ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆ ಹೆಚ್ಚಳ: ಜಪಾನ್‌ನಲ್ಲಿ ಒಂಟಿತನ ನಿವಾರಣೆಗೆ ಸಚಿವರ ನೇಮಕ

|
Google Oneindia Kannada News

ಟೋಕಿಯೋ,ಫೆಬ್ರವರಿ 23: ಜಪಾನ್‌ನಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ 'ಲೋನ್‌ಲಿನೆಸ್'(ಒಂಟಿತನ) ನಿವಾರಣೆಗೂ ಸಚಿವರನ್ನು ನೇಮಿಸಲಾಗಿದೆ. ಕಳೆದ 11 ವರ್ಷಗಳಲ್ಲಿಯೇ ಕೊರೊನಾ ಸೋಂಕಿನ ಸಂದರ್ಭದಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾನ ಹೆಚ್ಚಾಗಿದೆ.

ಪ್ರಧಾನಿ ಯೋಶಿಹಿದೆಸುಗಾ ಅವರು ಒಂಟಿತನ ನಿವಾರಿಸಿ, ಆತ್ಮಹತ್ಯೆ ತಡೆಯಲು ಹೊಸ ಖಾತೆಯೊಂದಿಗೆ ಸಚಿವರನ್ನು ನೇಮಕ ಮಾಡಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ನಲ್ಲಿ ಇಂತಹ ಸಚಿವರನ್ನು ನೇಮಿಸಲಾಗಿತ್ತು.

ತಂಗಿಗೆ ಐಸ್‌ಕ್ರೀಂ ತಂದಿಲ್ಲದಕ್ಕೆ ಪೋಷಕರು ಬೈದರು ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!ತಂಗಿಗೆ ಐಸ್‌ಕ್ರೀಂ ತಂದಿಲ್ಲದಕ್ಕೆ ಪೋಷಕರು ಬೈದರು ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!

ಜಪಾನ್‌ನಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ ಸೇರಿದಂತೆ ಆತ್ಮಹತ್ಯೆ ಪ್ರಮಾಣ ತಡೆಯುವ ಉದ್ದೇಶದಿಂದ ಸಮಸ್ಯೆ ನಿವಾರಿಸಲುಮತ್ತು ಕಾರ್ಯತಂತ್ರ ರೂಪಿಸಿ ಯೋಜನೆ ಜಾರಿಗೊಳಿಸುವ,ಸಾಮಾಜಿಕ ಒಂಟಿತನ ಮತ್ತು ಪ್ರತ್ಯೇಕತೆ ತಡೆಗಟ್ಟಲು ಜನರ ನಡುವಿನ ಸಂಬಂಧವನ್ನು ರಕ್ಷಿಸಲು ಚಟುವಟಿಕೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 Japan Appoints Loneliness Minister To Check Rising Suicide Rate: Report

ಒಂಟಿತನವು ಜಪಾನ್‌ನ ದೀರ್ಘಾವಧಿ ಸಮಸ್ಯೆಯಾಗಿತ್ತು,ಸಾಮಾಜಿಕ ವಾತಾವರಣದಿಂದ ಹೊರಗುಳಿದು ಒಂಟಿಯಾಗಿ ಬದುಕುವುದು ಜನರ ಕಷ್ಟವಾಗಿತ್ತು. ಈ ಸಮಸ್ಯೆಯಿಂದ ಹೊರ ಬರಲು ಹಲವು ಪರಿಹಾರಗಳನ್ನು ಜಪಾನ್ ಜನರು ಕಂಡುಕೊಂಡಿದ್ದರು.

ಆದರೆ ಅದ್ಯಾವುದೂ ಪೂರ್ಣ ಪ್ರಮಾಣದ ಪ್ರಯೋಜನ ನೀಡಿರಲಿಲ್ಲ, ಜಪಾನ್ ಎಂಜಿನಿಯರ್ಗಳು ಒಂಟಿಯಾಗಿರುವವರ ಕೈ ಹಿಡಿದು ಕುಳಿತುಕೊಳ್ಲುವ ರೋಬೋಟ್ ಒಂದನ್ನು ರಚಿಸಿದ್ದರು.

ಜಪಾನೀಸ್ ನ್ಯಾಷನಲ್ ಪೊಲೀಸ್ ಏಜೆನ್ಸಿ ಮಾಹಿತಿಯ ಪ್ರಕಾರ 2020 ಅಕ್ಟೋಬರ್ ವರೆಗೆ ಕೊರೊನಾದಿಂದ 1765 ಮಂದಿ ಮೃತಪಟ್ಟಿದ್ದರು. ಆತ್ಮಹತ್ಯೆಯಿಂದ ಮೃತಪಟ್ಟವರು 2153 ಮಂದಿ. ಆತ್ಮಹತ್ಯೆಯಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಿದೆ ಎಂದು ತಿಳಿದುಬಂದಿದೆ.

English summary
Japan has appointed its first Minister for Loneliness this month after the country's suicide rate increased for the first time in 11 years during the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X