ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!

|
Google Oneindia Kannada News

ರೋಮ್, ಮಾರ್ಚ್ 20: ಇಟಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಇಲ್ಲಿಯವರೆಗೆ ಇಟಲಿಯಲ್ಲಿ 3405 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಬಲಿಯಾಗಿದ್ದಾರೆ. ಇಲ್ಲಿಯ ಸಾವಿನ ಪ್ರಮಾಣ ಕೊರೊನಾದ ಹುಟ್ಟೂರಾದ ಚೀನಾವನ್ನೂ ಮೀರಿಸಿದೆ.!

ಅಂಕಿ ಅಂಶಗಳ ಪ್ರಕಾರ, ಒಟ್ಟು 41,035 ಜನ ಸೋಂಕು ಪೀಡಿತರಾಗಿದ್ದಾರೆ. ರೋಗ ಹರಡುವುದರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ಇಟಲಿ ರಾಷ್ಟ್ರ ಎಡವಿದ್ದೇ ಸಾವಿನ ಪ್ರಮಾಣ ಏರಿಕೆಗೆ ಕಾರಣವಾಗಿದೆ.

ಇಟಲಿಯಲ್ಲಿ ಸಿಲುಕಿರುವ 400 ಕನ್ನಡಿಗರ ರಕ್ಷಣೆಯತ್ತ ಸರ್ಕಾರ ಚಿತ್ತಇಟಲಿಯಲ್ಲಿ ಸಿಲುಕಿರುವ 400 ಕನ್ನಡಿಗರ ರಕ್ಷಣೆಯತ್ತ ಸರ್ಕಾರ ಚಿತ್ತ

ಚೀನಾದಲ್ಲಿ 80,967 ಸೋಂಕು ಪೀಡಿತರ ಪ್ರಕರಣಗಳಿದ್ದರೂ, ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಚೀನಿಯರು ಕ್ರಮ ಕೈಗೊಂಡಿದ್ದರು. ಈ ಹಿನ್ನಲೆಯಲ್ಲಿ ಚೀನಾದಲ್ಲಿ ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಸದ್ಯ ಮೃತರ ಸಂಖ್ಯೆ 3,248 ರಷ್ಟಾಗಿದೆ.

ಒಂದು ವಾರದಲ್ಲಿ ಹೆಚ್ಚು ಜನ ಬಲಿ

ಒಂದು ವಾರದಲ್ಲಿ ಹೆಚ್ಚು ಜನ ಬಲಿ

ಕಳೆದ ಒಂದು ವಾರದಿಂದ ಇಟಲಿಯಲ್ಲಿ ಸಾವಿನಪ್ಪುವರ ಸಂಖ್ಯೆ ಏರುಗತಿ ಕಂಡಿದೆ. ಮಾರ್ಚ್ 13 ರ ಒಂದೇ ದಿನ 250 ಮಂದಿ ಕೊರೊನಾಗೆ ಬಲಿಯಾಗಿದ್ದರು. ಇದಾದ ಬಳಿಕ ಮಾರ್ಚ್ 15 ರಂದು ಮತ್ತೆ ಬೆಚ್ಚಿ ಬೀಳಿಸಿದ್ದ ಕೊರೊನಾ 368 ಮಂದಿಯನ್ನ ಬಲಿಪಡೆದುಕೊಂಡಿತ್ತು. ಮತ್ತೆ ತನ್ನ ಕರಾಳತೆಯನ್ನು ಪ್ರದರ್ಶಿಸಿದ ಕೋವಿಡ್-19 ಮಹಾಮಾರಿ, ಮಾರ್ಚ್ 18 ರಂದು 475 ಮಂದಿಯ ಪ್ರಾಣವನ್ನು ನುಂಗಿಹಾಕಿದೆ.

2498 ಮಂದಿ ಪರಿಸ್ಥಿತಿ ಗಂಭೀರ

2498 ಮಂದಿ ಪರಿಸ್ಥಿತಿ ಗಂಭೀರ

ಇದರ ಬೆನ್ನಲ್ಲೆ ಮತ್ತೊಂದು ಆತಂಕಕಾರಿ ವಿಚಾರ ಇಟಲಿಯಲ್ಲಿ ದಾಖಲಾಗಿದೆ. ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುವಂತೆಯೇ, ರೋಗದಿಂದ ಚಿಂತಾಜನಕ ಸ್ಥಿತಿ ತಲುಪಿರುವವರ ಸಂಖ್ಯೆಯೂ ಕಳವಳ ಹುಟ್ಟಿಸುವಂತಿದೆ. 2498 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಪರಿಸ್ಥಿತಿಯೂ ಗಂಭೀರವಾಗಿದೆ.

ಇಟಲಿಯಲ್ಲಿ ಒಂದೇ ದಿನ ಕೊರನಾದಿಂದ 368 ಮಂದಿ ಸಾವುಇಟಲಿಯಲ್ಲಿ ಒಂದೇ ದಿನ ಕೊರನಾದಿಂದ 368 ಮಂದಿ ಸಾವು

ಸಮಾಧಾನಕರ ಸಂಗತಿ

ಸಮಾಧಾನಕರ ಸಂಗತಿ

ಇಷ್ಟೆಲ್ಲಾ ಆತಂಕದ ನಡುವೆಯೂ ಇಟಲಿಗರು ಸಮಾಧಾನ ಪಡುವ ವಿಚಾರ ಒಂದಿದೆ. ಅದೇನೆಂದರೆ, 41,035 ರೋಗ ಪೀಡಿತರಲ್ಲಿ ಇಲ್ಲಿಯವರೆಗೂ 4440 ಮಂದಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದು ಸಾವಿನ ಮನೆಯೊಳಗಿನಿಂದ ಜೀವಸೆಲೆಯೊಂದನ್ನು ಹುಟ್ಟಿಸಿದೆ. ರೋಗ ಮತ್ತಷ್ಟು ಹರಡದಂತೆ ತಡೆಯಲು ಇಟಲಿ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

ಚೀನಾದಲ್ಲಿ ಪರಿಸ್ಥಿತಿ ಸುಧಾರಣೆ

ಚೀನಾದಲ್ಲಿ ಪರಿಸ್ಥಿತಿ ಸುಧಾರಣೆ

ಕೊರೊನಾದ ತವರು ಚೀನಾದಲ್ಲೀಗ ಪರಿಸ್ಥಿತಿ ಕೊಂಚ ಸುಧಾರಣೆಯಾಗಿದ್ದು, 80,967 ಕೊರೊನಾ ಪೀಡಿತರಲ್ಲಿ 71,150 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಚೀನಾದಲ್ಲೀಗ ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿರುವುದು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗಿದೆ. ಕೊರೊನಾ ಮೊದಲು ಕಾಣಿಸಿಕೊಂಡಿದ್ದ ವುಹಾನ್ ನಲ್ಲಿ ಮೊನ್ನೆ ಯಾವುದೇ ಹೊಸ ಕೊರೊನಾ ಸೋಂಕಿತ ಪ್ರಕರಣ ದಾಖಲಾಗದಿರುವುದು ನಿಟ್ಟುಸಿರು ಬಿಡುವ ಸಂಗತಿ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ವಿಶ್ವದಾದ್ಯಂತ ಇಲ್ಲಿಯವರೆಗೂ 245,629 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ ಈಗಾಗಲೇ 10,048 ಮಂದಿ ಮೃತಪಟ್ಟಿದ್ದು, 88,437 ಮಂದಿ ಸಾವನ್ನೇ ಗೆದ್ದು ಬಂದಿದ್ದಾರೆ. 7,378 ಮಂದಿ ಇನ್ನೂ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಒಂದೇ ದಿನದಲ್ಲಿ ಕೊರೊನಾಗೆ 250 ಮಂದಿ ಬಲಿ: ತತ್ತರಿಸಿದ ಇಟಲಿ!ಒಂದೇ ದಿನದಲ್ಲಿ ಕೊರೊನಾಗೆ 250 ಮಂದಿ ಬಲಿ: ತತ್ತರಿಸಿದ ಇಟಲಿ!

English summary
Italy surpasses China in number of Coronavirus deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X