ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

45 ಕೋಟಿಗೆ ಹರಾಜಾದ 54 ವರ್ಷ ಹಳೆಯ ಕಾರು: ಏನಿದರ ವಿಶೇಷತೆ?

|
Google Oneindia Kannada News

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 11: ಐವತ್ತನಾಲ್ಕು ವರ್ಷದ ಹಳೆಯ ಕಾರೊಂದು ಇತ್ತೀಚೆಗೆ 45 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಹರಾಜಾಗಿದೆ. ಕಾರಿಗೆ ಯಾವುದೇ ಚಿನ್ನದ ಲೇಪನವಾಗಲಿ, ವಜ್ರದ ಚಕ್ರಗಳಾಗಲಿ -ಇರಲಿಲ್ಲ, ಆದರೂ ಅಷ್ಟು ದೊಡ್ಡ ಬೆಲೆಗೆ ಅದು ಹರಾಜಾಗಿದೆ.

1965 ರಲ್ಲಿ ನಿರ್ಮಾಣವಾದ ಆಸ್ಟಿನ್ ಮಾರ್ಟಿನ್ ಕಾರು ಕೆಲವೇ ದಿನಗಳ ಹಿಂದೆ ಕ್ಯಾಲಿಫೋರ್ನಿಯಾದ ಮಾಂಟೆರೆರಿ ಎಂಬಲ್ಲಿ ಬರೋಬ್ಬರಿ 6.4 ಮಿಲಿಯನ್ ಡಾಲರ್‌ಗೆ ಹರಾಜಾಗಿದೆ. ಈ ಮೊತ್ತವನ್ನು ರೂಪಾಯಿಗೆ ಬದಲಾಯಿಸಿದರೆ ಬರೋಬ್ಬರಿ 45,85,05,600 ರೂಪಾಯಿ ಆಗುತ್ತದೆ.

ವೈರಲ್ ವಿಡಿಯೋ: ಏನಾಶ್ಚರ್ಯ, ಡ್ರೈವರ್ ನಿದ್ದೆಹೋದರೂ ಓಡುತ್ತಿತ್ತು ಕಾರು!ವೈರಲ್ ವಿಡಿಯೋ: ಏನಾಶ್ಚರ್ಯ, ಡ್ರೈವರ್ ನಿದ್ದೆಹೋದರೂ ಓಡುತ್ತಿತ್ತು ಕಾರು!

ಏನಿದರ ವಿಶೇಷತೆ ಎಂದರೆ, ಈ ಕಾರನ್ನು ಚಲಾಯಿಸಿದ್ದು ಜೇಮ್ಸ್‌ ಬಾಂಡ್ 007! ಹೌದು 1965 ರಲ್ಲಿ ತಯಾರಾದ ಜೇಮ್ಸ್‌ ಬಾಂಡ್ ಚಿತ್ರದಲ್ಲಿ ನಟಿಸಿದ್ದ ನಾಯಕ ಈ ಕಾರನ್ನು ಚಲಾಯಿಸಿದ್ದ ಹಾಗಾಗಿ ಈ ಕಾರಿಗೆ ಇಷ್ಟೊಂದು ಬೇಡಿಕೆ.

ಭಾರಿ ವಿಶೇಷತೆ ಹೊಂದಿದ ಕಾರು ಇದು

ಭಾರಿ ವಿಶೇಷತೆ ಹೊಂದಿದ ಕಾರು ಇದು

ಈ ಕಾರಿನ ವಿಶೇಷತೆಗಳ ಪಟ್ಟಿ ದೊಡ್ಡದೇ ಇದೆ. ಸಿನಿಮಾದಲ್ಲಿ ತೋರಿಸಿರುವಂತೆ ಕಾರಿನಲ್ಲಿನ ಬಟನ್ ಒತ್ತಿದ ಕೂಡಲೆ ಹಿಂಬದಿ ಗುಂಡು ನಿರೋಧಕ ಶೀಲ್ಡ್‌ ಮೇಲೆ ಬರುತ್ತದೆ. ಹಿಂಬದಿ ಬರುವ ಕಾರನ್ನು ಪಂಕ್ಚರ್ ಮಾಡಲು ಮೊಳೆಗಳನ್ನು ಬೀಳಿಸುತ್ತದೆ. ಆಯಿಲ್ ಅನ್ನು ರಸ್ತೆಯ ಮೇಲೆ ಸುರಿಯುತ್ತದೆ. ಬಟನ್ ಒತ್ತಿದ ಕೂಡಲೇ ನಂಬರ್ ಪ್ಲೇಟ್‌ ಗಳು ಚಕ-ಚಕನೇ ಬದಲಾಗುತ್ತವೆ. ಜೊತೆಗೆ ಶೂಟ್ ಸಹ ಮಾಡುತ್ತದೆ.

ಹಬ್ಬದ ಸೀಸನ್ ನಲ್ಲಿ ಕಾರು ಖರೀದಿ ಡಿಸ್ಕೌಂಟ್, ಆಫರ್, ಕಡಿಮೆ ಬಡ್ಡಿದರಹಬ್ಬದ ಸೀಸನ್ ನಲ್ಲಿ ಕಾರು ಖರೀದಿ ಡಿಸ್ಕೌಂಟ್, ಆಫರ್, ಕಡಿಮೆ ಬಡ್ಡಿದರ

ಈಗಲೂ ಎಲ್ಲವೂ ಕಾರ್ಯ ಮಾಡುತ್ತಿವೆ

ಈಗಲೂ ಎಲ್ಲವೂ ಕಾರ್ಯ ಮಾಡುತ್ತಿವೆ

ವಿಶೇಷವೆಂದರೆ ಈ ಎಲ್ಲ ಕಾರ್ಯಗಳನ್ನು ಈ ಕಾರು ನಿಜವಾಗಿಯೂ ಮಾಡಬಲ್ಲದು. ಮೇಲಿನ ಎಲ್ಲ ಯಾಂತ್ರಿಕ ಕ್ರಿಯೆಗಳನ್ನು ಈ ಕಾರು ಈಗಲೂ ಮಾಡುತ್ತದೆ. ಹಾಂ.. ಕಾರಿನ ಮುಂದಿನ ಹೆಡ್‌ ಲೈಟ್‌ಗಳ ಕೆಳಗೆ ಗನ್ನುಗಳು ಹೊರ ಬರುತ್ತವೆ ಆದರೆ ನಿಜವಾದ ಬುಲೆಟ್ ಉಗುಳುವ ಬದಲಿಗೆ ಶಬ್ದವನ್ನಷ್ಟೆ ಮಾಡುತ್ತವೆ. ಉಳಿದಂತೆ ಇನ್ನೆಲ್ಲ ಕಾರ್ಯಗಳು ಈಗಲೂ ಚಾಲ್ತಿಯಲ್ಲಿವೆ.

ಗೋಲ್ಡ್‌ಫಿಂಗರ್ ಮತ್ತು ಥಂಡರ್‌ಬಾಲ್ ಸಿನಿಮಾಕ್ಕಾಗಿ ನಿರ್ಮಾಣ

ಗೋಲ್ಡ್‌ಫಿಂಗರ್ ಮತ್ತು ಥಂಡರ್‌ಬಾಲ್ ಸಿನಿಮಾಕ್ಕಾಗಿ ನಿರ್ಮಾಣ

ಗೋಲ್ಡ್‌ಫಿಂಗರ್ ಮತ್ತು ಥಂಡರ್ ಬಾಲ್ ಎಂಬ ಜೇಮ್ಸ್‌ ಬಾಂಡ್ ಸಿನಿಮಾಗಳಲ್ಲಿ ಥೇಟ್ ಇದೇ ಮಾದರಿಯ ಕಾರುಗಳನ್ನು ಬಳಸಲಾಗಿತ್ತು. ಈಗ ಹರಾಜಾಗಿರುವ ಕಾರನ್ನು ಪ್ರಮೋಷನ್ ಉದ್ದೇಶದಿಂದ ತಯಾರು ಮಾಡಲಾಗಿತ್ತು. ಹಾಗಾಗಿಯೇ ಪೂರ್ಣವಾಗಿ ಎಲ್ಲ ಕಾರ್ಯಗಳು ಮಾಡುವಂತೆಯೇ ಈ ಕಾರನ್ನು ತಯಾರಿಸಲಾಗಿತ್ತು. ಇದನ್ನು ಬ್ರಿಟನ್‌ನಿಂದ ಅಮೆರಿಕಕ್ಕೆ ಸಹ ಕೊಂಡೊಯ್ಯಲಾಗಿತ್ತು.

ಐಎಂಎ ಹಗರಣ; ಧೂಳು ತಿನ್ನುತ್ತಿವೆ ಮನ್ಸೂರ್ ಐಷಾರಾಮಿ ಕಾರು!ಐಎಂಎ ಹಗರಣ; ಧೂಳು ತಿನ್ನುತ್ತಿವೆ ಮನ್ಸೂರ್ ಐಷಾರಾಮಿ ಕಾರು!

ಕಾರು ಕೊಂಡವನ ಹೆಸರು ಬಹಿರಂಗ ಇಲ್ಲ

ಕಾರು ಕೊಂಡವನ ಹೆಸರು ಬಹಿರಂಗ ಇಲ್ಲ

ಆಸ್ಟಿನ್ ಮಾರ್ಟಿನ್ ಡಿಬಿ5 ಮಾದರಿಯ ಈ ಕಾರು ಈವರೆಗೆ ಹರಾಜಾದ ಬಾಂಡ್ ಕಾರುಗಳಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಹರಾಜಾದ ಕಾರು. ಕಾರನ್ನು ಕೊಂಡವರ ಹೆಸರನ್ನು ಗೌಪ್ಯವಾಗಿಡಲಾಗಿದೆ. ಇದೇ ಕಾರಿನ ಜೊತೆಗೆ ಇನ್ನೊಂದು ಕಾರನ್ನೂ ಸಹ ತಯಾರಿಸಲಾಗಿತ್ತು. ಅದನ್ನು ಈಗ ನೆದರ್‌ಲ್ಯಾಂಡ್‌ನ ಮ್ಯೂಸಿಯಂ ಒಂದರಲ್ಲಿ ಇಡಲಾಗಿದೆ.

English summary
James Bond's Aston Martin car auction for 6.4 million dollars in California. Its manufactured in 1965.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X