• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನ್ ನಲ್ಲಿ ಹೊಸ ತಳಿಯ ರೂಪಾಂತರ ಕೊರೊನಾವೈರಸ್ ಹಾವಳಿ

|

ಟೋಕಿಯೋ, ಫೆಬ್ರವರಿ.19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿರುವ ಜಪಾನ್ ನಲ್ಲಿ ಹೊಸ ಸವಾಲು ಎದುರಾಗಿದೆ. ದೇಶದಲ್ಲಿ ರೂಪಾಂತರ ಕೊರೊನಾವೈರಸ್ ಹಾವಳಿ ಹೆಚ್ಚಿದೆ.

ಜಪಾನ್ ಪೂರ್ವ ಭಾಗದ ಕಾಂಟೋದಲ್ಲಿ 91 ಜನರಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ಇಬ್ಬರಿಗೆ ರೂಪಾಂತರ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ ಎಂದು ಸಂಪುಟದ ಮುಖ್ಯ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೋ ತಿಳಿಸಿದ್ದಾರೆ.

ಕೊವಿಡ್ 19: ಫೆ.19ರಂದು ಯಾವ ದೇಶದಲ್ಲಿ ಎಷ್ಟು ಮಂದಿ ಗುಣಮುಖ?ಕೊವಿಡ್ 19: ಫೆ.19ರಂದು ಯಾವ ದೇಶದಲ್ಲಿ ಎಷ್ಟು ಮಂದಿ ಗುಣಮುಖ?

ಹೊಸ ಪ್ರಬೇಧದ ಕೊರೊನಾವೈರಸ್ ಸೋಂಕು ಈ ಹಿಂದಿನ ಸಾಂಪ್ರದಾಯಿಕ ಸೋಂಕಿಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಬಹುದು. ದೇಶೀಯವಾಗಿ ಹೊಸ ತಳಿಯ ಸೋಂಕು ಶೀಘ್ರಗತಿಯಲ್ಲಿ ಹರಡುವ ಅಪಾಯ ಹೆಚ್ಚಾಗಿರುತ್ತದೆ ಎಂದು ಕ್ಯಾಟೋ ಹೇಳಿದ್ದಾರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸಾಂಕ್ರಾಮಿಕ ರೋಗಗಳ ಪ್ರಕಾರ, ಹೊಸ ತಳಿಯ ಕೊರೊನಾವೈರಸ್ ಸೋಂಕು ವಿದೇಶದಲ್ಲೇ ಹುಟ್ಟಿಕೊಂಡಿದೆ. ಆದರೆ ಜಪಾನ್‌ನಲ್ಲಿ ವಿರಳವಾಗಿ ಕಂಡುಬರುವ ಇತರೆ ತಳಿಗಿಂತಲೂ ಭಿನ್ನವಾಗಿದೆ. ಪ್ರೋಟೀನ್‌ನಲ್ಲಿ ಈ ವೈರಸ್ ಏರಿಕೆಯು E484K ರೂಪಾಂತರವನ್ನು ಹೊಂದಿರುವುದು ಇತರ ರೂಪಾಂತರಗಳಲ್ಲಿ ಕಂಡುಬಂದಿದೆ.

ಜಪಾನ್ ನಲ್ಲಿ ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮೂಲದ ರೂಪಾಂತರ ಕೊರೊನಾವೈರಸ್ 151 ಜನರಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ. ದೇಶದಲ್ಲಿ ಈವರೆಗೂ 40,000ಕ್ಕಿಂತ ಹೆಚ್ಚು ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಈವರೆಗೂ 71974 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಟೋಕಿಯೋ ವಲಸಿಗರ ಕೇಂದ್ರದಲ್ಲಿ 5 ಸಿಬ್ಬಂದಿ, 39 ವಿದೇಶಿಗರಲ್ಲಿ ರೂಪಾಂತರ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಸ್ಪಷ್ಟವಾಗಿದೆ. 130 ವಿದೇಶಿಗರಲ್ಲಿ ಸಾಂಪ್ರದಾಯಿತ ಸೋಂಕಿಗಿಂತ ಭಿನ್ನವಾದ ಸೋಂಕು ಪತ್ತೆಯಾಗಿದೆ.

English summary
Japan Finds New Coronavirus Strain, While Immigration Centre Reports Infections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X