾವುದೇ ಷರತ್ತುಗಳಿಲ್ಲದೆ ಉತ್ತರಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಉನ್ ಅವರನ್ನು ಭೇಟಿಯಾಗಲು ಸಿದ್ಧನಿದ್ದೇನೆ ಎಂದರು.

   ಕರುಳಿನ ಕ್ಯಾನ್ಸರ್ ಹಿನ್ನೆಲೆ ಆಗಸ್ಟ್‌ನಲ್ಲಿ ಶಿಂಜೋ ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಬೆ ಅವರಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಕೃಷಿಕನ ಮಗ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದರು.

   ಸುಗಾ ಈಗಾಗಲೇ ಚೀಫ್ ಕ್ಯಾಬಿನೆಟ್ ಸೆಕ್ರೆಟರಿ ರೀತಿಯ ಉನ್ನತ ಹುದ್ದೆಗಳನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ. ಇದೀಗ ಬೇರೆ ಬೇರೆ ದೇಶಗಳೊಡನೆ ಉತ್ತಮ ಸಂಬಂಧ ವೃದ್ಧಿಗೆ ಏನು ಮಾಡಲು ಸಾಧ್ಯವೋ ಅದೆಲ್ಲಾ ಕೆಲಸಗಳನ್ನು ಆರಂಭಿಸುತ್ತಿದ್ದಾರೆ.

   ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಿ ಯೊಶೋಹಿದೆ ಸುಗಾಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಜಪಾನ್ ನ ಪ್ರಧಾನಮಂತ್ರಿಯಾಗಿ ನೇಮಕಗೊಂಡಿರುವ ಸುಗಾ ಅವರನ್ನು ಅಭಿನಂದಿಸಿ, ಗುರಿ ಸಾಧನೆಗೆ ಯಶಸ್ಸು ಕೋರಿದರು.

   ಇಬ್ಬರೂ ನಾಯಕರು ಭಾರತ- ಜಪಾನ್ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಯೋಗವು ಕಳೆದ ಕೆಲವು ವರ್ಷಗಳಲ್ಲಿ ತುಂಬಾ ಮುಂದುವರಿದಿದೆ ಎಂಬುದನ್ನು ಒಪ್ಪಿಕೊಂಡರು ಮತ್ತು ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ಮೌಲ್ಯಗಳ ಆಧಾರದಲ್ಲಿ ಅದನ್ನು ಮತ್ತಷ್ಟು ಬಲಪಡಿಸುವ ಇರಾದೆಯನ್ನು ವ್ಯಕ್ತಪಡಿಸಿದರು.

   ಇಬ್ಬರೂ ನಾಯಕರು ಕೋವಿಡ್-19 ಸಾಂಕ್ರಾಮಿಕ ರೋಗ ಸೇರಿದಂತೆ ಜಾಗತಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಇಂದಿನ ಸಮಯದಲ್ಲಿ ಉಭಯ ದೇಶಗಳ ಸಹಭಾಗಿತ್ವವು ಹೆಚ್ಚು ಪ್ರಸ್ತುತವಾಗಿದೆ ಎಂಬುದನ್ನು ಒಪ್ಪಿಕೊಂಡರು.

   ಮುಕ್ತ ಮತ್ತು ಅಂತರ್ಗತ ಭಾರತ -ಪೆಸಿಫಿಕ್ ಪ್ರದೇಶದ ಆರ್ಥಿಕ ಸ್ವರೂಪವು ಸ್ಥಿರ ಪೂರೈಕೆ ಸರಪಳಿಗಳ ಮೇಲೆ ಪ್ರದರ್ಶಿತವಾಗಬೇಕು ಎಂದು ಪ್ರತಿಪಾದಿಸಿದರು, ಈ ನಿಟ್ಟಿನಲ್ಲಿ ಭಾರತ, ಜಪಾನ್ ಮತ್ತು ಇತರ ಸಮಾನ ಮನಸ್ಕ ದೇಶಗಳ ನಡುವಿನ ಸಹಕಾರವನ್ನು ಅವರು ಸ್ವಾಗತಿಸಿದರು.

   English summary
   Japanese Prime Minister Yoshihide Suga on Friday said that he is ready to meet with Kim Jong Un, top leader of the Democratic People's Republic of Korea (DPRK), without any conditions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X