ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಪ್ರಧಾನಿಗೆ ‘ಒಲಿಂಪಿಕ್ಸ್‌’ ಕಂಟಕ..! ಅಧಿಕಾರದಿಂದ ಕೇಳಗಿಳಿಯುತ್ತಾರಾ ರೈತನ ಮಗ..?

|
Google Oneindia Kannada News

ಜಗತ್ತೇ ಕಾದು ಕುಳಿತಿದ್ದ 'ಒಲಿಂಪಿಕ್ಸ್‌' ಮುಕ್ತಾಯವಾಗಿದೆ. ಅದರಲ್ಲೂ ಈ ಬಾರಿಯ ಒಲಿಂಪಿಕ್ಸ್‌ ಭಾರತದ ಪಾಲಿಗೆ ಎಂದೂ ಮರೆಯಲಾಗದ ಕ್ರೀಡಾಕೂಟ. ಹೀಗೆ ಇಡೀ ಪ್ರಪಂಚವೇ ಎಂಜಾಯ್ ಮಾಡಿದ್ದ ಜಗತ್ತಿನ ಬಹುದೊಡ್ಡ ಕ್ರೀಡಾಕೂಟ ಒಲಿಂಪಿಕ್ಸ್‌ನಿಂದ ಜಪಾನ್ ಪ್ರಧಾನಿ ಖುರ್ಚಿ ಅಲುಗಾಡುತ್ತಿದೆ. ಹೌದು, ಆಶ್ಚರ್ಯ ಎನಿಸಿದರೂ ಇದು ಸತ್ಯ. ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಜನರ ಆರೋಗ್ಯ ಕಡೆಗಣಿಸಿ ಒಲಿಂಪಿಕ್ಸ್‌ನ್ನು ಆಯೋಜನೆ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ಮೊಳಗುತ್ತಿದೆ.

ಅಲ್ಲದೆ ಯೋಶಿಹಿದೆ ಸುಗಾರ 'ಕೋವಿಡ್‌' ಕ್ರಮಗಳು ಉಪಯೋಗಕ್ಕೆ ಬರುತ್ತಿಲ್ಲ ಎಂಬ ಆರೋಪಗಳ ಬೆನ್ನಲ್ಲೇ ಜಪಾನ್ ಪ್ರಧಾನಿ 'ಪಟ್ಟ ತ್ಯಜಿಸಲು ಸಿದ್ಧ' ಎಂಬ ಸಂದೇಶ ಕೊಟ್ಟಿದ್ದಾರೆ. ಸೆ. 29ರಂದು ಲಿಬರಲ್ ಡೆಮಾಕ್ರಟಿಕ್ ಪಾರ್ಟಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಸುಗಾ ಪಕ್ಷದ ಕಾರ್ಯನಿರ್ವಾಹಕರಿಗೆ ತಿಳಿಸಿದ್ದಾರಂತೆ. ಸಂಸತ್ತಿನಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಗೆ ಬಹುಮತವಿದೆ. ಹೀಗಾಗಿ 'ಎಲ್‌ಡಿಪಿ' ಮುಖ್ಯಸ್ಥ ಜಪಾನ್‌ಗೆ ಹೊಸ ಪ್ರಧಾನಿಯಾಗಲಿದ್ದಾರೆ ಎಂದು ಲೆಕ್ಕಚಾರ ಹಾಕಲಾಗುತ್ತಿದೆ.

ಪೈಪೋಟಿ ನಡುವೆ ಸಾಧನೆ..!

ಪೈಪೋಟಿ ನಡುವೆ ಸಾಧನೆ..!

ಕಳೆದ ವರ್ಷ ಜಪಾನ್ ಪ್ರಧಾನಿ ಪಟ್ಟಕ್ಕೆ ಶಿಂಜೋ ಅಬೆ ರಾಜೀನಾಮೆ ನೀಡುತ್ತಿದ್ದಂತೆ, ಜಗತ್ತಿನ 3ನೇ ಬಲಿಷ್ಠ ಆರ್ಥಿಕ ರಾಷ್ಟ್ರದ ರಾಜಕೀಯ ವಿದ್ಯಾಮಾನ ಕುತೂಹಲ ಕೆರಳಿಸಿತ್ತು. ಖಾಲಿಯಿದ್ದ ಪಿಎಂ ಪಟ್ಟಕ್ಕೆ ಜಪಾನ್‌ನಲ್ಲಿ ಭರ್ಜರಿ ಪೈಪೋಟಿ ಕೂಡ ಏರ್ಪಟ್ಟಿತ್ತು. ಆದರೆ ಮೊದಲಿನಿಂದಲೂ ಯೋಶಿಹಿದೆ ಸುಗಾ ಮುಂಚೂಣಿಯಲ್ಲಿದ್ದ ಹೆಸರು ಹೀಗಾಗಿ ಸುಗಾ ಗೆದ್ದು ಬೀಗಿದ್ದರು. ಸುಗಾ ಜೊತೆಗೇ ಜಪಾನ್ ಉಪಪ್ರಧಾನಿ ತಾರೋ ಅಸೊ ಕೂಡ ಪಿಎಂ ಪಟ್ಟದ ರೇಸ್‌ನಲ್ಲಿ ಇದ್ದರು. ಅಂತಿಮವಾಗಿ ಯೋಶಿಹಿದೆ ಸುಗಾ ರೇಸ್‌ನಲ್ಲಿ ಗೆದ್ದು ಬೀಗಿದ್ದರು. ಸುಗಾ 377 ಮತ ಪಡೆದು ಪ್ರಧಾನಿ ಪಟ್ಟಕ್ಕೆ ಏರಿದ್ದರು. ಆದರೆ ಈಗ ದಿಢೀರ್ ರಾಜೀನಾಮೆಯ ಸುಳಿವು ನೀಡಿದ್ದಾರೆ.

ರೈತನ ಮಗ ಸುಗಾ, ಮುಂದಿನ ಜಪಾನ್ ಪ್ರಧಾನಿರೈತನ ಮಗ ಸುಗಾ, ಮುಂದಿನ ಜಪಾನ್ ಪ್ರಧಾನಿ

 ರೈತನ ಮಗ ‘ಸುಗಾ’..!

ರೈತನ ಮಗ ‘ಸುಗಾ’..!

1948ರ ಡಿಸೆಂಬರ್ 6ರಂದು ಹುಟ್ಟಿದ ಯೋಶಿಹಿದೆ ಸುಗಾ ಅವರಿಗೆ ಈಗ 72 ವರ್ಷ ವಯಸ್ಸು. ರೈತನ ಮಗ ಸುಗಾ ಸಾಕಷ್ಟು ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಗಾಚಿ ಎಂಬ ಜಪಾನ್‌ನ ಗ್ರಾಮೀಣ ಭಾಗದಲ್ಲಿ ಸುಗಾ ಅವರ ತಂದೆ ಸ್ಟ್ರಾಬೆರಿ ಕೃಷಿ ಮಾಡುತ್ತಿದ್ದರು. ಕಷ್ಟಪಟ್ಟು ತಮ್ಮ ಪದವಿ ಮುಗಿಸಿದ್ದ ಸುಗಾ ಹೊಸೈ ವಿವಿಯಿಂದ ಕಾನೂನು ಪದವಿ ಪಡೆದಿದ್ರು. ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದಲ್ಲಿ ಹಂತ ಹಂತವಾಗಿ ಮೇಲೆ ಬಂದಿದ್ದ ಯೋಶಿಹಿದೆ ಸುಗಾ ಪಕ್ಷದ ಅಧ್ಯಕ್ಷರಾಗಿ ಬಳಿಕ ಜಪಾನ್ ಪ್ರಧಾನಿಯೂ ಆದರು. ಇಷ್ಟೆಲ್ಲದರ ಮಧ್ಯೆ ಕೊರೊನಾ ಹಾಗೂ 'ಒಲಿಂಪಿಕ್ಸ್‌' ಕಾರಣಕ್ಕೆ ಸುಗಾ ವಿರುದ್ಧ ಜಪಾನ್‌ನಲ್ಲಿ ತೀವ್ರ ಆಕ್ರೋಶ ಮೊಳಗುತ್ತಿದೆ.

ಸಾವಿರ ಕನಸುಗಳ ಸರದಾರ..!

ಸಾವಿರ ಕನಸುಗಳ ಸರದಾರ..!

ಕರುಳಿನ ಕ್ಯಾನ್ಸರ್ ಹಿನ್ನೆಲೆ 2020ರ ಆಗಸ್ಟ್‌ನಲ್ಲಿ ಶಿಂಜೋ ಅಬೆ ಪಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಬೆ ಅವರಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಕೃಷಿಕನ ಮಗ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದರು. ಸುಗಾ ಚೀಫ್ ಕ್ಯಾಬಿನೆಟ್ ಸೆಕ್ರೆಟರಿ ರೀತಿಯ ಉನ್ನತ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದರು.ಹಿಂದಿನ ಪ್ರಧಾನಿ ಅಬೆ ಸರ್ಕಾರದಲ್ಲಿ ಪಳಗಿದ್ದರು. ಹೀಗಾಗಿ ಜಪಾನ್‌ನ ಭವಿಷ್ಯದ ಬಗ್ಗೆ ಯೋಶಿಹಿದೆಗೆ ಸಾಕಷ್ಟು ಕನಸುಗಳಿದ್ದವು. ಆದರೆ ಕೊರೊನಾ ಕಾರಣಕ್ಕೆ ಆ ಕನಸುಗಳು ಕನಸಾಗಿಯೇ ಉಳಿದವು. ಜಪಾನ್ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಹೋಗಿದೆ. ಸಹಜವಾಗಿ ಜನರ ಆಕ್ರೋಶ ಸುಗಾ ಆಡಳಿತದ ಮೇಲೆ ನೆಟ್ಟಿದೆ. ಹೀಗಾಗಿ ರಾಜೀನಾಮೆಯೇ ಕಡೇ ದಾರಿ ಎಂಬಂತೆ ಸುಗಾ ಪ್ರಧಾನಿ ಪಟ್ಟದಿಂದ ಕೆಳಗಿಳಿಯಲು ಸಿದ್ಧರಾಗಿದ್ದಾರೆ.

‘ಕೋವಿಡ್‌’ ಕ್ರಮಗಳು ಉಪಯೋಗಕ್ಕೆ ಬರುತ್ತಿಲ್ಲ

‘ಕೋವಿಡ್‌’ ಕ್ರಮಗಳು ಉಪಯೋಗಕ್ಕೆ ಬರುತ್ತಿಲ್ಲ

"ದೇಶದಲ್ಲಿ ಗಂಭೀರ ಪರಿಸ್ಥಿತಿ ಮುಂದುವರೆದಿದೆ. ಸದ್ಯಕ್ಕೆ ತೆಗೆದುಕೊಂಡಿರುವ ಕ್ರಮಗಳು ವೈರಸ್ ನಿಯಂತ್ರಣಕ್ಕೆ ಸಹಕಾರಿಯಾಗುವ ವಿಶ್ವಾಸವಿದೆ. ಒಸಾಕಾ, ಕ್ಯೋಟೊ, ಹ್ಯೋಗೊ, ಫುಕುವೊಕಾ, ಐಚಿ, ಜಿಫು, ಟೊಚಿಗಿ ಎಂಬ ಏಳು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬಾರ್ ಹಾಗೂ ರೆಸ್ಟೊರೆಂಟ್ ಗಳನ್ನು ರಾತ್ರಿ 8 ಗಂಟೆಗೇ ಮುಚ್ಚಲು ಆದೇಶಿಸಲಾಗಿದ್ದು, 70% ಜನರಿಗೆ ವರ್ಕ್ ಫ್ರಂ ಹೋಂ ಆಯ್ಕೆ ನೀಡಲಾಗಿದೆ" ಎಂದು ಸುಗಾ ಜನವರಿ ತಿಂಗಳಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Japan’s PM Yoshihide Suga steps down, setting stage to select new leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X