ದೇಶದ ಎಲ್ಲಾ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಮಸೂದೆ
ಟೋಕಿಯೋ, ಡಿಸೆಂಬರ್ 03: ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಜಪಾನ್ ವಿಶೇಷ ಮಸೂದೆ ಜಾರಿಗೆ ತಂದಿದ್ದು, ಅದಕ್ಕೆ ಅಂಗೀಕಾರ ಸಹ ಸಿಕ್ಕಿದೆ.
ಜಪಾನ್ ದೇಶದ 126 ಮಿಲಿಯನ್ ನಿವಾಸಿಗಳ ಕೋವಿಡ್ ಲಸಿಕೆ ಖರ್ಚನ್ನು ಸರ್ಕಾರ ಭರಿಸಲಿದೆ ಎಂಬುದು ಮಸೂದೆಯ ಮುಖ್ಯ ಅಂಶವಾಗಿದೆ. ಮೊದಲು ಮೇಲ್ಮನೆಯಲ್ಲಿ ಬಳಿಕ ಕೆಳಮನೆಯಲ್ಲಿ ಮಸೂದೆ ಅಂಗೀಕಾರವಾಗಿದೆ.
ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ಸಿದ್ಧತೆ ಪೂರ್ಣ: ಸುಧಾಕರ್
ದೇಶದ 60 ಮಿಲಿಯನ್ ಜನರಿಗೆ ಸರ್ಕಾರ Pfizer ಕಂಪನಿಯ ಲಸಿಕೆ ಮತ್ತು ಉಳಿದ 25 ಮಿಲಿಯನ್ ಜನರಿಗೆ Moderna ಎಂಬ ಕಂಪನಿಯ ಲಸಿಕೆಯನ್ನು ನೀಡಲಿದೆ. ಈ ಎರಡೂ ಕಂಪನಿಗಳ ಕ್ಲಿನಿಕಲ್ ಟ್ರಯಲ್ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ನಡೆದಿದ್ದು, ಉತ್ತಮ ಫಲಿತಾಂಶ ಬಂದಿದೆ.
ಜಪಾನ್ ನೂತನ ಪ್ರಧಾನಿ ಯೋಶಿಹಿದೆ ಸುಗಾಗೆ ಮೋದಿ ಶುಭಾಶಯ
ಈ ಕಂಪನಿಗಳನ್ನು ಹೊರತುಪಡಿಸಿ ಆಸ್ಟ್ರಾ ಝೆನೆಕಾ ಕಂಪನಿಯು ಸಹ ಜಪಾನ್ ಸರ್ಕಾರಕ್ಕೆ 120 ಮಿಲಿಯನ್ ಡೋಸ್ ಲಸಿಕೆಯನ್ನು ಪೂರೈಕೆ ಮಾಡಲು ಒಪ್ಪಿಗೆ ನೀಡಿದೆ. ಮಸೂದೆಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆ ಪ್ರಯೋಗ ಪ್ರಾರಂಭ: ಡಾ. ರೆಡ್ಡೀಸ್ ಘೋಷಣೆ
ಎರಡು ವಾರದ ಹಿಂದೆ ಜಪಾನ್ ಪ್ರಧಾನಿ, "ಕೋವಿಡ್ ಪರಿಸ್ಥಿತಿಯನ್ನು ಸರ್ಕಾರ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ದೇಶದ ಜನರಿಗೆ ಲಸಿಕೆ ವಿತರಣೆ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ" ಎಂದು ಹೇಳಿದ್ದರು.
ಜಪಾನ್ ದೇಶಕ್ಕೆ ಕೋವಿಡ್ ಪರಿಸ್ಥಿತಿ ಅಂತಹ ಹೊಡೆತವನ್ನು ನೀಡಿಲ್ಲ. ಇದುವರೆಗೂ ದೇಶದಲ್ಲಿ 2100 ಜನರು ಮಾತ್ರ ಮೃತಪಟ್ಟಿದ್ದಾರೆ. 150,000 ಪ್ರಕರಣಗಳು ಮಾತ್ರ ವರದಿಯಾಗಿವೆ.
ಕಠಿಣ ಲಾಕ್ ಡೌನ್ ನಿಯಮವನ್ನು ಸಹ ಜಪಾನ್ ಸರ್ಕಾರ ಜಾರಿಗೊಳಿಸಿರಲಿಲ್ಲ. ಕೋವಿಡ್ 3ನೇ ಅಲೆ ದೇಶದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದು ಟೋಕಿಯೋ ಆಡಳಿತ ಜನರಿಗೆ ಮನವಿ ಮಾಡಿದೆ. ಕೋವಿಡ್ ಜೊತೆಗೆ ಪ್ರವಾಸೋದ್ಯಮ ಉತ್ತೇಜಿಸಲು ಸ್ಥಳೀಯ ಆಡಳಿತ ತೀರ್ಮಾನ ಕೈಗೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ.