ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SpaceX ನ ಚಂದ್ರಯಾನಕ್ಕೆ ರೆಡಿಯಾದ ಜಪಾನಿನ ಶ್ರೀಮಂತ ಉದ್ಯಮಿ

|
Google Oneindia Kannada News

ಟೋಕಿಯೋ, ಸೆಪ್ಟೆಂಬರ್ 20: ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಜಪಾನಿನ ಯುಸಾಕು ಮೆಯೆಜಾವಾ ಅವರು ಚಂದ್ರಯಾನ ಕೈಗೊಳ್ಳಲಿದ್ದು, ಈ ಸಾಧನೆ ಮಾಡುವ ಮೊದಲ ವ್ಯಕ್ತಿ ಅವರಾಗಲಿದ್ದಾರೆ.

ವಿಶ್ವದ ಶಕ್ತಿಶಾಲಿ ಫಾಲ್ಕನ್ ಹೆವಿ ರಾಕೆಟ್ ಯಶಸ್ವೀ ಉಡ್ಡಯನ ವಿಶ್ವದ ಶಕ್ತಿಶಾಲಿ ಫಾಲ್ಕನ್ ಹೆವಿ ರಾಕೆಟ್ ಯಶಸ್ವೀ ಉಡ್ಡಯನ

1972 ರ ನಂತರ ಮೊದಲ ಬಾರಿಗೆ ಯೋಜಿಸಲಾದ ಈ ಯಾನ 2023 ರಲ್ಲಿ ಆರಂಭವಾಗಲಿದೆ ಎಂದು ಮಸ್ಕ್ ತಿಳಿಸಿದ್ದಾರೆ.

ಈ ಕುರಿತು ಸ್ವತಃ ಎಲಾನ್ ಮಸ್ಕ್ ಮತ್ತು ಯುಸಾಕು ಮೆಯೆಜಾವಾ ತಿಳಿಸಿದ್ದಾರೆ. ಯುಸಾಕು ಜಪಾನಿನ ಅತಿದೊಡ್ಡ ಆನ್ ಲೈನ್ ಫ್ಯಾಶನ್ ಮಾಲ್ 'ಸ್ಟಾರ್ಟ್ ಟುಡೆ ಕೋ'ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದಾರೆ. ಅವರ ಆಸ್ತಿಯ ಮೌಲ್ಯ ಬರೋಬ್ಬರಿ 21,868 ಕೋಟಿ ರೂ.!

Japans Yusaku Maezawa to go to Moon through Elon Musks spaceX

'ನಾನು ಚಂದ್ರನಲ್ಲಿಗೆ ಹೋಗಲು ನಿರ್ಧರಿಸಿದ್ದೇನೆ' ಎಂದು ಯುಸಾಕು ಟ್ವೀಟ್ ಮಾಡಿದ್ದಾರೆ. ಯುಸಾಕು ಅವರನ್ನು ತಮ್ಮ ಹೆಗಲ ಮೇಲೆ ಹೊತ್ತ ಚಿತ್ರವನ್ನು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದು, 'ಯುಸಾಕು ಸಾಹಸೀ ಯುವಕ, ಅವರು ಈ ಯಾನಕ್ಕೆ ಹೋಗಲು ನಿರ್ಧರಿಸಿದ್ದು ನನಗೆ ಸಾಕಷ್ಟು ಸಂತಸ ತಂದಿದೆ' ಎಂದಿದ್ದಾರೆ.

ಜನವರಿ 3ರಂದು ಚಂದಿರನ ಅಂಗಳಕ್ಕೆ ಹಾರಲಿದೆ ಇಸ್ರೋ ಚಂದ್ರಯಾನ-2 ಜನವರಿ 3ರಂದು ಚಂದಿರನ ಅಂಗಳಕ್ಕೆ ಹಾರಲಿದೆ ಇಸ್ರೋ ಚಂದ್ರಯಾನ-2

ಟೆಸ್ಲಾ ಸಂಸ್ಥೆಯ ಸಂಸ್ಥಾಪಕರೂ ಆದ ಎಲಾನ್ ಮಸ್ಕ್, ಕಳೆದ ಫೆಬ್ರವರಿಯಲ್ಲಿ ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಫಾಲ್ಕನ್ ಹೆವಿಯನ್ನು ಉಡ್ಡಯನ ಮಾಡಿದ್ದರು. ಖಾಸಗೀ ಬಾಹ್ಯಾಕಾಶ ಕಂಪನೆಯಿಂದ ಈ ರಾಕೆಟ್ ಅನ್ನು ಉಡ್ಡಯನ ಮಾಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ಫಾಲ್ಕನ್ ಹೆವಿ ರಾಕೆಟ್ ಜೊತೆಯಲ್ಲಿ ಟೆಸ್ಲಾ ನಿರ್ಮಿಸಿದ ಚೆರ್ರಿ ಕೆಂಪು ಬಣ್ಣದ ಕಾರನ್ನೂ ಬಾಹ್ಯಾಕಾಶಕ್ಕೆ ಕಳಿಸಲಾಗಿತ್ತು!

English summary
Japan's richest businessman Yusaku Maezawa announced that he chooses to go to moon. Elon Musk's SpaceX company will arrange this Moon mission and journy will start from 2023,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X