• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಜಿಟಲ್ ವ್ಯಾಕ್ಸಿನ್ ಪಾಸ್‌ಪೋರ್ಟ್ ನೀಡಲಿದೆ ಜಪಾನ್

|
Google Oneindia Kannada News

ಈಗಾಗಲೇ ಕೊರೊನಾ ಲಸಿಕೆ ಪಡೆದಿದ್ದು ಚೀನಾಗೆ ಭೇಟಿ ನೀಡುವವರಿಗೆ ಜಪಾನ್ ಡಿಜಿಟಲ್ ವ್ಯಾಕ್ಸಿನ್ ಪಾಸ್‌ಪೋರ್ಟ್ ನೀಡಲಿದೆ.

ಇದನ್ನು ಮೊಬೈಲ್ ಅಪ್ಲಿಕೇಷನ್‌ಗಳಿಂದ ನಿರ್ವಹಣೆ ಮಾಡಬಹುದಾಗಿದೆ. ಇದು ಒಂದೊಮ್ಮೆ ವಿದೇಶಿಯರು ಜಪಾನ್‌ನಲ್ಲಿದ್ದು, ತಮ್ಮ ದೇಶಗಳಿಗೆ ಹಿಂದಿರುಗಲು ಕೂಡ ನೆರವಾಗುತ್ತದೆ.

ನಮ್ಮ ಲಸಿಕೆ ತೆಗೆದುಕೊಂಡರೆ ಮಾತ್ರ ಒಳಗೆ ಪ್ರವೇಶ: ಚೀನಾನಮ್ಮ ಲಸಿಕೆ ತೆಗೆದುಕೊಂಡರೆ ಮಾತ್ರ ಒಳಗೆ ಪ್ರವೇಶ: ಚೀನಾ

ಇದರಲ್ಲಿ ಕೊರೊನಾ ಲಸಿಕೆ ಪಡೆದಿರುವ ಎಲ್ಲಾ ಮಾಹಿತಿಗಳು ಲಭ್ಯವಾಗಲಿವೆ. ಕೊರೊನಾ ಲಸಿಕೆ ಪಾಸ್‌ಪೋರ್ಟ್‌ಗಳು ಇನ್ನೂ ಅಸ್ತಿತ್ವದಲ್ಲಿಲ್ಲ. ನೀವು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದು ಸಾಬೀತುಪಡಿಸಲು ಇದು ನೆರವಾಗುತ್ತದೆ.

ಒಮ್ಮೆ ಕೊರೊನಾ ಲಸಿಕೆ ಹಾಕಿಸಿದ್ದೀರಿ ಎಂದು ಸಾಬೀತಾದರೆ, ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಬಹುದು, ಚಲನಚಿತ್ರಗಳನ್ನು ನೋಡಬಹುದು, ಜಿಮ್‌ಗಳಿಗೆ ತೆರಳಬಹುದು, ಸಂಗೀತ ಕಚೇರಿ, ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅನುಕೂಲವಾಗಲಿದೆ.

ಚೀನಾಗೆ ಹೋಗುವ ವಿದೇಶಿ ಯಾತ್ರಿಕರು ಚೀನಾದ ಕೋವಿಡ್ 19 ಲಸಿಕೆ ಪಡೆದರೆ ಹೆಚ್ಚು ಕಾಗದ ಪತ್ರ ವ್ಯವಹಾರ ಮಾಡಬೇಕಾಗಿಲ್ಲ. ಚೀನಾ ವೀಸಾಗೆ ಅರ್ಜಿ ಸಲ್ಲಿರುವ ವಿದೇಶಿ ಪ್ರವಾಸಿಗರಿಗೂ ಈ ನಿಯಮ ಅನ್ವಯವಾಗಲಿದೆ. ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ದೇಶಗಳ ಕ್ವಾಡ್ ಒಕ್ಕೂಟ ಸಭೆ ಬಳಿಕ ಚೀನಾ ಈ ನಿರ್ಧಾರ ಪ್ರಕಟಿಸಿದೆ.

ಚೀನಾ ತನ್ನ ದೇಶದಲ್ಲಿ ಉತ್ಪಾದನೆಗೊಂಡ ಕೋವಿಡ್ ಲಸಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲು ಪ್ರಯತ್ನಿಸುತ್ತಿದೆ. ಚೀನಾ ಸರ್ಕಾರದ ವಕ್ತಾರ ಗುವೊ ಮಾಹಿತಿ ನೀಡಿ, ಫೆಬ್ರವರಿ ತಿಂಗಳ ಅಂತ್ಯಕ್ಕೆ ಚೀನಾ ತನ್ನ ದೇಶದ ಕೊರೊನಾ ಲಸಿಕೆಗಳನ್ನು ಸುಮಾರು 69 ದೇಶಗಳಿಗೆ ತಲುಪಿಸಿದೆ.

ಚೀನಾ ಲಸಿಕೆಗಳು ಬಹುತೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಮೋದನೆ ಪಡೆದಿಲ್ಲ, ಚೀನಾ ಕೂಡ ವಿದೇಶಿ ಲಸಿಕೆಗಳನ್ನು ತಯಾರಿಸಲು ಮತ್ತು ಹಂಚಲು ತನ್ನ ದೇಶದಲ್ಲಿ ಪರವಾನಗಿ ನೀಡಿಲ್ಲ.

English summary
Japan is set to issue digital health certificates to citizens who have been vaccinated against COVID-19, joining China, the EU and other countries that have adopted similar measures aimed at opening up overseas travel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X