ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವರ್‌ಫುಲ್‌ ಪಾಸ್‌ಪೋರ್ಟ್‌ ಶ್ರೇಯಾಂಕದಲ್ಲಿ ಜಪಾನ್‌ ನಂ.1

|
Google Oneindia Kannada News

ಟೋಕಿಯೋ, ಜುಲೈ, 20: ಜಪಾನ್, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾ ದೇಶಗಳು 2022ರ ಪಾಸ್‌ಪೋರ್ಟ್‌ಗಳ ಶ್ರೇಯಾಂಕದಲ್ಲಿ ಮೊದಲನೇ ಸ್ಥಾನದಲ್ಲಿವೆ. ಯುರೋಪಿಯನ್ ರಾಷ್ಟ್ರಗಳು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಲ್ಲೇ ಪಾಸ್‌ಪೋರ್ಟ್‌ ಶ್ರೇಯಾಂಕದಲ್ಲಿ ಎಲ್ಲಾ ದೇಶಗಳನ್ನು ಹಿಂದಿಕ್ಕುತ್ತಾ ಬಂದಿವೆ.

ವಿಶ್ವದ ಅತ್ಯಂತ ಪವರ್‌ಫುಲ್‌ ಪಾಸ್‌ಪೋರ್ಟ್‌ ಹೊಂದಿರುವ ದೇಶ ಯಾವುದು ಗೊತ್ತಾ? ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ ಹೆನ್ಲಿ ಸೂಚ್ಯಂಕ 2022ರ ಪ್ರಕಾರ ಜಪಾನ್‌ ಉತ್ತುಂಗದಲ್ಲಿದೆ. ಭಾರತ ಮಾತ್ರ ಗಣನೀಯವಾಗಿ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದು, 87ನೇ ಸ್ಥಾನಕ್ಕೆ ಇಳಿದಿದೆ. ರಷ್ಯಾ ಶ್ರೇಯಾಂಕದಲ್ಲಿ 50ನೇ ಸ್ಥಾನದಲ್ಲಿದ್ದು, 119 ರಾಷ್ಟ್ರಗಳಿಗೆ ಪ್ರವೇಶವನ್ನು ನೀಡುತ್ತದೆ. ಇನ್ನು ಅಫ್ಘಾನಿಸ್ತಾನದ ಪಾಸ್‌ಪೋರ್ಟನ್ನು ಬಳಸುವವರು ಕಡಿಮೆಯಿದ್ದು, ಇದು ಕೇವಲ 27 ದೇಶಗಳಿಗೆ ಮಾತ್ರ ಪ್ರವೇಶ ಕಲ್ಪಿಸಿದೆ. ಕೆಲವು ದೇಶಗಳಲ್ಲಿ ವಲಸೆ ಪ್ರಯಾಣ ಸಹಜ ಸ್ಥಿತಿಗೆ ಮರಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೆನ್ಲಿ ಮತ್ತು ಪಾಲುದಾರರ ಅಧ್ಯಕ್ಷ ಕ್ರಿಶ್ಚಿಯನ್ ಕೈಲಿನ್ ತಿಳಿಸಿದ್ದಾರೆ.

Japan is number one in the powerful passport ranking

ಭಾರತಕ್ಕಿಂತ ಚೀನಾ ಮುಂಚೂಣಿ
ಅಂತರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯಿಂದ ಮಾಹಿತಿ ಆಧಾರದಲ್ಲಿ ಹೆನ್ಲಿ ಮತ್ತು ಪಾಟ್ನರ್ಸ್‌ ಆಫ್‌ ಪಾಸ್‌ಪೋರ್ಟ್ಸ್ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಎಲ್ಲಾ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಯಾವುದೇ ಪೂರ್ವ ವೀಸಾ ಇಲ್ಲದೇ ಎಷ್ಟು ದೇಶಗಳಿಗೆ ಭೇಟಿ ಕೊಟ್ಟಿರಬಹುದು ಎನ್ನುವ ಲೆಕ್ಕದಲ್ಲಿ ಈ ಸೂಚ್ಯಂಕ ರೂಪಿಸಲಾಗಿದೆ. ಭಾರತೀಯ ಪಾಸ್‌ಪೋರ್ಟ್‌ ಶ್ರೇಯಾಂಕದಲ್ಲಿ 87ನೇ ಸ್ಥಾನದಲ್ಲಿದೆ. ಚೀನಾ ಭಾರತಕ್ಕಿಂತಲೂ ಮುಂಚೂಣಿಯಲ್ಲಿದ್ದು 69ನೇ ಸ್ಥಾನದಲ್ಲಿದೆ. ಜಪಾನ್‌ 193 ದೇಶಗಳಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದು, ಹಿಂದಿನಿಂದಲೂ ಮೊದಲ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ.

Japan is number one in the powerful passport ranking

ಭಾರತಕ್ಕೆ ಮುಕ್ತ ಪ್ರವೇಶ ಎಲ್ಲೆಲ್ಲಿ?
ಸೂಚ್ಯಂಕದ 2022ರ ಪ್ರಕಾರ ಅಫ್ಘಾನಿಸ್ತಾನ, ಅತ್ಯಂತ ಕೆಳಮಟ್ಟದ ಪಾಸ್‌ಪೋರ್ಟ್‌ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಪಾಸ್‌ಪೋರ್ಟ್ ಹೊಂದಿರುವವರು ಭೂತಾನ್‌, ನೇಪಾಳ , ಕಾಂಬೋಡಿಯಾ, ಇಂಡೋನೇಷ್ಯಾ, ಮೆಕಾವೊ, ಶ್ರೀಲಂಕಾ ಇನ್ನು ಮುಂತಾದ ದೇಶಗಳಿಗೆ ತೆರಳಲು ವೀಸಾದ ಅವಶ್ಯಕತೆ ಇಲ್ಲ. ಇನ್ನು ಬೇರೆ ಕಡೆಗೆ ಪ್ರವೇಶಿಸಿದ ಬಳಿಕ ವೀಸಾ ಪಡೆದುಕೊಳ್ಳಬೇಕಾಗುತ್ತದೆ.

Japan is number one in the powerful passport ranking

5 ಪವರ್‌ಫುಲ್‌ ಪಾಸ್‌ಪೋರ್ಟ್‌ ಹೊಂದಿರುವ ದೇಶಗಳು:

ಜಪಾನ್-193
ಸಿಂಗಪುರ, ದಕ್ಷಿಣ ಕೋರಿಯಾ-192
ಜರ್ಮನಿ, ಸ್ಪೇನ್‌-190
ಪಿನ್‌ಲ್ಯಾಂಡ್‌, ಇಟಲಿ, ಲಕ್ಸಂ ಬರ್ಗ್‌-189
ಆಸ್ಟ್ರೇಲಿಯಾ, ಡೆನ್ಮಾರ್ಕ್‌-188

Japan is number one in the powerful passport ranking

ಅತ್ಯಂತ ಕೆಳಮಟ್ಟದ ಪಾಸ್‌ಪೋರ್ಟ್‌ ಹೊಂದಿರುವ ದೇಶಗಳು:

ಅಫ್ಘಾನಿಸ್ತಾನ- 26
ಇರಾಕ್‌-28
ಸಿರಿಯಾ -29
ಪಾಕಿಸ್ತಾನ-39
ಯೆಮನ್‌-33

English summary
Japan, Singapore and South Korea have topped the 2022 passport rankings. As European countries recover from Covid, they have overtaken all countries in the passport ranking, Read more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X