ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟ್ಯಧಿಪತಿಯ ಜತೆ ಚಂದ್ರಯಾನಕ್ಕೆ ಹೋಗಬಹುದು, ಅದೂ ಉಚಿತವಾಗಿ!

|
Google Oneindia Kannada News

ಟೋಕಿಯೋ, ಮಾರ್ಚ್ 4: ಚಂದ್ರಲೋಕಕ್ಕೆ ಹೋಗುವ ಕನಸು ಕಾಣುತ್ತಿರುವವರಿಗ ಸುವರ್ಣಾವಕಾಶವೊಂದು ಸಿಕ್ಕಿದೆ. ಅದೂ ಉಚಿತವಾಗಿ! ಚಂದ್ರನ ಸುತ್ತ ಸುತ್ತುವ ತಮ್ಮ ಖಾಸಗಿ ಯೋಜನೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಜಪಾನ್‌ನ ಕೋಟ್ಯಧಿಪತಿ ಯುಸಾಕು ಮಾಯೆಜವಾ ಆಹ್ವಾನ ನೀಡಿದ್ದಾರೆ.

ಎಂಟು ಮಂದಿಗೆ ಈ ಅವಕಾಶ ಸಿಗಲಿದ್ದು, ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್‌ಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ತಮ್ಮ ಆಯ್ಕೆಯ ಕಲಾವಿದರ ಗುಂಪಿನೊಂದಿಗೆ ಮಾತ್ರವೇ ಚಂದ್ರಯಾನ ಕೈಗೊಳ್ಳುವುದಾಗಿ ಎರಡು ವರ್ಷದ ಹಿಂದೆ ಅವರು ಘೋಷಿಸಿದ್ದರು. ಆದರೆ ಈಗ ವಿಭಿನ್ನ ಮೂಲದ ಜನರನ್ನು ಕೊಂಡೊಯ್ಯಲು ಬಯಸಿದ್ದಾಗಿ ತಿಳಿಸಿದ್ದಾರೆ. 2023ರಲ್ಲಿ ಈ ಯೋಜನೆ ನಡೆಯುವ ಉದ್ದೇಶವಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಸಾವಿರ ಕುಳಿಗಳ ಸರದಾರ ಚಂದ್ರ, ನೀರು ಕಂಡ ಬೆನ್ನಲ್ಲೇ ಮತ್ತೊಂದು ವಿಸ್ಮಯಸಾವಿರ ಕುಳಿಗಳ ಸರದಾರ ಚಂದ್ರ, ನೀರು ಕಂಡ ಬೆನ್ನಲ್ಲೇ ಮತ್ತೊಂದು ವಿಸ್ಮಯ

'ಎಲ್ಲ ಬಗೆಯ ಹಿನ್ನೆಲೆಯ ಜನರು ನನ್ನೊಂದಿಗೆ ಸೇರಲು ಬಯಸಿದ್ದೇನೆ' ಎಂದು ಯುಸಾಕು ಅವರು ಮಂಗಳವಾರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. 'ಈ ಚಂದ್ರಯಾನದಲ್ಲಿ 10-12 ಜನರಿಗೆ ಅವಕಾಶವಿದೆ. ಆದರೆ ನನ್ನೊಂದಿಗೆ ಸವಾರಿಗೆ ಎಂಟು ಜನರನ್ನು ಆಹ್ವಾನಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

 Japanese Billionaire Yusaku Maezawa Invites 8 People To Join Him For A Moon Voyage

$2 ಬಿಲಿಯನ್ ಮೌಲ್ಯದ ಜಪಾನ್‌ನ ಅತ್ಯಂತ ದೊಡ್ಡ ಆನ್‌ಲೈನ್ ಫ್ಯಾಷನ್ ಚಿಲ್ಲರೆ ಮಾರಾಟ ಮಳಿಗೆಯ ಸ್ಥಾಪಕರಾದ ಯುಸಾಕು, ಕ್ಯಾಲಿಫೋರ್ನಿಯಾದ ಸ್ಪೇಸ್‌ಎಕ್ಸ್ ಕೇಂದ್ರ ಕಚೇರಿಯಲ್ಲಿ ಸಿಇಒ ಎಲೋನ್ ಮಸ್ಕ್ ಜತೆ 2018ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಟಾರ್‌ಶಿಪ್‌ನ ಮೊದಲ ಸಹಿಹಾಕಿದ ಪ್ರಯಾಣಿಕ ತಾವು ಎಂದು ಬಹಿರಂಗಪಡಿಸಿದ್ದರು. 2023ರಲ್ಲಿ ನಡೆಯಲಿರುವ ಯೋಜನೆಯಲ್ಲಿ ಆರು ದಿನಗಳ ಕಾಲ ಚಂದ್ರನ ಸುತ್ತ ಸುತ್ತಲು ಜಗತ್ತಿನ ಬೇರೆ ಬೇರೆ ದೇಶಗಳ ಆರರಿಂದ ಎಂಟು ಕಲಾವಿದರನ್ನು ಕರೆದೊಯ್ಯುವ ಬಯಕೆ ಹಂಚಿಕೊಂಡಿದ್ದರು.

ಚಂದ್ರನ ಅಂಗಳದಿಂದ ಶಿಲೆ, ಮಣ್ಣು ಹೊತ್ತು ತಂದ ಚೀನಾಚಂದ್ರನ ಅಂಗಳದಿಂದ ಶಿಲೆ, ಮಣ್ಣು ಹೊತ್ತು ತಂದ ಚೀನಾ

ಯುಸಾಕು ಅವರ ಪ್ರಕಾರ ಸೃಜನಶೀಲವಾಗಿದ್ದನ್ನು ಮಾಡುವ ಪ್ರತಿಯೊಬ್ಬರನ್ನೂ ಕಲಾವಿದರು ಎಂದು ಕರೆಯಬಹುದು. ಅಂದಹಾಗೆ, ಅವರೊಂದಿಗೆ ಚಂದ್ರನ ಅಂಗಳದತ್ತ ಪ್ರಯಾಣಿಸಲು ಎರಡು ಮಾನದಂಡಗಳನ್ನು ಪೂರೈಸಬೇಕು. ಇತರೆ ಜನರ ಏಳಿಗೆಗೆ ನೆರವು ನೀಡುವುದು ಮತ್ತು ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಬಲ್ಲವರಾಗಿರಬೇಕು ಹಾಗೂ ಇದೇ ರೀತಿಯ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಇತರೆ ಸಿಬ್ಬಂದಿ ಸದಸ್ಯರಿಗೆ ಬೆಂಬಲ ನೀಡುವ ಇಚ್ಛೆ ಹೊಂದಿರಬೇಕು.

English summary
Japanese billionaire Yusaku Maezawa invited people who interested to join him for a trip to moon on SpaceX's Starship mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X