ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಇಡೀ ವಿಮಾನವನ್ನೇ ಬುಕ್ ಮಾಡಿಕೊಂಡ ಪ್ರಯಾಣಿಕ

|
Google Oneindia Kannada News

ಜಕಾರ್ತಾ, ಜನವರಿ 8: ಕೊರೊನಾ ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಿದ್ದರೂ ಅನೇಕರು ಸೋಂಕಿಗೆ ತುತ್ತಾಗಿದ್ದಾರೆ. ಹೀಗಿರುವಾಗ ತಮ್ಮ ವ್ಯವಹಾರ ಕೆಲಸಗಳಿಗಾಗಿ ಸದಾ ಪ್ರಯಾಣಿಸುತ್ತಿರಬೇಕಾದವರ ಪಾಡೇನು? ಕೋವಿಡ್ ಮಾರ್ಗಸೂಚಿಗಳಲ್ಲಿನ ನಿಯಮಗಳು ಸಡಿಲಿಕೆಯಾದಂತೆಯೇ ಅನೇಕರು ಲಭ್ಯವಿರುವ ವಿಮಾನ ವ್ಯವಸ್ಥೆಗಳನ್ನು ಬಳಸಿಕೊಂಡು ಓಡಾಟ ಅರಂಭಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರು ಮಾಸ್ಕ್, ಪಿಪಿಇ ಕಿಟ್, ಶೀಲ್ಡ್ ಧರಿಸಿ ತಮ್ಮನ್ನು ವೈರಸ್‌ನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆದರೆ, ಇಂಡೋನೇಷ್ಯಾದ ಜಕಾರ್ತಾದ ವ್ಯಕ್ತಿಯೊಬ್ಬರು ವಿನೂತನ ಮಾರ್ಗ ಅನುಸರಿಸಿದ್ದಾರೆ. ತನ್ನ ಹಾಗೂ ತನ್ನ ಸಂಗಾತಿಯನ್ನು ವೈರಸ್‌ನಿಂದ ರಕ್ಷಿಸಿಕೊಳ್ಳಲು ವಿಮಾನದಲ್ಲಿ ಬೇರೆ ಯಾವ ಪ್ರಯಾಣಿಕರೂ ಬರದಂತೆ ಇಡೀ ವಿಮಾನವನ್ನೇ ಬುಕ್ ಮಾಡಿಕೊಂಡಿದ್ದಾರೆ.

ಮಾಡೆರ್ನಾ ಲಸಿಕೆಯು ಎಷ್ಟು ವರ್ಷಗಳ ಕಾಲ ಕೊರೊನಾವೈರಸ್‌ನಿಂದ ರಕ್ಷಣೆ ನೀಡಬಹುದು?ಮಾಡೆರ್ನಾ ಲಸಿಕೆಯು ಎಷ್ಟು ವರ್ಷಗಳ ಕಾಲ ಕೊರೊನಾವೈರಸ್‌ನಿಂದ ರಕ್ಷಣೆ ನೀಡಬಹುದು?

ವೈರಸ್ ಬಗ್ಗೆ ಭೀತಿ ಹೊಂದಿದ್ದ ರಿಚರ್ಡ್ ಮುಲ್ಜಾದಿ ಎಂಬುವವರು ಬಾಲಿಗೆ ಪ್ರಯಾಣಿಸಲು ಸಂಪೂರ್ಣ ವಿಮಾನವನ್ನೇ ಬುಕ್ ಮಾಡಿಕೊಂಡಿದ್ದರಂತೆ. ತಮಗೆ ಹಾಗೂ ತಮ್ಮ ಪತ್ನಿ ಶಲ್ವಿನ್ನೆ ಚಾಂಗ್ ಅವರಿಗಾಗಿ ವಿಮಾನದ ಎಲ್ಲ ಆಸನಗಳನ್ನೂ ಬುಕ್ ಮಾಡಿದ್ದಾಗಿ ಮುಲ್ಜಾದಿ ಅವರು ಜನವರಿ 4ರಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೊಂಡಿದ್ದರು. ಖಾಲಿವಿಮಾನದಲ್ಲಿ ಮುಲ್ಜಾದಿ ಅವರು ಕುಳಿತ ಫೋಟೊವನ್ನು ಕೂಡ ಹಂಚಿಕೊಂಡಿದ್ದರು. ವೈರಸ್‌ನಿಂದ ಕಾಪಾಡಿಕೊಳ್ಳಲು ಈ ಕ್ರಮ ಅನುಸರಿಸಿದ್ದಾಗಿ ತಿಳಿಸಿದ್ದರು.

Jakarta Man Richard Muljadi Books Entire Flight To Protect Himself And Wife From Covid-19

'ನಾನು ಎಷ್ಟು ಸಾಧ್ಯವೋ ಅಷ್ಟು ಸೀಟ್‌ಗಳನ್ನು ಬುಕ್ ಮಾಡಿಕೊಂಡ ಬಳಿಕ ಗೊತ್ತಾಗಿದ್ದೇನೆಂದರೆ ಖಾಸಗಿ ಜೆಟ್ ಅನ್ನು ಹೊಂದುವುದಕ್ಕಿಂತ ಇದೇ ಅಗ್ಗ. ಇದು ಒಳ್ಳೆಯ ತಂತ್ರ' ಎಂದು ಅವರು ಹೇಳಿಕೊಂಡಿದ್ದಾರೆ.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ತಮ್ಮೊಂದಿಗೆ ಬರುವ ಇತರೆ ಪ್ರಯಾಣಿಕರು ವೈರಸ್ ಹೊತ್ತು ತರುವ ಅಪಾಯವಿರುವುದರಿಂದ ಅವರು ತಮ್ಮಿಬ್ಬರಿಗಾಗಿಯೇ ವಿಮಾನ ಬುಕ್ ಮಾಡಿಕೊಂಡಿದ್ದಾರೆ. ವಿಮಾನದಲ್ಲಿ ತಮ್ಮಿಬ್ಬರ ಹೊರತು ಯಾವ ಪ್ರಯಾಣಿಕರೂ ಇರಬಾರದು ಎನ್ನುವುದನ್ನು ನೋಡಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

 ವೈರಸ್ ವಿರುದ್ಧ ಲಸಿಕೆಗಳು 100% ರಕ್ಷಣೆ ಕೊಡುವುದಿಲ್ಲ; ತಜ್ಞರ ಎಚ್ಚರಿಕೆ ವೈರಸ್ ವಿರುದ್ಧ ಲಸಿಕೆಗಳು 100% ರಕ್ಷಣೆ ಕೊಡುವುದಿಲ್ಲ; ತಜ್ಞರ ಎಚ್ಚರಿಕೆ

ಲಯನ್ ಏರ್ ಗ್ರೂಪ್‌ನ ಸ್ಥಳೀಯ ಪತ್ರಿಕೆ ಡೆಟಿಕ್ ಟ್ರಾವೆಲ್ ಜಕಾರ್ತಾದಿಂದ ಬಾಲಿಯ ಡೆನ್ಪಸಾರ್‌ಗೆ ವಿಮಾನದಲ್ಲಿ ಈ ಇಬ್ಬರು ಮಾತ್ರವೇ ತೆರಳಿದ್ದರು. ಆದರೆ ಇಬ್ಬರು ಪ್ರಯಾಣಿಕರು ಮಾತ್ರವೇ ಟಿಕೆಟ್ ಖರೀಸಿದ್ದರು ಎಂದು ಹೇಳಿದೆ. ದುಂದುವೆಚ್ಚಕ್ಕೆ ಹೆಸರಾದ ಮುಲ್ಜಾದಿ ಕುರಿತು ತಿಳಿದವರು ಅವರ ಹೇಳಿಕೆ ನಿಜವಾಗಿರುತ್ತದೆ ಎಂದಿದ್ದಾರೆ.

English summary
Jakarta man Richard Muljadi booked an entire flight during his travel to Bali to protect himself and his wife from Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X