ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಪ್ರವಾಹಕ್ಕೆ ತತ್ತರಿಸಿದ ಸೂರ್ಯ ಉದಯಿಸುವ ನಾಡು!

By Mahesh
|
Google Oneindia Kannada News

ಟೋಕಿಯೋ, ಜುಲೈ 08: ಸೂರ್ಯ ಉದಯಿಸುವ ನಾಡು ಜಪಾನಿನ ಹಿರೋಶಿಯಾ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಅಪಾರ ಸಾವು ನೋವು ಸಂಭವಿಸಿದೆ.

ಹಿರೋಶಿಮಾ ವಲಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಭಾರಿ ಪ್ರವಾಹ ಉಂಟಾಗಿದ್ದು, 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ಹಲವಾರು ಮಂದಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಕಳೆದ ಒಂದು ದಶಕದಲ್ಲೇ ಇಂಥ ಮಳೆ ಸುರಿದಿಲ್ಲ ಎನ್ನಲಾಗಿದೆ.

ಸರಿ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಸಮಯದ ಜತೆ ಸ್ಪರ್ಧೆಗಿಳಿದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶಿಂಜೋ ಅಭಿ ಹೇಳಿದ್ದಾರೆ.

ಮೊಟೋಯಾಮಾ ನಗರದಲ್ಲಿ ಹಾನಿ

ಮೊಟೋಯಾಮಾ ನಗರದಲ್ಲಿ ಹಾನಿ

ಜಪಾನ್ ರಾಜಧಾನಿ ಟೋಕಿಯೋದಿಂದ 600 ಕಿ.ಮೀ ದೂರದಲ್ಲಿರುವ ಮೋಟೋಯಾಮಾದಲ್ಲಿ ಶುಕ್ರವಾರ ಹಾಗೂ ಶನಿವಾರದಂದು ಸುಮಾರು 23 ಇಂಚಿನಷ್ಟು ಮಳೆ ದಾಖಲಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ವರದಿ ಮಾಡಿದೆ. ಇನ್ನು ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸೂಚನೆ ಸಿಕ್ಕಿದೆ.

ಕುರೆ: ಜಪಾನ್ನಿನ ನೈಋತ್ಯ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕ್ಯುಶು ಹಾಗೂ ಶಿಕೊಕು ದ್ವೀಪಗಳು ಸಂಪೂರ್ಣ ಜಲಾವೃತವಾಗಿವೆ.

ಭರದಿಂದ ಸಾಗಿರುವ ರಕ್ಷಣಾ ಕಾರ್ಯ

ಭರದಿಂದ ಸಾಗಿರುವ ರಕ್ಷಣಾ ಕಾರ್ಯ

ಹತ್ತು ಸಾವಿರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗಳು, ಪೊಲೀಸರು ಹಾಗೂ ಸೇನಾ ಪಡೆಗಳು ಅಗತ್ಯ ನೆರವಿಗೆ ಧಾವಿಸಿದ್ದು, ರಕ್ಷಣಾ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಿವೆ. ಆದರೆ, ಅನೇಕ ಕಡೆ ಭೂ ಕುಸಿತದಿಂದ ರಸ್ತೆಗಳು ಮುಚ್ಚಿ ಹೋಗುತ್ತಿವೆ. ಲಕ್ಷಾಂತರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

ಕುರಶಿಕಿ: ಹೈಸ್ಕೂಲಿನ ಗೋಡೆಗಳು ನೀರಿನಲ್ಲಿ ಆವೃತವಾಗಿರುವ ಚಿತ್ರ. ಒಕಯಾಮಾಭಾಗದ ಕುರಶಿಕಿಕುರಶಿಕಿ: ಹೈಸ್ಕೂಲಿನ ಗೋಡೆಗಳು ನೀರಿನಲ್ಲಿ ಆವೃತವಾಗಿರುವ ಚಿತ್ರ. ಒಕಯಾಮಾಭಾಗದ ಕುರಶಿಕಿಯಲ್ಲಿ ಭಾರಿ ಮಳೆ ಯಲ್ಲಿ ಭಾರಿ ಮಳೆ

ಕುರಶಿಕಿ: ಒಕಾಯಾಮದಲ್ಲಿ

ಕುರಶಿಕಿ: ಒಕಾಯಾಮದಲ್ಲಿ

ಒಕಾಯಾಮ ಭಾಗದ ಕುರಶಿಕಿ ನಗರದಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹಕ್ಕೆ ಮಳೆ, ಕಚೇರಿ, ಶಾಲೆಗಳು ಜಲಾವೃತವಾಗಿವೆ.

ಒಂದು ದಶಕದಲ್ಲೇ ಇಂಥ ಮಳೆ ಸುರಿದಿಲ್ಲ

ಸರಿ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

English summary
Japan floods: More than 80 killed in deluges and landslides after three days of torrential rain created flash flooding and landslides and also made rivers burst their banks
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X