ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್‌ ಜುಮಾ ರಾಜೀನಾಮೆ

By Mahesh
|
Google Oneindia Kannada News

ಜೋಹಾನ್ಸ್ ಬರ್ಗ್, ಫೆಬ್ರವರಿ 15: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್‌ ಜುಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

'ನಾನು ರಿಪಬ್ಲಿಕ್ (ದಕ್ಷಿಣ ಆಫ್ರಿಕಾದ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ' ಎಂದು ರಾಷ್ಟ್ರೀಯ ಮಾಧ್ಯಮಗಳ ಮುಂದೆ ಜಾಕೊಬ್‌ ಜುಮಾ ಘೋಷಿಸಿದ್ದಾರೆ. ಈ ಮೂಲಕ9 ವರ್ಷಗಳ ಬಳಿಕ ಜುಮಾ ಅಧಿಕಾರ ಅಂತ್ಯವಾಗಿದೆ.

Jacob Zuma resigns as South Africa's president

ಅಧ್ಯಕ್ಷೀಯ ಸ್ಥಾನದ ಕುರಿತು ಆಡಳಿತಾರೂಢ ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ (ಎಎನ್‌ಸಿ)ನಲ್ಲಿ ಭಾರಿ ಬಿಕ್ಕಟ್ಟು ಉಂಟಾಗಿತ್ತು. ಸಂಸತ್ತಿನಲ್ಲಿ ಜಾಕೊಬ್‌ ಜುಮಾ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ರತಿಪಕ್ಷಗಳು ಮುಂದಾಗಿದ್ದವು. ಜುಮಾ ಅವರಿಗೆ ಹುದ್ದೆ ತೊರೆಯಲು 48 ಗಂಟೆಗಳ ಗಡುವು ನೀಡಲಾಗಿತ್ತು.

2019ರ ಚುನಾವಣೆಯೊಂದಿಗೆ ಜುಮಾ ಅಧಿಕಾರಾವಧಿ ಕೊನೆಗೊಳ್ಳುತ್ತಿತ್ತು. ಸಿರಿಲ್ ರಾಮಫೋಸಾ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಭಾರಿ ಆಗ್ರಹ ಕೇಳಿ ಬಂದಿತ್ತು. ಈ ಬಗ್ಗೆ ಎಎನ್ ಸಿ ಕೂಡಾ ಒಲವು ತೋರಿತ್ತು.

ವರ್ಣಭೇದ ನೀತಿಯ ವಿರುದ್ಧ ತಿರುಗಿ ಬಿದ್ದು ಹೋರಾಟ ನಡೆಸಿದ್ದ ಜುಮಾ ಅವರು ಯುವಕರಾಗಿದ್ದಾಗಲೇ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದವರು. 75 ವರ್ಷದ ಜುಮಾ ಅವರ ನಿರ್ಗಮನದ ನಂತರ ಮುಂದಿನ ಅಧ್ಯಕ್ಷರ ಆಯ್ಕೆ ತನಕ ರಾಮಫೋಸಾ ಅವರು ಮಧ್ಯಂತರ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

2005ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ಜುಮಾ ಅವರು ನಂತರ ಪ್ರಕರಣದಿಂದ ಖುಲಾಸೆಗೊಂಡಿದ್ದರು.

English summary
With the ruling African National Congress (ANC) planning to side with opposition parties in Parliament, South African President Jacob Zuma resigned from the position today(Feb 15).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X