ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಪ್ರಧಾನಿ ರಾಜೀನಾಮೆ: ಅನಾರೋಗ್ಯವೇ ಕಾರಣ?

|
Google Oneindia Kannada News

ಜಪಾನ್, ಆಗಸ್ಟ್ 23: ಜಪಾನ್ ಪ್ರಧಾನಿ ಆರೋಗ್ಯದಲ್ಲಿ ಭಾರಿ ಏರುಪೇರಾಗಿದ್ದು, ಶಿಂಜೋ ಅಬೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಜಪಾನ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Recommended Video

ಅಧಿಕಾರದಿಂದ ಕೆಳಗಿಳಿಯಲು ಮುಂದಾದ Japan's Prime Minister Shinzo Abe ? |Oneindia Kannada

ಇತ್ತೀಚೆಗಷ್ಟೇ ಅತ್ಯಂತ ದೀರ್ಘ ಅವಧಿಯವರೆಗೂ ಜಪಾನ್ ಪ್ರಧಾನಿ ಹುದ್ದೆ ನಿಭಾಯಿಸಿದ ಕೀರ್ತಿಗಳಿಸಿದ್ದ ಶಿಂಜೋ ಅಬೆ ಕುರಿತು ದಿಢೀರ್ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. 2012-20ರ ಮಧ್ಯೆ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿರುವ ಶಿಂಜೋ ಅಬೆ ಜಪಾನ್‌ ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಗೆ ಶ್ರಮಿಸಿದ್ದಾರೆ. ಶಿಂಜೋ ಅಬೆ 2 ವರ್ಷಗಳಿಂದ 'ಅಲ್ಸರೇಟಿವ್ ಕೊಲೈಟಿಸ್' ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸೋಂಕು ಬಂದರೆ ಜೀರ್ಣಾಂಗವ್ಯೂಹದಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಪದೇ ಪದೆ ಚಿಕಿತ್ಸೆಗೆ ತೆರಳುತ್ತಿದ್ದಾರೆ.

ಕೊರೊನಾ ವೈರಸ್ ಸಂಕಷ್ಟದ ನಡುವೆಯೇ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆಕೊರೊನಾ ವೈರಸ್ ಸಂಕಷ್ಟದ ನಡುವೆಯೇ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ

ಇದರಿಂದ ಸರ್ಕಾರದ ಕೆಲಸಗಳಿಗೂ ಅಡ್ಡಿಯಾಗುತ್ತಿದ್ದು, ಶಿಂಜೋ ಅಬೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಶಿಂಜೋ ಅಬೆ ಅಧಿಕಾರದ ಅವಧಿ 2021 ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದ್ದು, ಇನ್ನೂ 1 ವರ್ಷ ಬಾಕಿ ಇರುವಾಗಲೇ ಅಬೆ ರಾಜೀನಾಮೆ ನೀಡ್ತಾರಾ ಎಂಬುದು ಕುತೂಹಲ ಕೆರಳಿಸಿದೆ.

Japan PM Shinzo Abe Planning To Resign Over Health Problems


ಸುದ್ದಿಗೋಷ್ಠಿ ಕರೆದಿರುವ ಶಿಂಜೋ ಅಬೆ
ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5 ಗಂಟೆಗೆ ಶಿಂಜೋ ಅಬೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಶಿಂಜೋ ಅಬೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಧಾನಿಯಾಗಿ ಅಬೆ ಉತ್ತಮ ಆಡಳಿತ ನೀಡಿದ್ದರು, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜಪಾನ್‌ನಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದರು. ಇನ್ನು ಕೊರೊನಾ ವೈರಸ್ ನಿಯಂತ್ರಣದಲ್ಲಿ ಶಿಂಜೋ ಅಬೆ ತೋರಿದ ಚಾಕಚಕ್ಯತೆ ಇಡೀ ಜಗತ್ತಿನ ಗಮನ ಸೆಳೆದಿತ್ತು.

ಭಾರತದ ಪಾಲಿಗೆ ಬುಲೆಟ್ ಹೀರೋ!
ಶಿಂಜೋ ಅಬೆ ಕಾಲದಲ್ಲಿ ಭಾರತ ಹಾಗೂ ಜಪಾನ್‌ನ ಸಂಬಂಧ ಸಾಕಷ್ಟು ವೃದ್ಧಿಸಿದೆ. ಹಲವು ವಿಚಾರದಲ್ಲಿ ಜಪಾನ್ ಭಾರತಕ್ಕೆ ಸಹಕಾರ ನೀಡುತ್ತಿದೆ. ಭಾರತದ ಭವಿಷ್ಯ ಬದಲಿಸಬಲ್ಲ ಅಹಮದಾಬಾದ್ ಹಾಗೂ ಮುಂಬೈ ಬುಲೆಟ್ ರೈಲು ಯೋಜನೆಗೆ ಒಪ್ಪಂದ ನಡೆದಿದ್ದು ಕೂಡ ಅಬೆ ಕಾಲದಲ್ಲೇ. ಬುಲೆಟ್ ರೈಲು ಯೋಜನೆಗೆ ಜಪಾನ್ ತಂತ್ರಜ್ಞಾನದ ಜೊತೆಗೆ ಹಣದ ಸಹಾಯವನ್ನೂ ಮಾಡುತ್ತಿದೆ. ಇಬ್ಬರಿಗೂ ಸಮಾನ ಶತ್ರುವಾಗಿರುವ ಚೀನಾ ವಿರುದ್ಧದ ಹೋರಾಟದಲ್ಲೂ ಜಪಾನ್ ಭಾರತಕ್ಕೆ ಬೆಂಬಲವಾಗಿ ನಿಂತಿದೆ. ಇದೆಲ್ಲವನ್ನೂ ಅಬೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

English summary
Japan PM Shinzo Abe set to announce his resignation for health reasons. Shinzo Abe suffered for many years from ulcerative colitis, his condition is thought to have worsened recently,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X