ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ಮೀಟರ್ ದೈತ್ಯ ಅಲೆಯ ಅಪ್ಪಳಿಸುವ ಭೀತಿಯಲ್ಲಿದೆ ಈ ಅಣು ಸ್ಥಾವರ

|
Google Oneindia Kannada News

ಟೋಕಿಯೋ, ಏಪ್ರಿಲ್ 22: 17ನೇ ಶತಮಾನದಲ್ಲಿ ಸಂಭವಿಸಿದ ಭೀಕರ ಭೂಕಂಪದ ನಂತರ ಮತ್ತೊಮ್ಮೆ ಭಾರಿ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಸಂಸ್ಥೆಗಳು ಹೇಳಿವೆ. ಜೊತೆಗೆ ಸುನಾಮಿ ಎಚ್ಚರಿಕೆ ನೀಡಿದ್ದು, ಟೋಕಿಯಾದ ಅಣುಸ್ಥಾವರ ಕೂಡಾ ಭೀತಿಯಲ್ಲಿದೆ.

ರಿಕ್ಟರ್ ಮಾಪಕದಲ್ಲಿ 9 ರಷ್ಟು ತೀವ್ರವಾದ ಭೂಕಂಪ ಹಾಗೂ 30 ಮೀಟರ್ ಎತ್ತರ ದೈತ್ಯ ಅಲೆಗಳು ಹೊಕೈಡುವನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎಂಬ ಆತಂಕ ಎದುರಾಗಿದೆ.ಫುಕುಶಿಮಾ ಅಣುಸ್ಥಾವರ ನಾಶವಾಗುವ ಭೀತಿಯನ್ನು ಟೋಕಿಯೋ ಎಲೆಕ್ಟ್ರಿಕ್ ಪವರ್ ಕೋ(ಟೆಪ್ಕೋ) ವ್ಯಕ್ತಪಡಿಸಿದೆ.

2011ರ ಭೂಕಂಪ, ಸುನಾಮಿ ಹೊಡೆತದಿಂದ ಇನ್ನು ಚೇತರಿಸಿಕೊಳ್ಳದ ಫುಕುಶಿಮಾ ದೈಚಿ ಘಟಕ ಇನ್ನೊಂದು ಆಘಾತವನ್ನು ಎದುರಿಸಲು ಸಿದ್ಧವಾಗಬೇಕಿದೆ. ಸದ್ಯಕ್ಕೆ 11 ಮೀಟರ್ ಎತ್ತರದ ಗೋಡೆಯನ್ನು ಸಮುದ್ರಕ್ಕೆ ಎದುರಾಗಿ ಕಟ್ಟಲು ಟೆಪ್ಕೋ ಇಂಜಿನಿಯರ್ ಗಳು ಮುಂದಾಗಿದ್ದಾರೆ ಎಂದು ಎನ್ ಎಚ್ ಕೆ ಸಂಸ್ಥೆ ಹೇಳಿದೆ.

Japanese govt panel predicts earthquake of 9 magnitude, tsunami of 30 m

ಮಾರ್ಚ್ 2011ರಲ್ಲಿ ಜಪಾನ್ನಿನ ಪೂರ್ವ ಕರಾವಳಿಯಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಗೆ ಟೆಪ್ಕೋ ತತ್ತರಿಸಿತ್ತು. ಅಣುಸ್ಥಾವರದಿಂಡ ರೆಡಿಯೋ ವಿಕಿರಣಗಳು ಸೋರಿಕೆಯಾಗದಂತೆ ತಡೆಗಟ್ಟಲು ಶ್ರಮಪಡಬೇಕಾಗಿತ್ತು.

ಹೊಕೈಡು, ಐವಾತೆ, ಮಿಯಾಗಿ, ಫುಕುಶಿಮಾ, ಐಬಾರಾಕ್, ಅಯೋಮೊರಿ ಹಾಗೂ ಚಿಬಾ ಪ್ರದೇಶಗಳಲ್ಲಿ ಭೂಕಂಪ ಹಾಗೂ ಸುನಾಮಿ ತೀವ್ರತೆ ಹೆಚ್ಚಾಗಿ ಬಾಧಿಸಲಿದೆ ಎಂದು ಸಿಸ್ಮೋಲಾಜಿಸ್ಟ್ ಕೆಂಜಿ ಸತಾಕೆ ಹೇಳಿದ್ದಾರೆ. 29.7 ರಿಂದ 30 ಮೀಟರ್ ಎತ್ತರ ದೈತ್ಯ ಅಲೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಏಪ್ರಿಲ್ 18 ರಂದು ಕಡಿಮೆ ತೀವ್ರತೆಯ ಭೂಕಂಪವನ್ನು ಟೋಕಿಯೋದ ದಕ್ಷಿಣ ಭಾಗ ಎದುರಿಸಿತ್ತು.

English summary
Tokyo Electric Power Co (TEPCO) is assessing a government report that highlights the threat of another tsunami overwhelming its wrecked Fukushima nuclear station, the company said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X