• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ. 1ರಂದು ಜಾಗತಿಕ ಲಿಂಗಾಯತ ಮಹಾಸಭಾ ಸಾಗರೋತ್ತರ ಶಾಖೆ ಆರಂಭ

|

ಬೆಂಗಳೂರು, ಅ. 29: ಜಾಗತಿಕ ಲಿಂಗಾಯತ ಮಹಾಸಭಾ ಸಾಗರೋತ್ತರ ಶಾಖೆ ಪ್ರಾರಂಭೋತ್ಸವ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವದಂದು ನವೆಂಬರ್ 1 ರಂದು ಸಂಜೆ 7ಕ್ಕೆ ನಡೆಯಲಿದೆ ಎಂದು ಸಾಗರೋತ್ತರ ಶಾಖೆಯ ಪದಾಧಿಕಾರಿಗಳಾದ ಚಂದ್ರಶೇಖರ ಲಿಂಗದಳ್ಳಿ(ದುಬೈ), ಬಸವಾ ಪಾಟೀಲ(ಇಂಗ್ಲೆಂಡ್) ತಿಳಿಸಿದ್ದಾರೆ. ವಿಶ್ವದಲ್ಲೆಡೆ ವಿವಿಧ ವೃತ್ತಿಗಳಲ್ಲಿರುವ ಲಿಂಗಾಯತ ಸಮುದಾಯದವರನ್ನು ಒಗ್ಗೂಡಿಸಿ, ಬಸವಾದಿ ಶರಣ ಸಂಸ್ಕೃತಿಯಂತೆ ಮುನ್ನೆಡೆಸುವ ವೇದಿಕೆಯಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಸಾಗರೋತ್ತರ ಶಾಖೆ ಕಾರ್ಯನಿರ್ವಹಿಸಲಿದೆ ಎಂದು ಅವರು ವಿವರಿಸಿದರು.

ಗದಗ ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಸಾನಿಧ್ಯ ವಹಿಸಲಿದ್ದು, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.

ಉದ್ಘಾಟನಾ ಸಂದರ್ಭದಲ್ಲಿ ಹಿರಿಯ ಲಿಂಗಾಯತ ನಾಯಕ, ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್, ಚಿಂತಕ ರಂಜಾನ್ ದರ್ಗಾ, ಸಾಹಿತಿ ವಿರಣ್ಣ ರಾಜೂರ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐ.ಎ.ಎಸ್. ಅಧಿಕಾರಿ ಶಿವಾನಂದ ಜಾಮದಾರ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ.

ಆನ್‌ಲೈನ್‌ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೂಮ್ ಆ್ಯಪ್ (826 0983 9254 Passcode 316453), ಫೇಸ್‍ಬುಕ್ ಲಿಂಕ್: fb.com/NewsKarnataka/live ಹಾಗೂ ಯುಟ್ಯೂಬ್ ಲಿಂಕ್: YouTube.com/NewsKarnataka ಗಳಿಗೆ ಲಾಗಿನ್ ಆಗಲು ಲಿಂಗಾಯತ ಮಹಾಸಭಾದ ಸಾಗರೋತ್ತರ ಶಾಖೆ ವಿನಂತಿಸಿದೆ.

English summary
Jagatika Lingayata Mahasabha Overseas Branch Opening Ceremony will be held on November 1 at 7 pm at the Kannada Rajyotsava day said office bearers Chandrasekhar Lingadalli (Dubai) and Basava Patil (UK). Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X