ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಜಪಾನ್ ಮಾಜಿ ಪ್ರಧಾನಿ ಅಬೆಯನ್ನು ಕೊಂದವನೇ 'ಯಮ'ಗಾಮಿ!

|
Google Oneindia Kannada News

ನಾರಾ, ಜುಲೈ 8: ಸುದೀರ್ಘ ಅವಧಿಯವರೆಗೆ ಜಪಾನ್ ಆಡಳಿತದ ಚುಕ್ಕಾಣಿ ಹಿಡಿದಿದ್ದ ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಅನ್ನು ಕೊಂದ ಶಂಕಿತ ಆರೋಪಿ ಯಾರು ಎನ್ನುವ ಪ್ರಶ್ನೆಗೆ ಸ್ಥಳದಲ್ಲೇ ಉತ್ತರ ಸಿಕ್ಕಿದೆ.

ಪ್ರತಿಯೊಬ್ಬರ ಸಾವಿನ ಹಿಂದೆ ಆ ಯಮದ ಕೈವಾಡವಿರುತ್ತದೆ. ಆದರೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಯ ಹಿಂದೆ 'ಯಮಗಾಮಿ'ಯ ಕೈವಾಡ ಇರುವ ಬಗ್ಗೆ ಜಪಾನ್ ಪೊಲೀಸರು ಉಲ್ಲೇಖಿಸುತ್ತಿದ್ದಾರೆ. ಹೌದು, ಅಬೆ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯ ಹೆಸರೇ ತೆಸುಯಾ ಯಮಗಾಮಿ.

Breaking: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿBreaking: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ

ಮಾಜಿ ಪ್ರಧಾನಿ ಶಿಂಜೋ ಅಬೆ ಸಾವಿಗೆ ಕಾರಣವಾದ ಆ ತೆಸುಯಾ ಯಮಗಾಮಿ ಯಾರು?, ದೇಶದ ಮಾಜಿ ಪ್ರಧಾನಿ ಅನ್ನು ಕೊಲ್ಲುವಷ್ಟು ದ್ವೇಷಕ್ಕೆ ಕಾರಣವಾಗಿದ್ದಾದರೂ ಏನು?, ಜಪಾನ್ ಮಾಜಿ ಪ್ರಧಾನಿಯ ಬದುಕು ದುರಂತ ಅಂತ್ಯ ಕಂಡಿದ್ದು ಹೇಗೆ ಎಂಬುದರ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸ್ವಯಂ ರಕ್ಷಣಾ ಪಡೆಯಲ್ಲಿದ್ದ ಆರೋಪಿ ಯಮಗಾಮಿ

ಸ್ವಯಂ ರಕ್ಷಣಾ ಪಡೆಯಲ್ಲಿದ್ದ ಆರೋಪಿ ಯಮಗಾಮಿ

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡು ಹಾರಿಸಿದ ಆರೋಪಿಯ ಹೆಸರು ತೆಸುಯಾ ಯಮಗಾಮಿ ಎಂದು ಗುರುತಿಸಲಾಗಿದ್ದು, 41 ವರ್ಷದ ಆರೋಪಿಯು ನಾರಾ ನಿವಾಸಿ ಆಗಿದ್ದಾನೆ. ಆರೋಪಿಯನ್ನು ಕೊಲೆ ಯತ್ನದ ಶಂಕೆಯ ಮೇರೆಗೆ ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ ಶಂಕಿತನು ಈ ಹಿಂದೆ ಸ್ವಯಂ ರಕ್ಷಣಾ ಪಡೆಯ ಸದಸ್ಯನಾಗಿದ್ದನು ಎಂದು ತಿಳಿದು ಬಂದಿದೆ.

ರಾಜಕೀಯ ಕಾರಣಕ್ಕೆ ನಡೆದಿಲ್ಲ ಶಿಂಜೋ ಅಬೆ ಹತ್ಯೆ

ರಾಜಕೀಯ ಕಾರಣಕ್ಕೆ ನಡೆದಿಲ್ಲ ಶಿಂಜೋ ಅಬೆ ಹತ್ಯೆ

ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಹತ್ಯೆಗೆ ರಾಜಕೀಯ ಕಾರಣವಾಗಿರಲಿಲ್ಲ. ಅವರ ರಾಜಕೀಯ ನಂಬಿಕೆಗಳ ಮೇಲಿನ ದ್ವೇಷದಿಂದ ಗುಂಡಿನ ದಾಳಿ ನಡೆಸಿಲ್ಲ ಎಂದು ಸ್ವತಃ ಆರೋಪಿ ತೆಸುಯಾ ಯಮಗಾಮಿ ಹೇಳಿಕೆ ನೀಡಿದ್ದಾರೆ ಎಂದು ಜಪಾನ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದರ ಮಧ್ಯೆ ದಾಳಿಕೋರನ ಹತ್ಯೆಯ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದು ಬಂದಿಲ್ಲ ಎಂದು ಗೊತ್ತಾಗಿದೆ.

ಪೊಲೀಸರಿಂದ ಆರೋಪಿ ಯಮಗಾಮಿ ವಿಚಾರಣೆ

ಪೊಲೀಸರಿಂದ ಆರೋಪಿ ಯಮಗಾಮಿ ವಿಚಾರಣೆ

ಜಪಾನ್‌ನಲ್ಲಿ ಸದ್ಯ ಆರೋಪಿ ತೆಸುಯಾ ಯಮಗಾಮಿ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ನಾರಾ ನಿಶಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಶಿಂಜೋ ಅಬೆ ವಿರುದ್ಧ ತೀವ್ರ ಅಸಮಾಧಾನವನ್ನು ಹೊಂದಿದ್ದು, ಹತ್ಯೆ ಮಾಡುವ ಉದ್ದೇಶದಿಂದಲೇ ಅಬೆ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸರ ಎದುರು ಆರೋಪಿ ಹೇಳಿಕೊಂಡಿದ್ದಾನೆ. ಇನ್ನು, ಹತ್ಯೆಗೆ ಆರೋಪಿಯು ತಾನೇ ಸಿದ್ಧಪಡಿಸಿದ ಬಂದೂಕನ್ನು ಬಳಸಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ.

ಶಿಂಜೋ ಅಬೆ ಹತ್ಯೆಯ ಘಟನೆ ಹೇಗೆ ನಡೆಯಿತು?

ಶಿಂಜೋ ಅಬೆ ಹತ್ಯೆಯ ಘಟನೆ ಹೇಗೆ ನಡೆಯಿತು?

ಪಶ್ಚಿಮ ಜಪಾನ್‌ನ ನಾರಾದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ಶಿಂಜೋ ಅಬೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಭಾಷಣ ಮಾಡುತ್ತಿದ್ದ ಸ್ಥಳದಿಂದ 10 ಅಡಿ ದೂರದಲ್ಲಿ ಆರೋಪಿ ತೆಸುಯಾ ಯಮಗಾಮಿ ನಿಂತುಕೊಂಡಿದ್ದು, ಹಿಂಭಾಗದಿಂದ ಆರೋಪಿಯು ದಿಢೀರನೇ ಗುಂಡಿನ ದಾಳಿ ನಡೆಸಿದ್ದಾನೆ. ಮೊದಲ ಬಾರಿ ಗುಂಡಿನ ಸದ್ದು ಮಾತ್ರ ಕೇಳಿ ಬಂದಿದ್ದು, ಎರಡನೇ ಬಾರಿ ಗುಂಡು ತಗುಲುತ್ತಿದ್ದಂತೆ ಅಬೆ ನಿಂತ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿಯು ನಾರಾದಲ್ಲೇ ಇರುವ ಆಸ್ಪತ್ರೆಗೆ ಅವರನ್ನು ದಾಖಲಿಸಿದರು. ಆದರೆ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಕೆಲವೇ ಗಂಟೆಗಳಲ್ಲಿ ಶಿಂಜೋ ಅಬೆ ವಿಧಿವಶರಾದರು.

English summary
Former Japan prime minister Shinzo Abe was shot dead while attending an election campaign. Know who is Tetsuya yamagami suspected killer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X