ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ಲಕ್ಷ ರೂಪಾಯಿ ಖರ್ಚು ಮಾಡಿ 'ನಾನು ಮನುಷ್ಯ ಅಲ್ಲ ನಾಯಿ' ಎಂದ ಜಪಾನಿ

|
Google Oneindia Kannada News

ಪ್ರಾಣಿಯಂತೆ ಕಾಣಬೇಕೆಂದುಕೊಂಡಿದ್ದ ಜಪಾನಿನ ಟೊಕೊ ಎಂಬ ವ್ಯಕ್ತಿ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಜೆಪ್ಪೆಟ್ ಎಂಬ ವೃತ್ತಿಪರ ಏಜೆನ್ಸಿಯಿಂದ ನಾಯಿಯ ತಳಿಯಾದ "ಕೋಲಿ" ಆಗಿ ತನ್ನನ್ನು ತಾನು ಮಾರ್ಪಡಿಸಿಕೊಳ್ಳಲು ಬೇಕಾದ ವೇಷಭೂಷಣಕ್ಕಾಗಿ ಟೊಕೊ ಪ್ರಯತ್ನಿಸಿದ್ದಾರೆ. ಜೊತೆಗೆ ಅವರು ಕೋಲಿ (ನಾಯಿಯ ತಳಿ)ಯಂತೆ ವೇಷಭೂಷಣ ತಯಾರಿಸಲು ಅಂದಾಜು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ವಿಡಿಯೋ: ತನ್ನ ಫೋಟೋ ಕ್ಲಿಕ್ಕಿಸಲು ಯತ್ನಿಸಿದ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆನೆವಿಡಿಯೋ: ತನ್ನ ಫೋಟೋ ಕ್ಲಿಕ್ಕಿಸಲು ಯತ್ನಿಸಿದ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆನೆ

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಅವರ ಇತ್ತೀಚಿನ ಚಿತ್ರಗಳು ಜನರನ್ನು ಆಶ್ಚರ್ಯಗೊಳಿಸಿವೆ. ಅವರು ತನ್ನ ನೆಚ್ಚಿನ ಪ್ರಾಣಿ ನಾಯಿಯಂತೆ ವೇಷಭೂಷಣಕ್ಕಾಗಿ ಸಂಪೂರ್ಣವಾಗಿ ರೂಪಾಂತರಗೊಂಡ ನಂತರ ಅವರು ಮನುಷ್ಯನಂತೆ ಕಾಣುತ್ತಿಲ್ಲ. ವರದಿಗಳ ಪ್ರಕಾರ, ವಿಶಿಷ್ಟವಾದ ವೇಷಭೂಷಣ ತಯಾರಿಸಲು 40 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಟೊಕೊ ಅವರು ತಮ್ಮ ದೇಹರಚನೆ ಪರಿಪೂರ್ಣವಾಗಿ ನಾಯಿಯಂತೆ ಬದಲಾಗಲು ಬಯಸಿದ್ದರು. ಆದ್ದರಿಂದ ಅವರು ಹಲವಾರು ಸುತ್ತಿನ ಪರಿಷ್ಕರಣೆಗಳನ್ನು ನಡೆಸಿದರು. YouTube ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ, ಜಪಾನಿನ ವ್ಯಕ್ತಿ ತನ್ನ ರೂಪಾಂತರದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ನಾಯಿಯಂತ ವೇಷಭೂಷಣ ಧರಿಸಿ ರೂಪಾಂತರಗೊಂಡು ಸಂಪೂರ್ಣವಾಗಿ ನಾಯಿಯಂತೆ ಕಾಣುತ್ತಿದ್ದಾರೆ.

Japanese man who spent Rs 12 lakh to look like a dog

ಈ ವಿಡಿಯೋವನ್ನು ಹಂಚಿಕೊಂಡ ಟೊಕೊ, "ನೀವು ಎಂದಾದರೂ ಪ್ರಾಣಿಯಾಗಲು ಬಯಸಿದ್ದೀರಾ? ನಾನು ಅದನ್ನು ಬಯಸಿದ್ದೇನೆ! ನನ್ನ ಕನಸನ್ನು ಈ ರೀತಿ ನನಸಾಗಿಸಿದೆ" ಎಂದು ಅವರ ಯೂಟ್ಯೂಬ್ ವಿಡಿಯೊ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಟೊಕೊ ನಾಯಿ ವೇಷಭೂಷಣ ತಯಾರಿಸಲು ವಿಶೇಷ ವರ್ಕ್‌ಶಾಪ್ ಜೆಪ್ಪೆಟ್ ಅನ್ನು ಸಂಪರ್ಕಿಸಿದರು ಮತ್ತು ಅಲ್ಟ್ರಾ-ರಿಯಲಿಸ್ಟಿಕ್ ನಾಯಿ ವೇಷಭೂಷಣವನ್ನು ನಿರ್ಮಿಸಲು ಕೇಳಿಕೊಂಡರು. ಇದಕ್ಕೆ ಸುಮಾರು 2 ಮಿಲಿಯನ್ ಯೆನ್ (ಸುಮಾರು 12 ಲಕ್ಷ ರೂಪಾಯಿ) ವೆಚ್ಚವಾಗಿದ್ದು, ಟೊಕೊ ಅವರ ಮಾನವ ರೂಪವನ್ನು ಸಂಪೂರ್ಣವಾಗಿ ಮರೆಮಾಡಲು ಈ ವೇಷಭೂಷಣವನ್ನು ವಿನ್ಯಾಸಗೊಳಿಸಲಾಗಿದೆ.

ಸ್ಪೆಷಲ್ ಎಫೆಕ್ಟ್‌ಗಳಲ್ಲಿ ಪರಿಣತಿ ಹೊಂದಿರುವ ಜೆಪ್ಪೆಟ್ ಕಂಪನಿಯು ಟೊಕೊ ನಾಯಿ ವೇಷಭೂಷಣದ ಫೋಟೋಗಳನ್ನು ಹಂಚಿಕೊಂಡಿದ್ದು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಜೆಪ್ಪೆಟ್ ಅವರ ಅಲ್ಟ್ರಾ-ರಿಯಲಿಸ್ಟಿಕ್ ವೇಷಭೂಷಣವನ್ನು ಮಾಡಲು ಟ್ರಿಕಿ ಆಗಿತ್ತು. ಆದಾಗ್ಯೂ, ಸಿದ್ಧಪಡಿಸಿದ ಉತ್ಪನ್ನವನ್ನು ನೋಡುವಾಗ ಅವರು 'ಟೊಕೊ' ಅನ್ನು ನಿಜವಾದ ನಾಯಿಯಂತೆ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
A Japanese man named Toco who wanted to look like an animal seems to have managed to fulfil his dream.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X