ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಪಿಂಗ್ ಗೆ ಗಂಡಸರು ಮಾತ್ರ ಬನ್ನಿ: ಜಪಾನ್ ಮೇಯರ್ ವಿವಾದಾತ್ಮಕ ಹೇಳಿಕೆ

|
Google Oneindia Kannada News

ಟೊಕ್ಯೋ, ಏಪ್ರಿಲ್ 24: ''ಅಗತ್ಯ ದಿನಸಿ ಸಾಮಗ್ರಿಗಳನ್ನು ಖರೀದಿ ಮಾಡಲು ಗಂಡಸರು ಮಾತ್ರ ಬನ್ನಿ. ಹೆಂಗಸರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ'' - ಹೀಗಂತ ಒಸಾಕ ನಗರದ ಮೇಯರ್ ಇಚಿರೋ ಮಟ್ಸುಯಿ ನೀಡಿರುವ ಹೇಳಿಕೆ ಜಪಾನ್ ನಲ್ಲಿ ವಿವಾದ ಸೃಷ್ಟಿಸಿದೆ.

ಜಪಾನ್ ನಲ್ಲೂ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬೇಸರದ ಸುದ್ದಿ: ಛೇ.. ಮೊದಲ ಹಂತದಲ್ಲೇ ಕೊರೊನಾ ಔಷಧಿ ಫೇಲ್.!ಬೇಸರದ ಸುದ್ದಿ: ಛೇ.. ಮೊದಲ ಹಂತದಲ್ಲೇ ಕೊರೊನಾ ಔಷಧಿ ಫೇಲ್.!

ಈ ನಡುವೆ, ''ದಿನಸಿ ಅಂಗಡಿಗಳಿಗೆ ಗಂಡಸರು ಮಾತ್ರ ಬಂದರೆ, ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಬಹುದು. ಮಹಿಳೆಯರು ಬಂದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಪ್ರತಿಯೊಂದನ್ನು ಅಳೆದು-ತೂಗುತ್ತಾರೆ. ಆದರೆ ಗಂಡಸರು ಹಾಗಲ್ಲ. ಏನು ಬೇಕೋ, ಅದಷ್ಟನ್ನೇ ತೆಗೆದುಕೊಂಡು ಬೇಗ ಜಾಗ ಖಾಲಿ ಮಾಡುತ್ತಾರೆ'' ಎಂದು ಪ್ರೆಸ್ ಕಾನ್ಫರೆನ್ಸ್ ವೇಳೆ ಇಚಿರೋ ಮಟ್ಸುಯಿ ಹೇಳಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

Japanese Mayor Says Men Should Shop During Pandemic As Women Take Longer Time

ಇಚಿರೋ ಮಟ್ಸುಯಿ ನೀಡಿದ ಹೇಳಿಕೆಗೆ ಜಪಾನ್ ನ ಜನಪ್ರಿಯ ಪತ್ರಕರ್ತ ಶೋಕೋ ಎಗಾವಾ ''ದಿನ ನಿತ್ಯ ಜೀವನ ನಡೆಸುವುದು ಹೇಗೆ ಎಂದು ಗೊತ್ತಿಲ್ಲದವರು ಕಾಮೆಂಟ್ ಮಾಡಬಾರದು'' ಅಂತ ಹೇಳಿ ತಿರುಗೇಟು ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಚಿರೋ ಮಟ್ಸುಯಿ ಟ್ರೋಲ್ ಆಗಿದ್ದಾರೆ.

ಅನೋಸ್ಮಿಯಾ ಕೋವಿಡ್-19 ಲಕ್ಷಣ? ಬೆಂಗಳೂರು ಮೂಲದ ಸಂಶೋಧಕರಿಂದ ಸರ್ವೇಅನೋಸ್ಮಿಯಾ ಕೋವಿಡ್-19 ಲಕ್ಷಣ? ಬೆಂಗಳೂರು ಮೂಲದ ಸಂಶೋಧಕರಿಂದ ಸರ್ವೇ

ಅಸಲಿಗೆ, ಪುರುಷ ಪ್ರಧಾನ ಸಮಾಜ ಹೊಂದಿರುವ ಜಪಾನ್ ನಲ್ಲಿ ಲಿಂಗ ತಾರತಮ್ಯ ಹೆಚ್ಚಿದೆ. ಲಿಂಗ ಸಮಾನತೆ ವಿಚಾರದಲ್ಲಿ G7 ರಾಷ್ಟ್ರಗಳ ಪೈಕಿ ಜಪಾನ್ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ, ಜಪಾನ್ ನಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಪ್ರಧಾನ ಮಂತ್ರಿ ಶಿಂಜೋ ಅಬೇ 'ವುಮೆನೋಮಿಕ್ಸ್' ನೀತಿ ಜಾರಿಗೆ ತಂದಿದ್ದಾರೆ.

ಅಂದ್ಹಾಗೆ, ಜಪಾನ್ ನಲ್ಲಿ ಇಲ್ಲಿಯವರೆಗೂ 12,368 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 328 ಮಂದಿ ಸಾವನ್ನಪ್ಪಿದ್ದಾರೆ.

English summary
Japanese Mayor Says Men Should shop during pandemic as women take longer time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X