ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿ ಉತ್ಪಾದನೆ ಸ್ಥಗಿತ, ಉದ್ಯೋಗಿಗಳು ಮನೆಗೆ

By Srinath
|
Google Oneindia Kannada News

Japan Sony decides to cut 5000 jobs and exits PC market
ಟೋಕಿಯೋ, ಫೆ.7: ಜಾಗತಿಕ ಉದ್ಯಮ ರಂಗದಲ್ಲಿ ವಾರಾಂತ್ಯ ಆಘಾತಕಾರಿ ಸುದ್ದಿಯೊಂದು ಕೇಳಿಬಂದಿದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿ, ವಿಶ್ವದಾದ್ಯಂತ ಪ್ರಸಿದ್ಧಿಗೆ ಬಂದಿರುವ ಜಪಾನಿನ ಸೋನಿ ಕಂಪನಿಯು (Sony Corporation) 6750 ಕೋಟಿ ರೂ. ನಷ್ಟದ ಭೀತಿ ಎದುರಿಸುತ್ತಿದ್ದು, 5,000 ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಸೋನಿ ಕಂಪನಿ ಒಟ್ಟು 1,45,800 ಮಂದಿ ಉದ್ಯೋಗಿಗಳನ್ನು ಹೊಂದಿದೆ.

ನಾಲ್ಕು ವರ್ಷಗಳಿಂದ ನಷ್ಟದ ಹಾದಿಯಲ್ಲೇ ಇದ್ದ ಸೋನಿ ಕಂಪನಿ, ಕಳೆದ ವರ್ಷ ತುಸು ಚೇತರಿಕೆ ಕಂಡಿತ್ತು. ಆದರೆ ಈಗ ತನ್ನ ಅನೇಕ ಹೆಸರಾಂತ ವಿದ್ಯುನ್ಮಾನ ಉತ್ಪನ್ನಗಳ ಉತ್ಪಾದನೆಯನ್ನು ಸಹ ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ. ಮುಖ್ಯವಾಗಿ Vaio ಹೆಸರಿನ ಪರ್ಸನಲ್ ಕಂಪ್ಯೂಟರುಗಳ ಉತ್ಪಾದನೆಯನ್ನು ತಕ್ಷಣದಿಂದಲೇ ನಿಲ್ಲಿಸಲಿದೆ. bravia ಟಿವಿಯನ್ನು ಸಹ ಉತ್ಪಾದಿಸದಿರಲು ಸೋನಿ ನಿರ್ಧರಿಸಿದೆ.

ಇದು ವಿದ್ಯುನ್ಮಾನ ಉದ್ಯಮ ಮತ್ತು ಗ್ರಾಹಕ - ಎರಡೂ ಕಡೆಗೂ ನಿಜಕ್ಕೂ ಆಘಾತಕಾರಿ ಸಂಗತಿಯೇ. ಆದರೆ ಡಿಜಿಟಲ್ ಯುಗದಲ್ಲಿ ಬೇರೆ ಸ್ವರೂಪದಲ್ಲಿ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವುದಾಗಿ ಕಂಪನಿ ಹೇಳಿಕೊಂಡಿದೆ.

ತನ್ನ ಹುಟ್ಟೂರಾದ ಜಪಾನಿನಲ್ಲಿ 1,500 ಮಂದಿಯನ್ನು ಮತ್ತು ಭಾರತದಲ್ಲಿರುವ ಸೋನಿ ಉದ್ಯೋಗಿಗಳನ್ನೂ ಸೇರಿದಂತೆ ಒಟ್ಟು 5 ಸಾವಿರ ಮಂದಿಯನ್ನು ಸೋನಿ ಕಂಪನಿ ಅನಿವಾರ್ಯವಾಗಿ ಮನೆಗೆ ಕಳುಹಿಸಲು ನಿರ್ಧರಿಸಿದೆ. ಇದರಿಂದ ಮುಂದಿನ ಆರ್ಥಿಕ ವರ್ಷದಲ್ಲಿ ಕಂಪನಿಗೆ 6250 ಕೋಇಟ ರೂ. ಉಳಿತಾಯ ಮಾಡುವ ಯೋಜನೆ ಕಂಪನಿಯದ್ದಾಗಿದೆ.

ಅಮೆರಿಕದ ಆಪಲ್ ಮತ್ತು ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಂಪನಿಗಳು ಸೋನಿ ನಷ್ಟದ ಹಾದಿಯಲು ಸಾಗಲು ಕಾರಣವಾಗಿವೆ. ಕಂಪನಿಯ ಕ್ರೆಡಿಟ್ ರೇಟಿಂಗ್ ಸಹ ನಿರಾಶಾದಾಯಕವಾಗಿದೆ ಎಂದು ಇತ್ತೀಚೆಗೆ ಮೂಡೀಸ್ ರೇಟಿಂಗ್ ಸಂಸ್ಥೆ ತಿಳಿಸಿತ್ತು. ಜಪಾನಿನ Sharp ಮತ್ತು Panasonic ಕಂಪನಿಗಳೂ ಸಹ ಹೀಗೆಯೇ ಮಾರುಕಟ್ಟೆ ಸ್ಪರ್ಧೆಯನ್ನು ಎದುರಿಸಲಾಗದೆ ಇತಿಹಾಸದ ಪುಟ ಸೇರಿರುವುದು ಗಮನಾರ್ಹ.

English summary
Japan Sony decides to cut 5000 jobs and exits PC market. Sony has warned that it would book a $1.08 billion annual loss as it cuts 5,000 jobs and exits the stagnant PC market this year, as the once-mighty lectronics giant struggles to reinvent itself in the digital age. The shock news comes a week after Moody's downgraded its credit rating on Sony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X