ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹಾವಳಿ: ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

|
Google Oneindia Kannada News

ಟೋಕಿಯೋ, ಏಪ್ರಿಲ್ 7: ಕೊವಿಡ್-19 ಹಿನ್ನೆಲೆ ಯಲ್ಲಿ ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಜಪಾನ್ ಪ್ರಧಾನಿ ಶಿಂಜೋ ಅಬೆ ಒಂದು ತಿಂಗಳುಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಯುರೋಪ್ ರೀತಿಯಲ್ಲಿ ಲಾಕ್‌ಡೌನ್ ಮಾಡುತ್ತಿಲ್ಲ. ತುರ್ತು ಪರಿಸ್ಥಿತಿ ಕೇವಲ ಟೋಕ್ಯೋ ಗವರ್ನರ್ ಸೇರಿ ಇನ್ನೂ ಇತರೆ ಆರು ಮಂದಿಗೆ ಜವಾಬ್ದಾರಿ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಲಾಗಿದೆ.

Fact Check: ಕೊರೊನಾ ವೈರಸ್ ಕುರಿತು ಟ್ರೋಲ್ ಮಾಡಿದ್ರೆ ಕೇಸ್! Fact Check: ಕೊರೊನಾ ವೈರಸ್ ಕುರಿತು ಟ್ರೋಲ್ ಮಾಡಿದ್ರೆ ಕೇಸ್!

ಆದರೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರಿಗೆ ಯಾವುದೇ ದಂಡ ಹಾಕುವುದಿಲ್ಲ. ಸೋಂಕಿನ ವೇಗ ಹೆಚ್ಚುತ್ತಿರುವುದರಿಂದ ಈ ಕ್ರಮದ ಮೊರೆ ಅನಿವಾರ್ಯ ಎನಿಸುವಂಥ ಸ್ಥಿತಿ ಇದೆ. ಯುನೈಟೆಡ್‌ ಸ್ಟೇಟ್ಸ..., ಯುರೋಪ್‌ ಮತ್ತು ಚೀನ ಮತ್ತು ಇತರ ದೇಶಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ.

Japan Declare State Of Emergency Over Coronavirus Pandemic

ಈಗ ನಿಧಾನವಾಗಿದ್ದರೂ, ಆತಂಕ ಹೆಚ್ಚಿದೆ. ಕಳೆದ ವಾರವೇ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಸಾಧ್ಯತೆಯನ್ನು ಟೋಕಿಯೋ ಗವರ್ನರ್‌ ಯುರಿಕೊ ಕೊಯಿಕೆ ಅವರು ಉಲ್ಲೇಖೀಸಿದ್ದರು.

ಕೋವಿಡ್-19 ವೈರಸ್‌ ಅನ್ನು ತಡೆಗಟ್ಟಲು ಮಾರ್ಚ್‌ನಲ್ಲಿ ಪರಿಷ್ಕರಿಸಿದ ಕಾನೂನಿ ನಂತೆ ಈ ರೋಗವು ಜೀವಗಳಿಗೆ "ಗಂಭೀರ ಅಪಾಯ'ವನ್ನುಂಟು ಮಾಡಿ ದರೆ ಮತ್ತು ಅದರ ಶೀಘ್ರ ಹರಡು ವಿಕೆಯು ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರ ಬಹುದಾದರೆ ಪ್ರಧಾನ ಮಂತ್ರಿ ತುರ್ತು ಪರಿಸ್ಥಿತಿ ಯನ್ನು ಘೋಷಿಸ ಬಹುದು ಎಂದು ಹೇಳಿತ್ತು.

Fact Check: ಕೊರೊನಾ ಸೋಂಕಿತರ ಕಣ್ಗಾವಲಿಗೆ ಆರೋಗ್ಯ ಸೇತು App ಬಳಕೆ ?Fact Check: ಕೊರೊನಾ ಸೋಂಕಿತರ ಕಣ್ಗಾವಲಿಗೆ ಆರೋಗ್ಯ ಸೇತು App ಬಳಕೆ ?

ಟೋಕಿಯೊ ಮಹಾನಗರ ಪ್ರದೇಶದಲ್ಲಿ ಮೊದಲು ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಬಳಿಕ ಪಶ್ಚಿಮ ಜಪಾನ್‌ನ ಒಸಾಕಾ ಮತ್ತು ಹೊಗೊ ಪ್ರಾಂತ್ಯ ಗಳಲ್ಲೂ ಘೋಷಿಸಬಹುದಾಗಿದೆ.

ಜಪಾನ್‌ನಲ್ಲಿ 3,500ಕ್ಕೂ ಹೆಚ್ಚು ಜನರು ಪಾಸಿಟಿವ್‌ ಹೊಂದಿದ್ದಾರೆ. 85 ಮಂದಿ ಸಾವನ್ನಪ್ಪಿ ದ್ದಾರೆ. ಟೋಕಿಯೊ ಮತ್ತು ಇತರೆಡೆ ಗವರ್ನರ್‌ಗಳು ಈ ಹಿಂದೆ ನಾಗರಿಕರನ್ನು ವಾರಾಂತ್ಯ ದಲ್ಲಿ ಮನೆಯಲ್ಲಿಯೇ ಇರಲು, ಜನಸಂದಣಿ ಮತ್ತು ಸಂಜೆ ವಿಹಾರಕ್ಕೆ ಹೋಗದಂತೆ ಕೇಳಿಕೊಂಡಿತ್ತು. ಜನರು ತಮ್ಮ ಮನೆಯಿಂದ ಕೆಲಸ ಮಾಡಲು ಕೋರಿಕೊಂಡಿದ್ದರು.

ರಾಜ್ಯಪಾಲರಿಗೆ ವಿಶೇಷ ಅಧಿಕಾರ ದೊರೆಯಲಿದ್ದು ಎಲ್ಲರೂ ಮನೆಯೊಳಗೆ ಇರ ಬೇಕಾಗಿದ್ದು, ವ್ಯವಹಾರಗಳನ್ನು ಮುಚ್ಚಲು ಜನರಿಗೆ ಆದೇಶ ನೀಡಿದ್ದಾರೆ. ಆದರೆ ಇತರ ದೇಶಗಳಲ್ಲಿ ಕಂಡು ಬರುವ ರೀತಿಯ ಲಾಕ್‌ಡೌನ್‌ ಗಳನ್ನು ವಿಧಿಸಲಾಗುತ್ತಿಲ್ಲ. ಜನರು ಸರಕಾರದ ಸೂಚನೆಯನ್ನು ನಿರ್ಲಕ್ಷಿಸಿ ದರೆ ಯಾವುದೇ ದಂಡಗಳನ್ನು ಪಾವತಿಸ ಬೇಕಾಗಿ ಬರುವುದಿಲ್ಲ.

ತುರ್ತು ಪರಿಸ್ಥಿತಿಯಲ್ಲಿ ವ್ಯವಹಾರಗಳನ್ನು ಸಂಪೂರ್ಣ ನಿರ್ಬಂಧಿಸುವುದರಿಂದ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದಾಗಿದೆ. ಈಗಾಗಲೇ ಜಗತ್ತನ್ನು ಕಾಡುತಿರುವ ಹಿಂಜರಿತದಿಂದ ಹೊರಬರಲು ಹೆಣಗಾಡುತ್ತಿರುವ ಆರ್ಥಿಕತೆಗೆ ಭಾರೀ ಹೊಡೆತವನ್ನುಂಟು ಮಾಡಲಿದೆ.

English summary
Much of Japan will enter a state of emergency Tuesday, as the country struggles to rein in the coronavirus pandemic, months after the first domestic cases were reported. Japan Declared State Of Emergency Over Coronavirus Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X