ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಸಂಕಷ್ಟದ ನಡುವೆಯೇ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ

|
Google Oneindia Kannada News

ಟೋಕಿಯೋ, ಆಗಸ್ಟ್ 28: ಅನಾರೋಗ್ಯ ಸಮಸ್ಯೆಯ ಕಾರಣದಿಂದ ಹುದ್ದೆ ತ್ಯಜಿಸುವುದಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಶುಕ್ರವಾರ ತಿಳಿಸಿದ್ದಾರೆ. ಜಪಾನ್‌ನ ಅತ್ಯಂತ ಸುದೀರ್ಘಾವಧಿ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಶಿಂಜೋ, ಅನೇಕ ಸವಾಲುಗಳ ನಡುವೆಯೂ ಜಪಾನ್‌ಅನ್ನು ಮೂರನೇ ಅತ್ಯಂತ ದೊಡ್ಡ ಆರ್ಥಿಕತೆಯ ದೇಶ ಎಂಬ ಕೀರ್ತಿಯನ್ನು ಉಳಿಸಿದ್ದಾರೆ.

'ನಾನು ಜನರಿಗಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೆ ಹೋದರೆ ನಾನು ಉತ್ತಮ ಪ್ರಧಾನಿಯಾಗಲು ಸಾಧ್ಯವಿಲ್ಲ. ನಾನು ನನ್ನ ಹುದ್ದೆಯಿಂದ ಕೆಳಕ್ಕಿಳಿಯಲು ನಿರ್ಧರಿಸಿದ್ದೇನೆ' ಎಂದು 65 ವರ್ಷದ ಅಬೆ, ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ತಿಂಗಳು ಮೋದಿ-ಶಿಂಜೋ ಸಭೆ: ಪ್ರಮುಖ ಸೇನಾ ಒಪ್ಪಂದಕ್ಕೆ ಸಹಿಮುಂದಿನ ತಿಂಗಳು ಮೋದಿ-ಶಿಂಜೋ ಸಭೆ: ಪ್ರಮುಖ ಸೇನಾ ಒಪ್ಪಂದಕ್ಕೆ ಸಹಿ

ಅಬೆ ಅವರ ರಾಜೀನಾಮೆ ಸುದ್ದಿ ಹರಡುತ್ತಿದ್ದಂತೆಯೇ ಜಪಾನ್ ಆರ್ಥಿಕ ವ್ಯವಸ್ಥೆಯಲ್ಲಿ ತಲ್ಲಣ ಉಂಟಾಗಿದೆ. ಜಪಾನ್‌ನ ಪ್ರಮುಖ ಷೇರುಪೇಟೆಗಳಲ್ಲಿ ಕುಸಿತ ಉಂಟಾಗಿದೆ. ನಿಕ್ಕೀ ಶೇ 2.12ರಷ್ಟು, ಟಾಪಿಕ್ಸ್ ಶೆಡ್ ಶೇ 1.00ರಷ್ಟು ಕುಸಿತ ಕಂಡಿದೆ. ಮುಂದೆ ಓದಿ.

ಇನ್ನೂ ಒಂದು ವರ್ಷದ ಅವಧಿ ಇತ್ತು

ಇನ್ನೂ ಒಂದು ವರ್ಷದ ಅವಧಿ ಇತ್ತು

ಅಬೆ ಅವರ ಅಧಿಕಾರಾವಧಿ 2021ರ ಸೆಪ್ಟೆಂಬರ್‌ಗೆ ಅಂತ್ಯಗೊಳ್ಳಲಿದೆ. ಶಿಂಜೋ ಅಬೆ ಕರುಳು ಸಂಬಂಧಿ ಕಾಯಿಲೆಯಿಂದ ಹಲವು ವರ್ಷಗಳ ಕಾಲ ಬಳಲಿದ್ದರು. ಒಂದು ವಾರದ ಅವಧಿಲ್ಲಿ ಇತ್ತೀಚೆಗೆ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. 2006ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿಯಾಗಿದ್ದಾಗ ಕೂಡ ಮರು ವರ್ಷ ಇದೇ ಸಮಸ್ಯೆಯಿಂದಾಗಿ ಅವರು ಹುದ್ದೆಯಿಂದ ಕೆಳಕ್ಕಿಳಿದಿದ್ದರು. ಶಿಂಜೋ ಅನಾರೋಗ್ಯ ಮರುಕಳಿಸಿದ್ದರಿಂದ ಅವರು ತಮ್ಮ ಅವಧಿ ಪೂರ್ಣಗೊಳ್ಳುವವರೆಗೂ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದು ಚರ್ಚೆಗೆ ಗ್ರಾಸವಾಗಿತ್ತು.

ಎರಡು-ಮೂರು ವಾರದಲ್ಲಿ ಹೊಸ ನಾಯಕ

ಎರಡು-ಮೂರು ವಾರದಲ್ಲಿ ಹೊಸ ನಾಯಕ

ಅಬೆ ರಾಜೀನಾಮೆ ಬಳಿಕ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದಲ್ಲಿ (ಎಲ್‌ಡಿಪಿ) ಪ್ರಧಾನಿ ಹುದ್ದೆಗೆ ತೀವ್ರ ಪೈಪೋಟಿ ನಡೆಯಲಿದೆ. ಎರಡು ಅಥವಾ ಮೂರು ವಾರಗಳಲ್ಲಿ ನಾಯಕನ್ನು ಆರಿಸಲಾಗುತ್ತದೆ. ಅಬೆ ಅವರ ಉಳಿದ ಅವಧಿಯನ್ನು ಹೊಸ ಪ್ರಧಾನಿ ನಿಭಾಯಿಸಲಿದ್ದಾರೆ.

ಲಡಾಖ್ ಆಯ್ತು ಈಗ ಜಪಾನ್‌ನಲ್ಲಿ ಚೀನಾ ಸೇನೆಯ ವರಸೆ ಶುರುಲಡಾಖ್ ಆಯ್ತು ಈಗ ಜಪಾನ್‌ನಲ್ಲಿ ಚೀನಾ ಸೇನೆಯ ವರಸೆ ಶುರು

ಅಬೆನಾಮಿಕ್ಸ್ ನೀತಿ

ಅಬೆನಾಮಿಕ್ಸ್ ನೀತಿ

ಪಕ್ಷದೊಳಗೆ ನಡೆಯುವ ಆಂತರಿಕ ಚುನಾವಣೆಯಲ್ಲಿ ಯಾರೇ ಜಯಗಳಿಸಿದರೂ ಅವರು, ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ಜಪಾನ್‌ನ ಆರ್ಥಿಕತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಬೆ ಅವರ 'ಅಬೆನಾಮಿಕ್ಸ್' ನೀತಿಗಳನ್ನು ಮುಂದುವರಿಸುವ ಸಾಧ್ಯತೆ ಇದೆ. ಆದರೆ ಸುದೀರ್ಘ ಕಾಲದಿಂದ ಅಬೆ ಜಪಾನ್ ಆಡಳಿತದಲ್ಲಿ ಮೂಡಿಸಿದ್ದ ಛಾಪನ್ನು ಉಳಿಸಿಕೊಳ್ಳುವುದು ಹೊಸ ನಾಯಕರಿಗೆ ಇರುವ ಪ್ರಮುಖ ಸವಾಲಾಗಿದೆ.

2007ರಲ್ಲಿ ರಾಜೀನಾಮೆ

2007ರಲ್ಲಿ ರಾಜೀನಾಮೆ

2006ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿದ್ದ ಶಿಂಜೋ ಅಬೆ, 2007ರಲ್ಲಿ ಅನಾರೋಗ್ಯದ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದರ ಜತೆಗೆ ಸಂಪುಟದಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರದ ಆರೋಪ ಮತ್ತು ಆಡಳಿತ ಪಕ್ಷದ ಚುನಾವಣೆಯಲ್ಲಿನ ಸೋಲು ಕೂಡ ರಾಜೀನಾಮೆಗೆ ಕಾರಣವಾಗಿದ್ದವು. 2012ರಲ್ಲಿ ಅವರು ಎರಡನೆಯ ಬಾರಿಗೆ ಅಧಿಕಾರ ಹಿಡಿದ ನಂತರ ಸತತ ಎಂಟು ವರ್ಷ ಪ್ರಧಾನಿಯಾಗಿದ್ದರು. ಈ ಮೂಲಕ ಜಪಾನ್‌ನ ಅತಿ ದೀರ್ಘಾವಧಿ ಪ್ರಧಾನಿ ಎನಿಸಿದ್ದರು.

English summary
Japan Prime Minister Shinzo Abe resigns citing health issue. He was the logest serving premier of Japan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X