• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಸಿಲ ಝಳ ಎದುರಿಸಲು ಜಪಾನಿಗರು ಐಡ್ಯಾ ಮಾಡ್ಯಾರ!

|

ಟೋಕಿಯೋ, ಆಗಸ್ಟ್ 9: ಪ್ರಕೃತಿ ವಿಕೋಪಕ್ಕೂ ಜಪಾನ್‌ಗೂ ಅವಿನಾಭಾವ ಸಂಬಂಧ. ಸುನಾಮಿ, ಭೂಕಂಪ, ಮಳೆ, ಚಳಿ, ಜ್ವಾಲಾಮುಖಿ ಹೀಗೆ ಎಲ್ಲವೂ ಅಲ್ಲಿ ವಿಪರೀತ ಎನ್ನುವಷ್ಟು ಹೆಚ್ಚೇ.

ಹಾಗೆಯೇ ಜಾಗತಿಕ ತಾಪಮಾನದ ಅಡ್ಡಪರಿಣಾಮದಿಂದಲೂ ಜಪಾನ್ ಹೊರತಾಗಿಲ್ಲ. ಅಲ್ಲಿನ ಜನರ ಶ್ವೇತವರ್ಣದ ಚರ್ಮವನ್ನು ಕಪ್ಪಡರಿಸುವಷ್ಟು ಪ್ರಖರವಾಗಿ ಸೂರ್ಯನ ಕಿರಣಗಳು ಜಪಾನ್‌ಅನ್ನು ಹೊಕ್ಕುತ್ತವೆ. ಈ ಸುಡುವ ಬಿಸಿಲ ಧಗೆಯಿಂದ ಜಪಾನಿಗರು ಈಗಲೇ ಕಂಗೆಟ್ಟಿದ್ದಾರೆ.

ಬಿಸಿ ಹವೆಯಲ್ಲಿ ಬೇಯುತ್ತಿದೆ ಜಪಾನ್: ವಾರಾಂತ್ಯದಲ್ಲಿ 14 ಬಲಿ

ಏಪ್ರಿಲ್‌ನಿಂದ ಆಗಸ್ಟ್ 5ರ ಅವಧಿಯಲ್ಲಿ ಸುಮಾರು 72 ಸಾವಿರ ಮಂದಿ ಬಿಸಿ ಗಾಳಿಯಿಂದ ತತ್ತರಿಸಿ ಆಸ್ಪತ್ರೆಗೆ ಸೇರಿದ್ದಾರೆ. ಅದರಲ್ಲಿ ಕನಿಷ್ಠ 138 ಮಂದಿ ಮೃತಪಟ್ಟಿದ್ದಾರೆ.

ಮನೆಯಲ್ಲಿ ಎಸಿ ಅಥವಾ ಪ್ಯಾನ್ ಇಲ್ಲದೆ ಬದುಕಲು ಅಸಾಧ್ಯ ಎನಿಸುವ ಸ್ಥಿತಿ ನಿರ್ಮಾಣವಾಗಿದೆ. ಬಾಗಿಲು ತೆರೆದೊಡನೆ ಬಿಸಿಯನ್ನು ಹೊತ್ತು ತಂದ ಗಾಳಿ ಮೈಯನ್ನು ಸುಡುತ್ತದೆ.

ಮೈಯನ್ನು ಕ್ಷಣಮಾತ್ರದಲ್ಲಿ ಒಣಗಿಸುವ ಬಿಸಿಗಾಳಿಯನ್ನು ಎದುರಿಸಲು ಜಪಾನಿಗರು ಶತಪ್ರಯತ್ನ ನಡೆಸಿದ್ದಾರೆ. ತೀರಾ ಹೊಸದೆನಿಸುವ ತಂತ್ರಜ್ಞಾನದಿಂದ ಶತಮಾನಗಳಷ್ಟು ಹಳೆಯ ಪದ್ಧತಿಗಳನ್ನು ಹುಡುಕಿ ತಾಪಮಾನದ ದಾಳಿಯನ್ನು ಎದುರಿಸಲು ನೂರೆಂಟು ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಕೃತಕ ಮಂಜಿನಹನಿ

ಕೃತಕ ಮಂಜಿನಹನಿ

ಟೋಕಿಯೋದ ಕೇಂದ್ರ ಭಾಗದ ಮರುನೌಚಿ ಪ್ರದೇಶದಲ್ಲಿ ಕೃತಕ ಮಂಜಿನಧಾರೆಯ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ರಾಜಧಾನಿ ಟೋಕಿಯೋದ ಅತ್ಯಂತ ದೊಡ್ಡ ವ್ಯಾಪಾರ ಕೇಂದ್ರವೆನಿಸಿಕೊಂಡಿರುವ ಮರುನೌಚಿಯಲ್ಲಿ ಪ್ರಮುಖ ಕಚೇರಿಗಳಿರುವ ಬೃಹತ್ ಕಟ್ಟಡಗಳಿವೆ. ಇಲ್ಲಿ ಉದ್ಯಮಿಗಳು, ವ್ಯಾಪಾರಿಗಳು ಮತ್ತು ಪ್ರವಾಸಿಗರ ಓಡಾಟ ಹೆಚ್ಚು. ಹೀಗಾಗಿ ಇಲ್ಲಿನ ರಸ್ತೆಗಳಲ್ಲಿ ಮಂಜಿನ ಸಾಧನಗಳನ್ನು ಅಳವಡಿಸಲಾಗಿದೆ.

ಇಲ್ಲಿ ಓಡಾಡುವ ಜನರ ಮೇಲೆ ಸಣ್ಣನೆ ತಂಪಾದ ಹನಿಗಳು ಬೀಳುತ್ತವೆ. ಇವು ಬಿಸಿ ಗಾಳಿಯ ಪ್ರಭಾವದಿಂದ ಜನರನ್ನು ರಕ್ಷಿಸುವುದಲ್ಲದೆ, ಹಿತಕರ ಅನುಭವ ನೀಡುತ್ತಿದೆ.

ನಗರಕ್ಕೆ ಮಾತ್ರ ಸೀಮಿತ

ನಗರಕ್ಕೆ ಮಾತ್ರ ಸೀಮಿತ

ಇಲ್ಲಿನ ಜನರಿಗೆ ಬೀದಿಗಳ ತುಂಬಾ ಆವರಿಸಿರುವ ಮಂಜು ಮುದ ನೀಡುತ್ತಿದೆ. ಆದರೆ ಈ ಸಾಧನ ಮರುನೌಚಿ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ನಗರದಾಚೆಗಿನ ಪ್ರದೇಶಗಳಿಗೂ ಇದನ್ನು ವಿಸ್ತರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಇನ್ನು ಕೆಲವು ನಗರ ಪ್ರದೇಶಗಳಲ್ಲಿ ರಸ್ತೆಗಳ ಬದಿಯಲ್ಲಿ ದೊಡ್ಡ ದೊಡ್ಡ ಮಂಜುಗಡ್ಡೆಯನ್ನು ತಂದು ಇರಿಸಲಾಗಿತ್ತಿದೆ. ಬಿಸಿಲಿಗೆ ಕರುಗುವವರೆಗೂ ಇಲ್ಲಿನ ಬೀದಿಗಳಲ್ಲಿ ಕೊಂಚಮಟ್ಟಿಗೆ ತಂಪು ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ಈಡೋ ಕಾಲದ ತಂತ್ರಜ್ಞಾನ

ಈಡೋ ಕಾಲದ ತಂತ್ರಜ್ಞಾನ

ಮಂಜಿನ ಹನಿಯಲ್ಲದೆ ಕಾದ ಭೂಮಿಯನ್ನು ತಂಪಾಗಿಸುವ ಮತ್ತೊಂದು ಪ್ರಯತ್ನವನ್ನೂ ನಡೆಸಲಾಗಿದೆ.

ನೆಲದ ಕಾವನ್ನು ಶಮನ ಮಾಡಲು ಅದಕ್ಕೆ ನೀರು ಹಾಯಿಸುವ 300 ವರ್ಷಗಳಷ್ಟು ಹಳೆಯದಾದ ಈಡೋ ಕಾಲಮಾನದ 'ಉಚಿಮಿಸು' ತಂತ್ರವನ್ನು ಬಳಸಲಾಗುತ್ತಿದೆ.

ಪಾತ್ರೆಗಳಲ್ಲಿ ನೀರು ತುಂಬಿಕೊಂಡು ಕಾದ ಭೂಮಿಗೆ ಸಣ್ಣನೆ ಸಿಂಪಡಿಸುವ ಮೂಲಕ ಉಷ್ಣಾಂಶವನ್ನು ತಗ್ಗಿಸಲಾಗುತ್ತಿದೆ. ಈಡೋ ಅವಧಿ (1600ನೇ ಇಸವಿ) ಇಂದಲೂ ಈ ಪದ್ಧತಿ ಜಪಾನ್‌ನಲ್ಲಿ ಚಾಲ್ತಿಯಲ್ಲಿದೆ.

ಒಲಿಂಪಿಕ್ಸ್‌ಗೆ ಸವಾಲು

ಒಲಿಂಪಿಕ್ಸ್‌ಗೆ ಸವಾಲು

2020ರ ಒಲಿಂಪಿಕ್ಸ್ ಆತಿಥ್ಯವನ್ನು ಜಪಾನ್ ವಹಿಸಿಕೊಂಡಿದೆ. ಇನ್ನು ಎರಡು ವರ್ಷಗಳಲ್ಲಿ ಜಪಾನ್ ತನ್ನ ನೆಲದ ಕಾವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಈ ಎರಡು ವರ್ಷದ ಅವಧಿಯಲ್ಲಿ ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ಹೆಚ್ಚಳವಾಗಲಿದೆ. ಬೇಸಗೆಯ ತೊಂದರೆ ಇದೇ ರೀತಿ ಮುಂದುವರಿದರೆ ಒಲಿಂಪಿಕ್ಸ್ ಸಂದರ್ಭದಲ್ಲಿ ಜಪಾನ್ ಸಂಕಷ್ಟ ಎದುರಿಸಬೇಕಾಗುತ್ತದೆ.

ಹಗಲಿನ ವೇಳೆಯ ವಿಸ್ತರಣೆ

ಹಗಲಿನ ವೇಳೆಯ ವಿಸ್ತರಣೆ

ಬಿಸಿಲಿನ ತಾಪ ಕಡಿಮೆ ಇರುವ ಅವಧಿಯಲ್ಲಿ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲು ಜಪಾನ್ ಸರ್ಕಾರ ಚಿಂತನೆ ನಡೆಸಿದೆ.

ಮಧ್ಯಾಹ್ನವಾದಂತೆ ಬಿಸಿಲ ತಾಪ ಹೆಚ್ಚಾಗಲಿದೆ. ಒಲಿಂಪಿಕ್ಸ್ ಅಥ್ಲೀಟ್‌ಗಳು ಈ ಬಿಸಿಲಿನಲ್ಲಿ ಆಡುವುದು ಕಷ್ಟ. ಜುಲೈ ಅಂತ್ಯ ಮತ್ತು ಆಗಸ್ಟ್‌ನಲ್ಲಿ ಕ್ರೀಡಾಕೂಟ ನಡೆಯಲಿದ್ದು, ಈ ಅವಧಿಯಲ್ಲಿಯೇ ಬಿಸಿಲು ಹೆಚ್ಚಾಗಿರಲಿದೆ. ಹೀಗಾಗಿ ಸ್ಥಳೀಯ ಕಾಲಮಾನದ ಸಮಯವನ್ನು ಎರಡು ಗಂಟೆ ಹೆಚ್ಚುವರಿಯಾಗಿ ಮುಂದಕ್ಕೆ ಇರಿಸಲು ಅದು ಉದ್ದೇಶಿಸಿದೆ.

ಇದರಿಂದ ಅಧಿಕಾರಿಗಳು ಎರಡು ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡುವ ಪ್ರಮೇಯ ಉಂಟಾಗಲಿದೆ. ಸಂಜೆ ಸೂರ್ಯ ಮುಳುಗಿದ ಬಳಿಕವೂ ಕೆಲಸ ಮುಂದುವರಿಸಬೇಕಾಗುತ್ತದೆ. ಈ 'ದಿನದ ಬೆಳಕಿನ ಉಳಿತಾಯ' ಯೋಜನೆಯನ್ನು ಜಪಾನ್ ಅಮೆರಿಕದೊಂದಿಗಿನ ಯುದ್ಧದ ಸಂದರ್ಭದಲ್ಲಿ ಅಳವಡಿಸಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Japan facing a unusual heat summer. It is incorporating several methods to reduce the temperature in streets.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more