ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮೈಕಾ ಲೇಖಕ ಮರ್ಲೋನ್ ಜೇಮ್ಸ್ ಗೆ ಬೂಕರ್ ಪ್ರಶಸ್ತಿ

By Vanitha
|
Google Oneindia Kannada News

ಜಮೈಕಾ, ಅಕ್ಟೋಬರ್, 14 : ಸಾಹಿತ್ಯ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಯಾದ 'ಮ್ಯಾನ್ ಬುಕರ್ ಪ್ರಶಸ್ತಿ-2015' ಜಮೈಕಾ ಲೇಖಕ ಮರ್ಲೋನ್ ಜೇಮ್ಸ್ ಎಂಬಾತ ಭಾಜನರಾಗಿದ್ದು, ಅಕ್ಟೋಬರ್ 14ರ ಬುಧವಾರದಂದು ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಲೇಖಕ ಮರ್ಮೋನ್ ಜೇಮ್ಸ್ ಬರೆದ 'ಎ ಬ್ರೀಫ್ ಹಿಸ್ಟರಿ ಆಫ್ ಸವೆನ್ ಕಿಲ್ಲಿಂಗ್ಸ್' ಎಂಬ ಬೃಹತ್ತಾದ ಕಾದಂಬರಿಗೆ ಬೂಕರ್ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿಗೆ ಪಾತ್ರವಾದ ಜಮೈಕಾದ ಮೊದಲ ಲೇಖಕ.[ಬೆಲಾರಸ್ ಲೇಖಕಿ ಸ್ವೆಟ್ಲಾನಾಗೆ ಸಾಹಿತ್ಯ ನೊಬೆಲ್]

Jamaica Author Marlon James has won the 2015 Man Booker Prize

'ಎ ಬ್ರೀಫ್ ಹಿಸ್ಟರಿ ಆಫ್ ಸವೆನ್ ಕಿಲ್ಲಿಂಗ್ಸ್' ಎಂಬ ಕಾದಂಬರಿಯು 1970ರಲ್ಲಿ ಬಾಬ್ ಮರ್ಲೆ ಅವರ ಹತ್ಯೆ ಯತ್ನದ ಮೇಲೆ ಬೆಳಕು ಚೆಲ್ಲುತ್ತದೆ. ಇದು ಕ್ರೈಂ ಆಧಾರಿತ ಕಾದಂಬರಿಯಾಗಿದ್ದು, ಹಳೆಯ ಇತಿಹಾಸದ ಮೂಲಕ ಇಂದಿನ ಜಮೈಕಾ ರಾಜಕೀಯದ ವಾಸ್ತವ ಜಗತ್ತಿನ ಕುರಿತಾಗಿ ಹೇಳಲು ಹೊರಡುತ್ತದೆ.

ಒಟ್ಟಿನಲ್ಲಿ ಈ ಕಾದಂಬರಿಯು ಓದುಗರಿಗೆ ಕುತೂಹಲ, ಆತಂಕ, ಅತಿಯಾದ ಹಿಂಸೆ ಇನ್ನಿತರ ಅಂಶಗಳನ್ನು ಉಣಬಡಿಸಲಿದೆ. ಈ ಕಾದಮಬರಿಯನ್ನು ಆಯ್ಕೆ ಮಾಡಲು ಕಷ್ಟಕರವಾಗಿಲ್ಲ. ಇದು ನಮ್ಮ ಅವಿರೋಧ ಆಯ್ಕೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯ ತೀರ್ಪುಗಾರರಾದ ಮಕೇಲ್ ವುಡ್ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ಮೂಲದ ಬ್ರಿಟಿಷ್ ಲೇಖಕ ಸಂಜೀವ್ ಸಹೋತಾ ಹಾಗೂ ಇತರ 4 ಅಂತರಾಷ್ಟ್ರೀಯ ಲೇಖಕರ ಕೃತಿಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಜೀವ್ ಅವರ 'ದ ಇಯರ್ ಆಫ್ ರುನಾವೇಸ್' ಕೃತಿ ಸ್ಪರ್ಧೆಯಲ್ಲಿ ನಿಂತಿತ್ತು.

English summary
Jamaica Author Marlon James has won the 2015 Man Booker Prize for his epic novel, 'A Brief History Of Seven Killings' on Wednesday, October 14th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X