• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನ್ ನಲ್ಲಿ ಏಕಾಏಕಿ ಏರಿದ ಕೊರೊನಾ ಪ್ರಕರಣ; ತುರ್ತು ಪರಿಸ್ಥಿತಿ ಘೋಷಣೆ

|

ಟೋಕಿಯೋ, ಜನವರಿ 13: ಕೊರೊನಾ ಸೋಂಕಿನ ಪ್ರಕರಣಗಳು ಏಕಾಏಕಿ ಏರಿಕೆಯಾದ ಬೆನ್ನಲ್ಲೇ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಬುಧವಾರ ಏಳು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿದ್ದಾರೆ. ವ್ಯವಹಾರ ಸಂಬಂಧಿತ ಉದ್ದೇಶದ ಹೊರತಾಗಿ ಜಪಾನ್ ಗೆ ವಿದೇಶಿಗರ ಪ್ರವೇಶವನ್ನು ಕೆಲವು ದಿನಗಳ ಕಾಲ ಸಂಪೂರ್ಣ ನಿಷೇಧಿಸಲಾಗುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಟೋಕಿಯೋ ಹಾಗೂ ಸಮೀಪದ ಮೂರು ಪ್ರಾಂತ್ಯಗಳಲ್ಲಿ ಕಳೆದ ವಾರವಷ್ಟೇ ತುರ್ತು ಪರಿಸ್ಥಿತಿ ಘೋಷಿಸಿದ್ದು, ಇದೀಗ ಮತ್ತೆ ಏಳು ಪ್ರಾಂತ್ಯಗಳಿಗೆ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಪಶ್ಚಿಮ ಹಾಗೂ ಮಧ್ಯ ಜಪಾನ್ ನ ಪ್ರಾಂತ್ಯಗಳು ಇವಾಗಿದ್ದು, ಫೆಬ್ರುವರಿ 7ರವರೆಗೂ ತುರ್ತು ಪರಿಸ್ಥಿತಿ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

ದೇಶದ ಎಲ್ಲಾ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಮಸೂದೆದೇಶದ ಎಲ್ಲಾ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಮಸೂದೆ

"ದೇಶದಲ್ಲಿ ಗಂಭೀರ ಪರಿಸ್ಥಿತಿ ಮುಂದುವರೆದಿದೆ. ಸದ್ಯಕ್ಕೆ ತೆಗೆದುಕೊಂಡಿರುವ ಕ್ರಮಗಳು ವೈರಸ್ ನಿಯಂತ್ರಣಕ್ಕೆ ಸಹಕಾರಿಯಾಗುವ ವಿಶ್ವಾಸವಿದೆ. ಒಸಾಕಾ, ಕ್ಯೋಟೊ, ಹ್ಯೋಗೊ, ಫುಕುವೊಕಾ, ಐಚಿ, ಜಿಫು, ಟೊಚಿಗಿ ಎಂಬ ಏಳು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬಾರ್ ಹಾಗೂ ರೆಸ್ಟೊರೆಂಟ್ ಗಳನ್ನು ರಾತ್ರಿ 8 ಗಂಟೆಗೇ ಮುಚ್ಚಲು ಆದೇಶಿಸಲಾಗಿದ್ದು, 70% ಜನರಿಗೆ ವರ್ಕ್ ಫ್ರಂ ಹೋಂ ಆಯ್ಕೆ ನೀಡಲಾಗಿದೆ" ಎಂದು ಸುಗಾ ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳಿಗೆ ಹೋಲಿಸಿದರೆ, ಸೋಂಕಿನ ಸಂಖ್ಯೆ ಹಾಗೂ ಮರಣ ಪ್ರಮಾಣ ದುಪ್ಪಟ್ಟಾಗಿದ್ದು, ಈ ಕಾರಣಕ್ಕೇ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. "ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆ ಹದಗೆಟ್ಟಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಆಸ್ಪತ್ರೆಗಳ ಮೇಲೂ ಒತ್ತಡ ಹೆಚ್ಚಾಗಿದೆ" ಎಂದು ಜಪಾನ್ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ತೋಷಿಯೋ ನಕಗಾವ ತಿಳಿಸಿದ್ದಾರೆ.

English summary
Japan extends its corona virus emergency to seven more provinces due to surge in cases,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X